ಮೀನಾಗೆ ಪಿಎಚ್‍ಡಿ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.10 :ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ತೊಂಡಚಿರಕರ ಮೀನಾ ಬಾಬುರಾವ ಅವರು ಸಲ್ಲಿಸಿದ್ದ “ಹಿಂದಿ ಜೌರ್ ಮರಾಠಿ ಮಹಿಲಾ ದಲಿತ ಆತ್ಮಕಥಾಂವೊ ಕಾ ತುಲನಾತ್ಮಕ ಅಧ್ಯಯನ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‍ಡಿ ಪದವಿ ನೀಡಿದೆ.
ತೊಂಡಚಿರಕರ ಮೀನಾ ಬಾಬುರಾವ ಅವರು ಹಿಂದಿ ಅಧ್ಯಯನ ವಿಭಾಗದ ಪ್ರೊ. ರಾಜು ಬಾಗಲಕೋಟ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ತೊಂಡಚಿರಕರ ಮೀನಾ ಬಾಬುರಾವ ಅವರನ್ನು ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.