ಸಂಸ್ಕೃತಿ ಪ್ರತಿಬಿಂಬ ಧಾರ್ಮಿಕ ಆಚರಣೆಗಳು
ಶಿಡ್ಲಘಟ್ಟ,ಮಾ. ೧೦- ಹಬ್ಬ ಆಚರಣೆ ಮಾಡುವುದು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಅದರಂತೆಜಾತಿ,ಮತ ಪಂಥ ಬೇಧಭಾವ ಮರೆತು ಎಲ್ಲರೂ ಒಂದಾಗಿ ಧಾರ್ಮಿಕ ಕ್ಷೇತ್ರಗಳಲ್ಲಿ ಭಾಗವಹಿಸುವುದ ರಿಂದ ಸ್ನೇಹ ಸಹಬಾಳ್ವೆ ವೃದ್ಧಿಸಿ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ತಿಳಿಸಿದರು.
ತಾಲೂಕಿನ ಗುಡಿಹಳ್ಳಿ ಗ್ರಾಮದ ಶ್ರೀ ಸೋಮೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ನಂತರ ದೇವಾಲಯ ಮುಜರಾಯಿ ಇಲಾಖೆ ಸೇರಿದ್ದು ತಾಲ್ಲೂಕಿನ ತಹಶೀಲ್ದಾರ್ ಬಿ.ಎನ್ ಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು.
ಪ್ರತಿವರ್ಷದಂತೆ ಈ ವರ್ಷವೂ ಸಹ ಮಹಾ ಶಿವರಾತ್ರಿ ಹಬ್ಬದ ದಿನದಂದು ನಡೆಯುವ ಬ್ರಹ್ಮರಥೋತ್ಸವ ಜಾತ್ರೆಗೆ ಸುತ್ತ ಮುತ್ತಲ ಗ್ರಾಮದ ಮಹಿಳೆಯರು ಸ್ವಾಮಿಗೆ ತಂಬಿಟ್ಟಿನ ದೀಪಗಳನ್ನು ಹೊತ್ತು ವೀರಗಾಸೆಯವರಿಂದ ಕುಣಿತ ನೆರೆದ ಭಕ್ತಾದಿಗಳಿಗೆ ಆಕರ್ಷೀಯವಾಗಿತ್ತು ಮಕ್ಕಳ ಆಟಿಕೆಗಳು, ಬಿಸಿಲಿ ತಾಪಕ್ಕೆ ತಂಪು ಪಾನಿಯಗಳ ಅಂಗಡಿಗಳು, ಸಿಹಿ ತಿಂಡಿ ತಿನಿಸುಗಳ ಅಂಗಡಿಗಳ ಮುಂದೆ ಜನ ಜಂಗುಳಿ ತುಂಬಿದ್ದು ಸುತ್ತ ಮುತ್ತಲ ಆಪಾರ ಭಕ್ತಾದಿಗಳು ದೇವರ ದರ್ಶನ ಪಡೆದರು.
ದೇವಸ್ಥಾನದ ಪೂಜಾ ಕೈಂಕರ್ಯ ಗಳನ್ನು ಶಾಸ್ರೋಪ್ತಾವಾಗಿ ಕೆಜಿಎಪ್ ರಮೇಶಸ್ವಾಮಿಗಳು ನೆರವೇರಿಸಿದರು. ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ತಾದೂರು ಮಂಜುನಾಥ್, ದೇವರಾಜ್, ಮುನಿ ನಂಜಪ್ಪ , ಬಸವರಾಜು, ಕೆಂಪಣ್ಣ,
ಗುಡಿಯಪ್ಪ, ಚನ್ನಕೃಷ್ಣಪ್ಪ, ರವಿಕುಮಾರ್, ರೈತ ಮುಖಂಡರು, ಜನ ಪ್ರತಿ ನಿದಿಗಳು, ಗ್ರಾಮದ ಮುಖಂಡರು, ಶ್ರೀ ಸೋಮೇಶ್ವರ ಸ್ಮಾಮಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರಿಕೃಷ್ಣ ನರಸಿಂಹಮೂರ್ತಿ, ಚನ್ನಕೃಷ್ಣಪ್ಪ, ಮುನಿವೆಂಕಟಸ್ವಾಮಿ, ಹಾಗೂ ಸಮಿತಿಯ ಸದಸ್ಯರುಗಳು,ಮತ್ತು ಊರಿನ ಗ್ರಾಮಸ್ಥರು ಹಾಜರಿದ್ದರು.