ಕಾಂಗ್ರೆಸ್ ಗೆಲುವಿಗೆ ಶ್ರಮಿಸುವೆ-ಸಚಿವ ಮುನಿಯಪ್ಪ
ಕೋಲಾರ,ಮಾ,10-ಲೋಕಸಭೆ ಚುನಾವಣೆ ಹೊಸ್ತಿಲಲ್ಲೆ ಕೋಲಾರದಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಟೆಂಪಲ್ ರನ್ ಮಾಡಿ ಅಚ್ಚರಿ ಮೂಡಿಸಿದರು.
ಶುಕ್ರವಾರ ಮುಂಜಾನೆಯಿಂದ ಹಲವು ಮಂದಿರ, ಮಸೀದಿ, ಚರ್ಚ್, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ನಗರದ ಸಾಯಿ ಬಾಬಾ ದೇವಾಲಯದಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಸುದ್ದಿಗಾರರೊಂದಿಗೆ ಅವರು ಮಾತನಾಡಿ ಸತತ ಒಂದು ವರ್ಷದಿಂದ ಇದ್ದ ಹರಕೆಯನ್ನ ಇಂದು ತೀರಿಸಲಾಗಿದೆ ನಾನು ದೇವನಹಳ್ಳಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಿಂತು ಗೆಲವು ಸಾಧಿಸಿದ ಹಿನ್ನೆಲೆ ಶುಕ್ರವಾರ ದೇವಾಲಯ, ಮಸೀದಿ, ಚರ್ಚ್ ನಲ್ಲಿ ಪ್ರಾರ್ಥನೆ ಮಾಡಿದ್ದೇನೆ, ನಿನ್ನೆಯೆ ಬರಬೇಕಿತ್ತು ಆದರೆ ಸಾಧ್ಯವಾಗಿಲ್ಲ ಹಾಗಾಗಿ ಇಂದು ಭೇಟಿ ಕೊಟ್ಟಿದ್ದೇನೆ. ಈ ವರ್ಷ ಮಳೆ ಬೆಳೆ ಉತ್ತಮವಾಗಿ ಆಗಲಿ ಜಿಲ್ಲೆ ಸಮೃದ್ದಿಯಾಗಿರಲಿ, ಎಲ್ಲಾ ಧರ್ಮದವರು ಶಾಂತಿ ಸಹಬಾಳ್ವೆ ಯಿಂದ ಜೀವಿಸುವಂತ್ತಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಮಹದೇವಪ್ಪ ದಲಿತ ಸಿಎಂ ಹೇಳಿಕೆ ವಿಚಾರ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದಲಿತ ಸಮುದಾಯಗಳಿಗೆ ಸಾಕಷ್ಟು ಬೆಂಬಲ ಕೊಟ್ಟಿದೆ ೯ ಜನ ದಲಿತ ಸಮುದಾಯದವರನ್ನ ಸಚಿವರನ್ನಾಗಿ ಮಾಡಿದೆ ಕಾಂಗ್ರೆಸ್ ಎಂದರು.
ಇನ್ನೂ ನಿನ್ನೆ ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೇಸ್ ಬಲಗೈ ಸಮುದಾಯಕ್ಕೆ ಟಿಕೇಟ್ ನೀಡಬೇಕೆಂಬ ಒತ್ತಾಯವನ್ನ ಶಾಸಕ ಕೊತ್ತೂರು ಮಂಜುನಾಥ್ ಮಾಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವ ಸಮುದಾಯಕ್ಕೆ ಈ ಕ್ಷೇತ್ರದಲ್ಲಿ ಟಿಕೇಟ್ ಕೊಡಬೇಕು ಅನ್ನೋದನ್ನ ಹೈ ಕಮಾಂಡ್ ನಿರ್ಧಾರ ಮಾಡುತ್ತೆ, ಯಾರಿಗೆ ಟಿಕೇಟ್ ಕೊಟರೂ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.