ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ,ಶಿಕ್ಷಣ ನೀಡಲಿ
ಇಂಡಿ:ಮಾ.10:ತಾಲೂಕಿನ ಮಿರಗಿ ಗ್ರಾಮದ ಆಲಮೇಲ ವಸತಿಯಲ್ಲಿ ಶ್ರೀ ಶರತಾಯಿ ಹಾಗೂ ಹುಚ್ಚಲಿಂಗ ಮಹಾರಾಜ ಜಾತ್ರಾ ಮಹೋತ್ಸವದ ಅಂಗವಾಗಿ ಯುವ ಮುಖಂಡರಾದ ಚಿದಾನಂದ ಆಲಮೇಲ ಹಾಗೂ ಶ್ರೀಮಂತ ಖಸ್ಕಿ ಅವರ ನೇತ್ರತ್ವದಲ್ಲಿ ಮುತ್ತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಪ್ರವಚನಕಾರರಾದ ಆರ್.ಶರಣಬಸವಶಾಸ್ತ್ರಿ ಮಾತನಾಡಿ, ನಮ್ಮ ನೆಲದ ಸಂಸ್ಕøತಿ ಮುಂದಿನ ಪೀಳಿಗೆಗೆ ಅಚ್ಚುಕಟ್ಟಾಗಿ ಮುಂದುವರೆಸುವ ಗುರುತರವಾದ ಜವಾಬ್ದಾರಿ ತಾಯಂದಿರ ಮೇಲಿದೆ.ಹಾಗಾಗಿ ನಾವೆಲ್ಲ ಮಹಿಳೆರಿಗೆ ಪೂಜ್ಯನೀಯ ಸ್ಥಾನದಲ್ಲಿಟ್ಟಿದ್ದೇವೆ.ಸಂಸ್ಕಾರ,ಶಿಕ್ಷಣ ಎರಡನ್ನು ಸಮನಾಗಿ ಈ ಸಮಾಜಕ್ಕೆ ಕೊಡುವಲ್ಲಿ ತಾಯಂದಿರರು ಮಕ್ಕಳಿಗೆ ಕಲಿಸುವ ,ರೂಢಿಸುವ ಕೆಲಸ ಮಾಡಲಿ ದೆಂದು ಹೇಳಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಮೂಲಕ ನಮ್ಮ ಹಳೆಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಲು ಹಾಗೂ ಉಡಿ ತುಂಬುವ ಮಹತ್ವದ ಬಗ್ಗೆ ಮಹಿಳೆಯರಿಗೆ ಅರಿವು ಹಾಗೂ ಜಾಗ್ರತಿ ಮೂಡಿಸುವುದು ಪುಣ್ಯದ ಕೆಲಸವಾಗಿದೆ.ತಾಲೂಕಿನಾಧ್ಯಂತ ಉತ್ತಮ ಮಳೆಯಾಗಲಿ,ರೈತರು ಸಮೃದ್ದವಾಗಿ ಬೆಳೆಗಳನ್ನು ಬೆಳೆಯಲಿ,ರೈತರ ಬಾಳು ಬಂಗಾರವಾಗಲಿ ಎಂದು ಹೇಳಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಪುರಾಣ ಪ್ರವಚನ ಮುತ್ತೈದಿಯರಿಗೆ ಉಡಿ ತುಂಬುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಜೊತೆಗೆ ಅವರು ಪಾಲಿಸಬೇಕಾದ ಸಂಪ್ರದಾಯಗಳನ್ನು ತಿಳಿಸಿ ಹೇಳುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.ಉಡಿ ತುಂಬುವ ಕೆಲಸ ಅತ್ಯಂತ ಪುಣ್ಯದ ಕಾಯಕವಾಗಿದೆ ಎಂದು ಹೇಳಿದರು.
ನಾಗಪ್ಪ ಮುತ್ಯಾ ಸಾನಿಧ್ಯ ವಹಿಸಿದ್ದರು. ನಾಗಪ್ಪ ಖಸ್ಕಿ, ಶ್ರೀಮಂತ ಖಸ್ಕಿ, ಯಲ್ಲಪ್ಪ ಹಳ್ಳಿ, ಮಲಕಪ್ಪ ಆಲಮೇಲ, ರವಿ ಬೆಣ್ಣೆಸುರ,ಚಿದಾನಂದ ಆಲಮೇಲ, ಸಿದ್ದರಾಯ ಆಲಮೇಲ, ಕಾಂತಪ್ಪ ಆಲಮೇಲ, ಶ್ರೀಮಂತ ಬೆಣ್ಣೆಸುರ,ಬಸವರಾಜ ಆಲಮೇಲ, ಶ್ರೀಶೈಲ ಖಸ್ಕಿ, ಸಂಗಣ್ಣ ಬಂಥನಾಳ, ಚನ್ನವೀರಪ್ಪ ಆಲಮೇಲ, ಶ್ರೀಶೈಲ ಆಲಮೇಲ, ಸಂತೋಷ ಆಲಮೇಲ ಸೇರಿದಂತೆ ಆಲಮೇಲ ವಸತಿಯ ತಾಯಂದಿರರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಇದ್ದರು.