ವಿಷನ್ ಹೊಂದಿದ್ದ ಮಾದರಿ ರಾಜಕಾರಣಿ: ಸಂಸದ ಪ್ರತಾಪಸಿಂಹ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.10:- ಅನಾರೋಗ್ಯಕ್ಕೆ ತುತ್ತಾಗಿದ್ದ ಚಾಮರಾಜ ಕ್ಷೇತ್ರದ ವಾಸಣ್ಣ ಅವರು ನಮ್ಮನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ನೋವು ಸಹಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ಮೈಸೂರು ಭಾಗ ರಾಜಕಾರಣಕ್ಕೆ ಹೆಸರು ವಾಸಿಯಾದ ಭಾಗವಾಗಿದೆ. ರಾಜಕೀಯ ಎಂಬುದು ಈ ಭಾಗದ ಜನರ ರಕ್ತದಲ್ಲಿಯೇ ಇದೆ. ರಾಜಕೀಯ ಎಂದಾಗ ದ್ವೇಷ, ಅಸೂಯೆ ಕಾಲೆಳೆಯುವ ಕೆಲಸ ಮಾಡುತ್ತಾರೆ.
ಇದರ ಮದ್ಯೆದಲ್ಲಿ ಅಜಾತಶತ್ರು ವಿನ ರೀತಿ ಇದ್ದವರು ವಾಸಣ್ಣ ಅವರಾಗಿದ್ದರು. ಯಾರೇ ಬಂದರೂ ಪ್ರೀತಿ ಯಿಂದ ಮಾತನಾಡಿಸುತ್ತಿದ್ದರು. ಅವರು ಕೋಪಿಸಿಕೊಂಡಿದ್ದು, ಅಸಡ್ಡೆ ಮಾಡಿದ್ದ ಉದಾಹರಣೆಗಳೇ ಇಲ್ಲ. ಸ್ಥಿತಿ ವಂತರನ್ನು ಮಾತನಾಡಿಸಿ ಬಡವರನ್ನು ಕಡೆಗಣಿಸಿ ಮಾತನಾಡುವ ಸಂಸ್ಕೃತಿ ಅವರದ್ದಾಗಿರಲಿಲ. ಮೈಸೂರಿನ ಸಂಪೂರ್ಣ ಇತಿಹಾಸ ಅರಿತು ಮಾತನಾಡುತ್ತಿದ್ದರು.
ಎಸ್ ಎಂ ಕೃಷ್ಣ ಅವರ ನಂತರ ಈ ಭಾಗದಲ್ಲಿ ಅಂತಹ ವಿಷನ್ ಇದ್ದಂತಹ ವ್ಯಕ್ತಿ ವಾಸಣ್ಣ ಅವರಾಗಿದ್ದಾರೆ. ವಾಸಣ್ಣ ಎಲ್ಲರ ರೀತಿ ರಾಜಕಾರಣ ಮಾಡಲಿಲ್ಲ. ಮೈಸೂರಿಗೆ ಎನೂ ಮಾಡಬೇಕೆಂಬ ಕಲ್ಪನೆ ಇದ್ದವಂತರಾಗಿದ್ದರು.
ಮೈಸೂರಿನ ವಿಜಯನಗರಕ್ಕೆ ಟ್ಯಾಂಕ್ ತಂದಿದ್ದು, ಇವರ ಸಲಹೆ ಮೇರೆಗೆ, ಹಳೆ ಕೆಸರೆ ಸಮೀಪ ಕಾವೇರಿ ನದಿಗೆ ಕೊಚ್ಚೆ ನೀರು ಸೇರುತ್ತಿದ್ದನ್ನು ತೋರಿಸಿಕೊಟ್ಟರು. ಅದನ್ನು ಸಹ ಮಾಡಲಾಯಿತು. ಜಯದೇವ ಆಸ್ಪತ್ರೆ ಅನುದಾನ ತಂದರು.
ಕುಕ್ಕರಹಳ್ಳಿ ಕೆರೆ ಶುದ್ಧೀಕರಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರಬೇಕಾದರೆ ಕೆಲಸ ಮಾಡಿದರು. ಮುಂದಿನ ಚುನಾವಣೆಗೆ ಯೋಚಿಸದೇ ಮುಂದಿನ ತಲೆಮಾರಿಗೆ ಎನೂ ಮಾಡಬೇಕೆಂದು ಆಲೋಚಿಸಿದವರಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ 46 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆಂದಿದ್ದರು. ಹೀಗೆ ಮೈಸೂರಿನ ನಾಡಿ ಮಿಡಿತ ಅರಿತಿದ್ದರು ಎಂದರು.