ಮಾ.೯-೧೦ ರಂದು ದಕ್ಷಿಣ ಭಾರತ, ರಾಜ್ಯ ಮತ್ತು ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ಪರ್ಧೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.10;  ನಗರದಲ್ಲಿ ದಕ್ಷಿಣ ಭಾರತ, ರಾಜ್ಯ ಮತ್ತು ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಮಾ.೯ ಹಾಗೂ ೧೦ ರಂದು ಸಂಜೆ ೪ ಕ್ಕೆ  ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಮಂಜು ಮೊಗವೀರ್ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಇಂಡಿಯನ್ ಬಾಡಿ ಬಿಲ್ಡರ್ಸ್ ಮುಂಬೈ  ಹಾಗು ಮಂಜು ಮೊಗವೀರ್ ಸ್ನೇಹಿತರ ಬಳಗದಿಂದ ಎರಡನೇ ಬಾರಿಗೆ ದಕ್ಷಿಣ ಭಾರತ ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆ ಆಯೋಜಿಸಿದ್ದೇವೆ. ಮಾ‌ 9  ರಂದು ರಾಜ್ಯಮಟ್ಟದ ಮೆನ್ಸ್ ಫಿಸಿಕ್ಯೂ ಹಾಗೂ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆ. ಮಾ. 10 ರಂದು ದಕ್ಷಿಣ ಭಾರತ ಮಟ್ಟದ ದೇಹದಾಡ್ಯ ಸ್ಪರ್ಧೆ ಆಯೋಜಿಸಿದ್ದು ಸುಮಾರು 150 ರಿಂದ 200 ದೇಹದಾಡ್ಯಪಟುಗಳು ಭಾಗವಹಿಸುವ ನಿರೀಕ್ಷೆ ಇದ್ದು ಈ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ದೇಹದಾರ್ಡ್ಯ ಪಟುಗಳಿಗೆ ಊಟದ ವ್ಯವಸ್ಥೆ ಇರುತ್ತದೆ ಹಾಗು ದಕ್ಷಿಣ ಭಾರತ ಮಟ್ಟದಲ್ಲಿ ಭಾಗವಹಿಸುವ ದೇಹದಾಡ್ಯಪಟುಗಳಿಗೆ ಊಟ ಹಾಗು ವಸತಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.  ಮುಖ್ಯ ಅತಿಥಿಗಳಾಗಿ ಸಚಿವ  ಎಸ್.ಎಸ್.ಮಲ್ಲಿಕಾರ್ಜುನ್ ,ಮುಖಂಡರಾದ ಶ್ರೀನಿವಾಸ್‌ ದಾಸಕರಿಯಪ್ಪ, ಜೆ ಏನ್ ಶ್ರೀನಿವಾಸ್, ಪ್ರವೀಣ್ ಹುಲ್ಲುಮನೆ, ಸುಜಿತ್ ಮನಿ ಬಾಸ್ಕೆಟ್, ಪ್ರತಾಪ್ ರಾವ್, ಮಂಜುನಾಥ್ ಗಡಿಗುಡಾಳ್ ಆಗಮಿಸಲಿದ್ದಾರೆ ಹಾಗು ಚಲನಚಿತ್ರ ನಟರಾದ ಭಾವನ ಹಾಗು ವಿನೋದ್ ಆಗಮಿಸಲಿದ್ದಾರೆ ಎಂದರು.ಸ್ಪರ್ಧೆಯಲ್ಲಿ ಭಾಗವಹಿಸುವವರು ಜಿಲ್ಲಾಮಟ್ಟದಲ್ಲಿ ೨೦೦,ರಾಜ್ಯಮಟ್ಟದಲ್ಲಿ ೫೦೦ ಹಾಗೂ ರಾಜ್ಯಮಟ್ಟದಲ್ಲಿ ೧೦೦೦ ಶುಲ್ಕವನ್ನು ಅಸೋಸಿಯೇಷನ್ ನಲ್ಲಿ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ದಕ್ಷಿಣ ಭಾರತ ಮಟ್ಟದಲ್ಲಿ ಗೆದ್ದವರಿಗೆ ೧ ಲಕ್ಷ ಬಹುಮಾನ,ರನ್ನರ್ ಗೆ ೨೦ ಸಾವಿರ,ಎರಡನೇ ರನ್ನರ್ ಗೆ ೨೫ ಸಾವಿರ ಹಾಗೂ ಬೆಸ್ಟ್ ಫೋಸರ್ ಗೆ ೧೦ ಸಾವಿರ ರೂ ಬಹುಮಾನ ನೀಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಎಂ.ಆರ್ ನವೀನ್,ಗಿರೀಶ್ ಕುಮಾರ್,ಪ್ರಮೋದ್ ಕೆ.ಎಸ್,ರವಿರಾಜ್,ಎನ್.ಜೆ ನಿಂಗಪ್ಪ,ಪ್ರಜೀತ್ ಕೃಷ್ಣವೀ,ಹೆಚ್.ಚೇತನ್ ಉಪಸ್ಥಿತರಿದ್ದರು.