ಟ್ರ್ಯಾಕ್ಟರ್ ಡಿಕ್ಕಿ: ಬಾಲಕ ಸಾವು
ಕಲಬುರಗಿ,ಮಾ.9-ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬ ಬಾಲಕನಿಗೆ ಗಂಭೀರ ಗಾಯಗಳಾದ ಘಟನೆ ನಗರದ ರಾಮತೀರ್ಥ ಗುಡಿ ಹಿಂದುಗಡೆ ಇರುವ ಅಲ್ಫಾಸಿಟಿ ಲೇಔಟ್ ಬಳಿ ನಡೆದಿದೆ.
ರಾಣೆಸ್ಪೀರ್ ದರ್ಗಾ ಹತ್ತಿರದ ಆಶ್ರಯ ಕಾಲೋನಿಯ ರೇಹಾನ್ ತಂದೆ ವಾಹೀದ್ ಶೇಖ್ (6) ಎಂಬ ಬಾಲಕ ಮೃತಪಟ್ಟಿದ್ದು, ಮೇರಾಜುದ್ದಿನ್ ಎಂಬ ಬಾಲಕನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಗೊಂಡ ಬಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕರಿಬ್ಬರು ರಸ್ತೆ ಮೇಲೆ ಆಟವಾಡುತ್ತಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.