ಹೆಣ್ಣು ಅಬಲೆ ಅಲ್ಲ ಸಬಲೆ: ಕೀರ್ತಿ
ತಾಳಿಕೋಟೆ:ಮಾ.10: ಮಹಿಳೆ ಸಹನೆ ಶೀಲತೆ ತ್ಯಾಗಮಯಿ ಗುಣ ಅಳವಡಿಸಿಕೊಂಡಿದ್ದರಿಂದ ದೇಶದ ಜನ ಮಮತೆಯಿಂದ ಮಾತೆ ಎಂದು ಪೂಜಿಸುವ ರೂಪ ಪಡೆದಿದ್ದಾಳೆ. ಮನೆಯ ಜವಾಬ್ದಾರಿಗಳನ್ನು ಹೊತ್ತು. ಮುಂದೆ ಸಾಗುವ ಈ ಹೆಣ್ಣು ಸಾಧನೆಯ ಶಿಖರದ ಮೂಲಕ ಉನ್ನತ ಹುದ್ದೆ ಪಡೆದಿದ್ದಾಳೆ ಜೀವನದಲ್ಲಿ ಮುಂದೆ ಬರಬೇಕಾದರೆ ಸಾಧನೆ ಮುಖ್ಯ ಈ ಸಾಧನೆಗೆ ಕಠಿಣ ಪರಿಶ್ರಮ ಮತ್ತು ಛಲ, ಜೀವನದಲ್ಲಿ ಬೇಕಾಗುತ್ತದೆ ಎಂದು ತಾಲೂಕಾ ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ ಅವರು ಹೇಳಿದರು.
ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಘಟಕದ ಅಡಿಯಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಸಹಿಸಿಕೊಳ್ಳುವ ಶಕ್ತಿ ನಮ್ಮಲ್ಲಿದೆÉಂಬ ಕಾರಣಕ್ಕೆ ದಬ್ಬಾಳಿಕೆ ದೌರ್ಜನ್ಯಗಳು ಮಹಿಳೆಯರ ಮೇಲೆ ನಡಿತಾ ಇವೆ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂಬ ಗಾಧೆಯಂತೆ ಮಹಿಳೆಯು ಇಂದು ಎಲ್ಲಾ ರಂಗದಲ್ಲಿ ಹೆಣ್ಣು ಸಾಧನೆಯ ದಾಪುಗಾಲ ಇಡುತ್ತಿದ್ದಾಳೆ ಈ ದಿಸೆಯತ್ತ ನಿಮ್ಮ ಪ್ರಯತ್ನಗಳು ಇರಲಿ ಎಂದು ಎಂದು ಮಹಿಳೆಯರಿಗೆ ಕಿವಿಮಾತೆಳೆದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಕೆ.ಮಹಾ ವಿಧ್ಯಾಲಯದ ಪ್ರಾದ್ಯಾಪಕರಾದ ಶ್ರೀಮತಿ ಡಾ. ದೀಪಾ ಮಾಳಿಗಿ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ. ಅಧ್ಯಕ್ಷತೆಯನ್ನು ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಆರ್.ಎಂ ಬಂಟನೂರ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ಘಟಕದ ಸಂಯೋಜಕರು, ಐಕ್ಯೂಎಸ್‍ಸಿ ಘಟಕದ ಮುಖ್ಯಸ್ಥರು, ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು, ಉಪಸ್ಥಿತರಿದ್ದರು.
ಶಿಕ್ಷಣಾರ್ಥಿ ಶ್ರೀಶೈಲ ಹೂಗಾರ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಮೊಮ್ಮದ್‍ರಫಿಕ ತಶೀಲ್ದಾರ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ಶ್ರೀಕಾಂತ ಚಿಕ್ಕನಹಳ್ಳಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು