ಅಲ್ಪಸಂಖ್ಯಾತ ಇಲಾಖೆಯ 5 ಕೋಟಿ ರೂಗಳ ಕಾಮಗಾರಿಗಳಿಗೆ ಶಾಸಕ ಲಕ್ಷ್ಮಣ ಸವದಿ ಭೂಮಿಪೂಜೆ
ಅಥಣಿ :ಮಾ.10: ಪಟ್ಟಣದ ಜತ್ತ ರಸ್ತೆಯಲ್ಲಿನ ಈದ್ಗಾ ಮತ್ತು ಖಬರಸ್ತಾನ್ ಹಾಗೂ ಅಥಣಿ ಪಟ್ಟಣದಲ್ಲಿನ ಅಲ್ಪಸಂಖ್ಯಾತರು ಹೆಚ್ಚಿರುವ ವಿವಿಧ ಬಡಾವಣೆಗಳಲ್ಲಿ ಸರ್ಕಾರದ ಅಲ್ಪ ಸಂಖ್ಯಾತರ ನಿಧಿ ಯೋಜನೆಯಡಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಲಭ್ಯ ಕಲ್ಪಿಸುವ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಲಕ್ಷ್ಮಣ ಸವದಿಯವರು ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ ಅಲ್ಪಸಂಖ್ಯಾತರ ನಿಧಿಯಿಂದ 5 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನ ಸರ್ಕಾರದ ಏಜೆನ್ಸಿಯಾಗಿರುವ ಕೆ ಆರ್ ಡಿ ಸಿ ಎಲ್ ಸಂಸ್ಥೆಗೆ ವಹಿಸಲಾಗಿದ್ದು ಇನ್ನೂ ಎರಡು ದಿನದಲ್ಲಿ ಪವಿತ್ರ ರಮ್ಜಾನ್ ತಿಂಗಳ ಆರಂಭವಾಗಲಿದೆ ಅದಕ್ಕಾಗಿ ಈ ನಿಟ್ಟಿನಲ್ಲಿ ಇಂದು ಈದ್ಗಾ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ.ರಂಜಾನ್ ತಿಂಗಳ ಅಂತ್ಯದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದ ಅವರು ಅಲ್ಪಸಂಖ್ಯಾತರು ಹೆಚ್ಚು ಇರುವ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುವಂತೆ ಸೂಚಿಸಿದರು. ರಂಜಾನ್ ತಿಂಗಳು ಅಂತ್ಯದ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ನಂತರ ಮುಸ್ಲಿಂ ಸಮಾಜದ ಧರ್ಮ ಗುರುಗಳಾದ ಮುಫ್ತಿ ಹಬಿಬುಲ್ಲಾ ಕಾಶ್ಮಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಆಸೀಫ ತಾಂಬೊಳಿ, ಸಯ್ಯದ್ ಅಮಿನ ಗದ್ಯಾಳ, ಅಸ್ಲಂ ನಾಲಬಂದ, ಮುಸ್ತಾಕ್ ಮುಲ್ಲಾ, ದತ್ತಾ ವಾಸ್ಟರ್, ದಿಲೀಪ ಲೊಣಾರಿ, ರಾಜು ಬುಲಬುಲೆ, ಸಂತೋಷ ಸಾವಡಕರ್, ರಾವಸಾಬ ಐಹೊಳೆ, ಮಲ್ಲು ಹುದ್ದಾರ್, ಹಾಜಿ ಬಾಬು ಗದ್ಯಾಳ್, ಹಾಜಿ ಬಾಬು ಮುಲ್ಲಾ, ಹಾಜಿ ಅಕ್ಬರ್ ಮುಲ್ಲಾ, ಹಾಜಿ ಶಫಿ ಮುಲ್ಲಾ, ರಿಯಾಜ್ ಸನದಿ, ಅಬ್ದುಲ ಅಜೀಜ್ ಮುಲ್ಲಾ, ಆಬಿದ ಮಾಸ್ಟರ್, ಇಲಿಯಾಸ್ ಹಿಪ್ಪರಗಿ, ಬಾಬು ಖೆಮಲಾಪೂರ್, ಐ.ಜಿ ಬಿರಾದಾರ್, ಇರ್ಷಾದ್ ಮನಗೂಳಿ, ಸಯ್ಯದ ಗಡ್ಡೆಕರ, ಸಲಾಂ ಕಲ್ಲಿ ಸೇರಿದಂತೆ ಅಂಜುಮನ್ ಎ ಇಸ್ಲಾಂ ಕಮಿಟಿಯ ಸರ್ವ ಸದಸ್ಯರು ಹಾಗೂ ಪುರಸಭೆ ಸದಸ್ಯರು, ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.