ಶಿವರಾತ್ರಿ ಜಾಗರಣ ಮಹೋತ್ಸವ

ಸಂಜೆವಾಣಿ ವಾರ್ತೆ
ದಾವಣಗೆರೆ-ಮಾ.9 ಮಹಾಶಿವರಾತ್ರಿ ಹಬ್ಬ ಮತ್ತು ಜಾಗರಣೆ ಪ್ರಯಕ್ತ ದಾವಣಗೆರೆ ಲೇಬರ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕರಿಬಸವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಪ್ರಯಕ್ತ ಜಾಗರಣೆ ಮತ್ತು ವಿಶೇಷ ಪೊಜಾ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.ಮಾ.10 ರ ಭಾನುವಾರದಂದು ಸಂಜೆ 7 ಗಂಟೆಗೆ ಜಾಗರಣೆ ಪ್ರಯಕ್ತ ಭಜನಾ ಕಾರ್ಯಕ್ರಮ.ಮಾ 11 ಸೋಮವಾರ ಬೆಳಿಗ್ಗೆ ರುದ್ರಾಭಿಷೇಕ, ನಂತರ 9 ಗಂಟೆಗೆ ದೇವರ ಉತ್ಸವ ಮೆರವಣಿಗೆ ಮತ್ತು ಮಧ್ಯಾಹ್ನ 2 ಗಂಟೆಗೆ ಮಹಾಪ್ರಸಾದ ಎರ್ಪಡಿಸಲಾಗಿದೆ.ದಿನಾಂಕ 12 ಮಂಗಳವಾರ ವಿಶೇಷ ಪೂಜೆಯ ನಂತರ ಪಳಾರ ಹಾಕಿಸುವುದು.ಮಟ 14 ಗುರುವಾರದಂದು ಸಂಜೆ 6.30ಕ್ಕೆ ಪಳಾರ ಹಂಚುವುದು.ಈ ಮೂರು ದಿನಗಳಲ್ಲಿ ದೇವರಿಗೆ ವಿಶೇಷ ಪೂಜೆ ಮತ್ತು ಅಲಂಕಾರ ನಡೆಯುವುದು.ಮಹಾಶಿವರಾತ್ರಿ ನಿಮಿತ್ತ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ಶ್ರೀ ಅಜ್ಜಯ್ಯನ ಕೃಪೆಗೆ ಪಾತ್ರರಾಗಲು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ಪಿಎನ್ ಲೋಕೇಶಪ್ಪ ತಿಳಿಸಿದ್ದಾರೆ.