ದುರ್ಗಮ್ಮ ಗುಡಿ ಹತ್ತಿರದ ಒಳ ಸೇತುವೆ ಅಗಲೀಕರಣಕ್ಕೆ ಆಗ್ರಹ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.17:  ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ಹತ್ತಿರ ಇರುವ ಒಳ ಸೇತುವೆ ಅಗಲೀಕರಣ ಕಾಮಗಾರಿ ಕೆಲಸವನ್ನು ಸೇತುವೆಯ ಯಾವ ಕಡೆ ಅಂದರೆ ಎಸ್.ಪಿ. ಆಫೀಸ್ ಕಡೆನಾ ಅಥವಾ ಹಳೇ ಕೋರ್ಟ್ ಕಡೆನಾ ಎನ್ನುವುದು ಸ್ಥಳ ನಿಗಧಿಪಡಿಸಿ, ಆದಷ್ಟು ಬೇಗ ರೈಲ್ವೇ ಅಧಿಕಾರಿಗಳಿಗೆ ಆದೇಶ ಪತ್ರವನ್ನು ನೀಡುವಂತೆ ಯುವಸೇನಾ ಸೋಶಿಯಲ್ ಯಾಕ್ಷನ್ ಕ್ಲಬ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದೆ.
ಈ ಹಿಂದಿನ ಜಿಲ್ಲಾಧಿಕಾರಿಗಳ ಆದೇಶದಂತೆ ಹಿಂದಿನ ಬಿಜೆಪಿ ನಾಯಕರು ಆಗಿನ ನಗರ ಶಾಸಕರು, ಉಸ್ತುವಾರಿ ಸಚಿವರು ಮತ್ತು ಬುಡಾ ಅಧ್ಯಕ್ಷರ ನೇತೃತ್ವದಲ್ಲಿ ದಿನಾಂಕ: 17.11.2022 ರಂದು ನಗರಾಭಿವೃದ್ಧಿ ಪ್ರಾಧಿಕಾರದಿಂದ ರೂ.8,84,12,616-00ಗಳಷ್ಟು ಮೊತ್ತವನ್ನು ಆಗಿನ ಬುಡಾ ಅಧ್ಯಕ್ಷರು ಡಿ.ಡಿ. ಮುಖಾಂತರ ರೈಲ್ವೇ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಆದರೆ ಆಗಿನ ಆಡಳಿತ ನಾಯಕರು ಮತ್ತು ಜಿಲ್ಲಾಧಿಕಾರಿಗಳು ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ಹತ್ತಿರ ಇರುವ ಒಳ ಸೇತುವೆ ಅಗಲೀಕರಣ ಕಾಮಗಾರಿ ಕೆಲಸವನ್ನು ಸೇತುವೆಯ ಯಾವ ಕಡೆ ಕೆಲಸ ಮಾಡಬೇಕೆಂಬುವುದರ ಆದೇಶ ಪತ್ರವನ್ನು ರೈಲ್ವೇ ಅಧಿಕಾರಿಗಳಿಗೆ ನೀಡಿರುವುದಿಲ್ಲ. ಆದ್ದರಿಂದ ರೈಲ್ವೇ ಅಧಿಕಾರಿಗಳು ಒಳ ಸೇತುವೆ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭ ಮಾಡುವುದರಲ್ಲಿ ವಿಳಂಬ ಮಾಡಿದ್ದಾರೆ.
ಕಾರಣ ತಾವುಗಳು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ, ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ಹತ್ತಿರ ಇರುವ ಒಳ ಸೇತುವೆ ಅಗಲೀಕರಣ ಕಾಮಗಾರಿ ಕೆಲಸವನ್ನು ಸೇತುವೆಯ ಯಾವ ಕಡೆ ಅಂದರೆ ಎಸ್.ಪಿ. ಆಫೀಸ್ ಕಡೆನಾ ಅಥವಾ ಹಳೇ ಕೋರ್ಟ್ ಕಡೆನಾ ಎನ್ನುವುದು ಸ್ಥಳ ನಿಗಧಿಪಡಿಸಿ, ಆದಷ್ಟು ಬೇಗ ರೈಲ್ವೇ ಅಧಿಕಾರಿಗಳಿಗೆ ಆದೇಶ ಪತ್ರವನ್ನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಯುವಸೇನ ಸೊಶಿಯಲ್ ಯಾಕ್ಷನ್ ಕ್ಲಬ್ ನ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ, ಕಾರ್ಯಕರ್ತರುಗಳಾದ ಎಸ್.ಕೃಷ್ಣ, ಜಿ.ಎಂ. ಭಾಷ, ಪಿ.ಶ್ರೀನಿವಾಸರೆಡ್ಡಿ, ಉಪ್ಪಾರ ಮಲ್ಲಪ್ಪ ಶ್ರೀನಿವಾಸರೆಡ್ಡಿ. ಎಂ, ಎಂ.ಕೆ.ಜಗನ್ನಾಥ, ಪಿ.ನಾರಾಯಣ, ಕೆ.ವೆಂಕಟೇಶ, ಎಂ. ಅಭಿಷೇಕ್ ಮತ್ತು ಇತರರು ಇದ್ದರು.