ರಕ್ತದಾನ ಮಾಡಿ, ಜೀವ ಉಳಿಸಲು ಕರೆ

ಸಂಜೆವಾಣಿ ವಾರ್ತೆ
ಹರಿಹರ ಮಾ ೧೦; ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆ, ಸೇಂಟ್ ಮೇರಿಸ್ ಕಾನ್ವೆಂಟ್ ಹರಿಹರ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಹರಿಹರ ಹಾಗೂ ರಾಹುಲ್ ಮೆಹರ್ವಾಡೆ  ಆರ್. ಫಿಟ್ನೆಸ್ ಮಾಲೀಕರು ಹಾಗೂ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು ಹರಿಹರ ಇವರ ಸಹಯೋಗದಲ್ಲಿ   ಸೇಂಟ್ ಮೇರಿಸ್ ಕಾನ್ವೆಂಟ್ ಹರಿಹರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆಯ ಪ್ರಧಾನ ಕಾರ್ಯದರ್ಶಿಗಳಾದ ಆನಂದ್ ಜ್ಯೋತಿ, ರಾಜ್ಯ ಸಮಿತಿ ಸದಸ್ಯರಾದ ಸಿದ್ದಣ್ಣ ಡಿ ಎಸ್, ನಿರ್ದೇಶಕರಾದ ರವಿಕುಮಾರ್ ಎ ಜೆ, ವೈದ್ಯಾಧಿಕಾರಿಗಳಾದ ಡಾ. ಪಿ ಕೆ ಬಸವರಾಜ್, ಡಾ. ಕಾವ್ಯ, ಕೋ-ಆರ್ಡಿನೇಟರ್ ಮತ್ತು ಕೌನ್ಸೆಲರ್ ರಾದ ಶಿವಕುಮಾರ ಎನ್ ಜಿ, ಪ್ರಯೋಗಶಾಲಾ ಮೇಲ್ವಿಚಾರಕರಾದ ವಿನಾಯಕ ಆರ್, ಪ್ರಯೋಗಶಾಲಾ ತಂತ್ರಜ್ಞರಾದ ಗಿರೀಶ್ ಕೆ,  ಜ್ಯೋತಿ ಕೆ ಗುಡ್ಡದ್ ,  ಅಟೆಂಡರ್ ರಾದ ಪದ್ಮಬಾಯಿ, ಪ್ರಿಯಾಂಕ, ರಮ್ಯ ಇತರರು ಹಾಜರಿದ್ದರು.ಸೇಂಟ್ ಮೇರಿಸ್ ಕಾನ್ವೆಂಟ್ ಹರಿಹರದ ಮುಖ್ಯೋಪಾದ್ಯಾಯಿನಿರಾದ ಸಿಸ್ಟರ್ ಶೀಲಕುಮಾರಿ, ವ್ಯವಸ್ಥಾಪಕರಾದ ಸಿಸ್ಟರ್ ಮಾರ್ಟಿನಲ್,ಇತರೆ ಶಿಕ್ಷಕರು, ಸಿಬ್ಬಂದಿಗಳು, ಶಾಲಾ ಮಕ್ಕಳು ಸೇರಿದಂತೆ ದಾವಣಗೆರೆ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಶಾರದಾ ಮಾಗನಹಳ್ಳಿ, ಜಿಲ್ಲಾ ಸಂಘಟಕರಾದ ಅಶ್ವಿನಿ ಜೆ. ಹರಿಹರ ಸ್ಕೌಟ್ಸ್ ಮತ್ತು ಗೈಡ್ಸ್ ನ ಉಪಾಧ್ಯಕ್ಷರಾದ ಕೆ ಬಿ ರಾಜಶೇಖರ್, ಕಾರ್ಯದರ್ಶಿಗಳಾದ ಪ್ರಭಾಕರ್ ಎಸ್, ಪೋಲಿಸ್ ಅಧಿಕಾರಿ ಗಪರ್ ಇತರರು  ಇದ್ದರು.