ಬಿ.ಜೆ.ಪಿ. ಅಭಿಯಾನದ ಯುವಕನಿಕೆ ಸನ್ಮಾನ : ಸಂಸದ ಡಾ. ಜಿ.ಎಂ. ಸಿದ್ದೇಶ್ವರ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೯; ನಗರದ ಜಿ.ಎಂ.ಐ.ಟಿ. ಅತಿಥಿ ಗೃಹದಲ್ಲಿ ಧಾರವಾಡ ಜಿಲ್ಲೆ, ಹುಬ್ಬಳ್ಳಿ ತಾಲ್ಲೂಕಿನ ಮಂಟೂರು ಗ್ರಾಮದ ಯುವಕನಾದ  ಭರತ ಸವಣೂರು  ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಸೈಕಲ್ ಜಾತ ನೆಡೆಸುವ ಮೂಲಕ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಜನಪರ ಯೋಜನೆಗಳ ಕುರಿತು ಮಾಹಿತಿ ನೀಡುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಮತ್ತೆ ಈ ದೇಶದ ಪ್ರಧಾನಮಂತ್ರಿ ಮಾಡಲು ಭಾರತ್ ಬಚಾವ್-ವೋಟ್ ಫಾರ್ ಬಿ.ಜೆ.ಪಿ. ಸೈಕಲ್ ಜಾತ ನಡೆಸುತ್ತಾ  ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಇವರನ್ನು ದಾವಣಗೆರೆ ಲೋಕಸಭಾ ಸದಸ್ಯರಾದ ಡಾ. ಜಿ.ಎಂ. ಸಿದ್ದೇಶ್ವರರವರು ಸನ್ಮಾನ ಮಾಡುವ ಮೂಲಕ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.ಈ ಸಂಧರ್ಭದಲ್ಲಿ ಮೋದಿ ಪಡೆಯ ಜಿಲ್ಲಾ ಸಂಚಾಲಕರಾದ ಸುದೀಂದ್ರ ಕುಮಾರ್, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯರಾದ ವಿಜಯೇಂದ್ರ ಡಿ.ಟಿ., ಮಂಜುನಾಥ್, ಸುರಜ್ ಬಿ.ಎಸ್., ಸಂದೀಪ್ ಜೈನ್, ರಮೇಶ್ ಎನ್.ಇ. ಹಾಗೂ ಇತರರು ಭಾಗವಹಿಸಿದ್ದರು.