ಗುರುವಿನ ಕುರಿತು ಪುಸ್ತಕ ಬರೆದು ಇಂಡಿಯಾ ಬುಕ್ ಆಫ್‍ರೆ ಕಾರ್ಡ್‍ನಲ್ಲಿ ದಾಖಲೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.10- ಸಾಮಾನ್ಯರುತಮ್ಮ ನೆಚ್ಚಿನ ಶಿಕ್ಷಕಿಯನ್ನು ನೆನೆಯುತ್ತಿದ್ದರೆಇಲ್ಲೊಬ್ಬ ವಿದ್ಯಾರ್ಥಿನಿ ತನ್ನನೆಚ್ಚಿನ ಶಿಕ್ಷಕಿಯಕುರಿತು ಪುಸ್ತಕ ಬರೆದುಇಂಡಿಯಾ ಬುಕ್‍ಆಫ್‍ರೆಕಾರ್ಡ್‍ನಲ್ಲಿದಾಖಲೆ ನಿರ್ಮಿಸಿದ್ದಾರೆ.
ಚಾಮರಾಜನಗರತಾಲೂಕಿನ ದೊಡ್ಡಮೋಳೆಯ ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಮತ್ತುಗಣೇಶ್‍ದಂಪತಿಯ ಪುತ್ರಿ, ಚಾಮರಾಜನಗರದ ಸರ್ಕಾರಿ ಮಹಿಳಾ ಪ್ರಥಮದರ್ಜೆಕಾಲೇಜುಬಿ.ಕಾಂತೃತೀಯ ವರ್ಷದ ವಿದ್ಯಾರ್ಥಿನಿ ಜಿ.ಅಮೃತಾ ಈ ಸಾಧನೆ ಮಾಡಿದವರು.
ಇವರುತನ್ನಊರಿನ ಸರ್ಕಾರಿ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ. 6ನೇ ತರಗತಿಓದುವಾಗ ಸುμÁ್ಮಎನ್ನುವವರು ಸಮಾಜ-ವಿಜ್ಞಾನ ಶಿಕ್ಷಕಿಯಾಗಿ ಶಾಲೆಗೆ ಬಂದರು. ಪ್ರಸ್ತುತಇವರು ನಂಜನಗೂಡಿನ ಬಿದರಗೂಡಿನ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಶಿಕ್ಷಕಿಯಿಂದ 8ನೇ ತರಗತಿಯವರೆಗೆ ಪಾಠ ಕೇಳಿದ್ದ ಅಮೃತಾಅತೀವಗೌರವ, ಪ್ರೀತಿಒಡನಾಟವನ್ನು ಬೆಳೆಸಿಕೊಂಡಿದ್ದರು. ಇದುಎಷ್ಟರ ಮಟ್ಟಿಗೆಎಂದರೆ ಶಿಕ್ಷಣ ಮುಂದುವರೆಸಿ ಬಿ.ಕಾಂ ಪದವಿ ತರಗತಿಗೆ ಸೇರಿದರೂ ನೆಚ್ಚಿನ ಶಿಕ್ಷಕಿ ಮೇಲಿನ ಅಭಿಮಾನ ಹಾಗೇ ಇತ್ತು.
ಕೋವಿಡ್ ಸಂದರ್ಭದಲ್ಲಿ ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಲ್ಲೇಇದ್ದಅಮೃತಾತನ್ನ ನೆಚ್ಚಿನ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದ ಸುμÁ್ಮಕುರಿತು ‘ನನ್ನಗುರುವೆಂಬ ಸುಗಮ’ ಪುಸ್ತಕ ಬರೆಯಲಾರಂಭಿಸಿದ್ದರು. ಶಿಕ್ಷಕಿಯ ಗುಣಇಬ್ಬರ ನಡುವಿನ ಒಡನಾಟವನ್ನು ಬರಹಾ ರೂಪಕ್ಕಿಳಿಸಿ, 16 ಕವಿತೆಗಳನ್ನು ರಚಿಸಿದ್ದರು.
ಒಂದು ವರ್ಷಗಳ ಕಾಲ ಕುಳಿತು ಬರೆದ ಈ ಪುಸ್ತಕವನ್ನು ಕಳೆದ ವರ್ಷ ಸಂವನ್ ಪಬ್ಲಿಕೇಷನ್ ಪ್ರಕಟಿಸಿದ್ದು, 2024ರ ಫೆ.27ರಂದು ಕೃತಿ ಬರೆದಿದ್ದಅಮೃತಾಇಂಡಿಯಾ ಬುಕ್‍ಆಫ್‍ರೆಕಾರ್ಡ್‍ನಗರಿಮೆಗೆ ಪಾತ್ರರಾಗಿದ್ದಾರೆ.
16 ಕವಿತೆಗಳ ಪರಿಚಯ: ‘ನನ್ನಗುರುವೆಂಬಸುಗಮ’ ಶೀರ್ಷಿಕೆ ಗುರುವಿನ ಸನಿಹ ನನ್ನಧ್ಯಾನ ಎಂಬ ಅಡಿಬರಹದ 67 ಪುಟಗಳ ಕೃತಿಯಲ್ಲಿ 16 ಕವಿತೆಗಳನ್ನು ಅಮೃತಾತನ್ನ ನೆಚ್ಚಿನ ಶಿಕ್ಷಕಿ ಸುμÁ್ಮಕುರಿತು ಬರೆದಿದ್ದಾರೆ. ಗುರುವೆಂದರೆಯಾರು?,ಗುರುವಿಗೆ ಹೃದಯ ಪೂರ್ವಕ ನಮನ, ಎತ್ತಲೋ ಸಾಗುತ್ತಿದ್ದ ಈ ಜೀವನದ ಹಾದಿಯಲಿ, ದಡ ಸೇರಿಸಲು ನಾವಿಕರಾಗಿ, ಇಲ್ಲದೇ ನಿಮ್ಮ ಮಾರ್ಗದರ್ಶನ, ಅದೇ ಮೊಗವು ಅದೇ ನಗುವು, ನೀವು ಹೇಳಿಕೊಟ್ಟ ನೈತಿಕತೆ ನೀತಿ, ದೇವತೆಯ ಆಗಮನ ಎಂಬಿತ್ಯಾದಿ ಮೊದಲ ಸಾಲುಗಳ ಕವಿತೆಗಳು ಪುಸ್ತಕದಲ್ಲಿವೆ.
ಈ ಕುರಿತು ಖುಷಿ ಹಂಚಿಕೊಂಡಿರುವಅಮೃತಾ, ನನಗೆ ಸಣ್ಣಪುಟ್ಟ ಕವಿತೆಗಳನ್ನು ಬರೆಯುವ ಹವ್ಯಾಸವಿತ್ತು. ಕೋವಿಡ್ ಸಂದರ್ಭದಲ್ಲಿ ನನ್ನ ನೆಚ್ಚಿನ ಶಿಕ್ಷಕಿ ಸುಷ್ಮಾರವರಕುರಿತುಕೃತಿ ರಚಿಸಿದೆ. ಶಿಕ್ಷಕಿ ತಾಯಿಇದ್ದಂತೆಇದುಇಂಡಿಯಾ ಬುಕ್‍ಆಫ್‍ರೆಕಾರ್ಡ್‍ಗೆ ಸೇರುತ್ತದೆಎಂದುಗೊತ್ತಿರಲಿಲ್ಲ. ಕೃತಿ ಬರೆದ ಬಳಿಕ ಸಾಹಿತ್ಯದತ್ತ ಮತ್ತಷ್ಟು ಆಸಕ್ತಿ ಬೆಳೆಸಿಕೊಂಡಿದ್ದೇನೆ ಎಂದು ಹೇಳಿದರು.