ಪಂಚಮುಖಿ ಆಂಜನೇಯ ದೇವಾಲಯದಲ್ಲಿ ಶಿವರಾತ್ರಿ ಆಚರಣೆ

ಸಂಜೆವಾಣಿ ವಾರ್ತೆದಾವಣಗೆರೆ.ಮಾ.೯; ನಗರದ ಸರಸ್ವತಿ ಬಡಾವಣೆಯ ಪಂಚಮುಖಿ ಆಂಜನೇಯ ದೇವಸ್ಥಾನದ ಉದ್ಯಾನವನದಲ್ಲಿ ದಾವಣಗೆರೆ ಉದ್ಯಾನವನ ಅಭಿವೃದ್ಧಿ ಸಮಿತಿಯಿಂದ ಮಹಾ ಶಿವರಾತ್ರಿ ಕಾರ್ಯವನ್ನು ಆಚರಿಸಲಾಯಿತು. ಕೆ ಜಿ ಯಲ್ಲಪ್ಪನವರ   ಅಧ್ಯಕ್ಷತೆಯಲ್ಲಿ ನಡೆದ  ಕಾರ್ಯಕ್ರಮದ ಉದ್ಘಾಟನೆಯನ್ನು 33 ವಾರ್ಡಿನ ನಗರಪಾಲಿಕೆಯ ಸದಸ್ಯರಾದ ಕೆ ಎಂ ವೀರೇಶ್   ಮಾತನಾಡಿ ಇಂದು ಶಿವನ ನಾಮಸ್ಮರಣೆಯನ್ನು ಮಾಡುತ್ತಾ ನಾವೆಲ್ಲರೂ ಶಿವನ ಕೃಪೆ ಪಾತ್ರರಾಗಬೇಕು ಎಂದರು ನಂತರ ಮುಖ್ಯ ಅತಿಥಿಯಾಗಿ ಮಾತನಾಡಿದ ಟಿವಿ ೯ ದೃಶ್ಯವಾಹಿನಿಯ ಹಿರಿಯ ವರದಿಗಾರರಾದ ಬಸವರಾಜ್ ದೊಡ್ಡಮನಿಯವರು ಪ್ರತಿ ತಿಂಗಳು ಶಿವರಾತ್ರಿ ಬರುತ್ತದೆ ಆದರೆ ಇದು ವರುಷಕ್ಕೊಮ್ಮೆ ಬರುವ ಶಿವರಾತ್ರಿ  ಈ ಸಮಿತಿಯ  ಎಲ್ಲರೂ  ಉದ್ಯಾನವನದ ಅಭಿವೃದ್ಧಿಯ ಜೊತೆಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸುತ್ತಿರುವುದು ಶ್ಲಾಘನೀಯ ನಿಮ್ಮ ಸಮಿತಿಯಿಂದ ಇನ್ನೂ ಅನೇಕ ಸಾಮಾಜಿಕ ಕಳಕಳಿಯ ಕಾರ್ಯಗಳು   ನಡೆಯತ್ತಿರಲಿ ಎಂದು ಹೇಳಿದರು. ಪ್ರಾಸ್ತಾವಿಕ ಭಾಷಣವನ್ನು ಗೌರವಾಧ್ಯಕ್ಷರಾದ ಎಂ ಸೋಮಶೇಖರಪ್ಪ ಮಾಡಿದರು.  ಸಮಾರಂಭದ ಸ್ವಾಗತ ಭಾಷಣವನ್ನು ಹಿರಿಯ ಉಪಾಧ್ಯಕ್ಷರಾದ ಜಿ ಚೌಡಪ್ಪ ಮಾಡಿದರು ನಿರೂಪಣೆಯನ್ನು  ಉಪಾಧ್ಯಕ್ಷರುಗಳಾದ ನಾಗಭೂಷಣ ನಾಡಿಗೇರ್ ಮತ್ತು ಜಿ ಟಿ ಬಸವರಾಜಪ್ಪನವರು ಮಾಡಿದರು ಖಜಾಂಚಿ ಎನ್ ಎಂ ಪರಮೇಶ್ವರಪ್ಪ ವಂದನಾರ್ಪಣೆ ಮಾಡಿದರು ಮಹಿಳಾ ಅಧ್ಯಕ್ಷರಾದ ಕೆ ಎಂ ಮಂಜುಳಾ ಮಾತನಾಡಿದರು ಕೆ ವಿ  ಅನಸೂಯ ನಾಗರತ್ನ ಲೀಲಾವತಿ ಮತ್ತು ಸಮಿತಿಯ ರವಿಕುಮಾರ್ ಅಣ್ಣಪ್ಪ ಆಂಜನೇಯ ವಿಶ್ವನಾಥ ವಿ ಕುಲಕರ್ಣಿ ದೇವರಾಜ್ ಭರತ್ ಕುಮಾರ್ ಹಾಗೂ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ವಂದನಾ ವಿ ಕುಲಕರ್ಣಿ ಹಾಗೂ ಮಹಿಳಾ ಘಟಕದ ಎಲ್ಲ ಪಧಾಧಿಕಾರಿಗಳು ಇದ್ದರು ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ. ಮಂಜುನಾಥ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು