ಸುಧಾಮೂರ್ತಿಅವರಿಗೆ ಅಭಿನಂದನೆಗಳು ಎಂ.ಟಿ.ಅಣ್ಣೇಗೌಡ
ಸಂಜೆವಾಣಿ ನ್ಯೂಸ್
ಕೆ.ಆರ್.ನಗರ, ಮಾ10:- ರಾಜ್ಯಸಭೆಗೆ ಆಯ್ಕೆಗೊಂಡ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ ಸೇರಿದಂತೆ ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸುಧಾಮೂರ್ತಿ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಸಭೆ ಸ್ಥಾನಕ್ಕೆ ನಾಮನಿರ್ದೇಶನ ಮಾಡಿರುವುದು ಸ್ವಾಗತರ್ಹ ಇದು ಐತಿಹಾಸಿಕ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಮಹಿಳಾ ದಿನಾಚರಣೆಯ ಸುದಿನದಂದು ದೇಶದ ಮಹಿಳಾ ಶಕ್ತಿಗೆ ಪ್ರೇರಣೆಯಾಗಿರುವ ಶ್ರೀಮತಿ ಸುಧಾ ಮೂರ್ತಿಯವರು ರಾಜ್ಯಸಭೆಗೆ ನಾಮನಿರ್ದೇಶನ ಗೊಂಡಿರುವುದು ಅತ್ಯಂತ ಖುಷಿ ತಂದಿದ್ದು, ಸುಧಾಮೂರ್ತಿಯವರಿಗೆ ತುಂಬು ಹೃದಯದ ಅಭಿನಂದನೆಗಳು ಎಂದಿದ್ದಾರೆ.
ಸುಧಾ ಮೂರ್ತಿಯವರು ಗೃಹಿಣಿಯಾಗಿ, ಉದ್ಯಮಿಯಾಗಿ, ಶಿಕ್ಷಣ ಪ್ರೇಮಿಯಾಗಿ, ಸಾಹಿತಿಯಾಗಿ, ಸಮಾಜ ಸೇವೆ ಮಾಡುತ್ತಿದ್ದು, ತಮ್ಮ ಸರಳತೆ ಮೂಲಕ ಇಡೀ ಮಹಿಳಾ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದು, ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾರಿಶಕ್ತಿಗೆ ನೀಡಿರುವ ದೊಡ್ಡ ಗೌರವವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.
ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ, ಔದ್ಯೋಗಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸುತ್ತಿರುವ ಕನ್ನಡತಿ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದಿಂದ ನಮ್ಮೆಲ್ಲರಿಗೂ ತುಂಬಾ ಸಂತಸವಾಗಿದೆ. ಮಾತೆಯಾಗಿ ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿ ನಿಲ್ಲುವ ಸುಧಾ ಮೂರ್ತಿ ಅವರಿಂದ ರಾಜ್ಯಸಭಾ ಸದಸ್ಯೆಯಾಗಿಯೂ ಇನ್ನೂ ಹೆಚ್ಚಿನ ದೇಶ ಸೇವೆ ನಡೆಯಲಿ ಎಂದು ಶುಭ ಹಾರೈಸಿದ್ದಾರೆ.
ಸಂತಾಪ :
ಮೈಸೂರು ಮಹಾನಗರದ ಮಾಜಿ ಮೇಯರ್, ಚಾಮರಾಜ ಕ್ಷೇತ್ರದ ಮಾಜಿ ಶಾಸಕರು ಹಾಗು ಪತ್ರಿಕೋದ್ಯಮಿ ವಾಸು ಅವರ ನಿಧನದಿಂದ ಸಮಾಜಕ್ಕೆ ತುಂಬಲಾಗದ ನಷ್ಟವುಂಟಾಗಿದೆ ಎಂದು ಕೆ.ಆರ್.ನಗರ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ ಅವರು ಪತ್ರಿಕಾ ಹೇಳಿಕೆಯಲ್ಲಿ ಕಂಬನಿ ಮಿಡಿದಿದ್ದಾರೆ.
ಪತ್ರಿಕೋದ್ಯಮವಲ್ಲದೇ, ರಾಜಕಾರಣ, ಕೈಗಾರಿಕೋದ್ಯಮ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿಯೂ ವಾಸು ಮಾದರಿ ವ್ಯಕ್ತಿತ್ವ ಎನಿಸಿದ್ದಾರೆ.
ಮೇಯರ್‍ಆಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಯಾಗಿ, ಶಾಸಕರಾಗಿ ಮೈಸೂರಿಗೆ ಉನ್ನತ ಕೊಡುಗೆಗಳನ್ನು ನೀಡಿದ್ದಾರೆ.
ಜಯದೇವ ಹೃದ್ರೋಗ ಆಸ್ಪತ್ರೆಯ ನಗರ ಶಾಖೆಯೂ ಸೇರಿ ಇನ್ನಿತರ ಹಲವಾರು ಸರ್ಕಾರಿ ಹೈಟೆಕ್ ಆಸ್ಪತ್ರೆಗಳನ್ನು ಆರಂಭಿಸುವಲ್ಲಿ ಇವರ ಶ್ರಮ ಬಹಳ ದೊಡ್ಡದು.ಇವರ ಅಗಲಿಕೆಯಿಂದ ಒಕ್ಕಲಿಗ ಜನಾಂಗಕ್ಕೆಅಪಾರನೋವಾಗಿದೆ.