ಸಿಯುಕೆಯಿಂದ ಐಐಟಿ ಕಾನ್ಪುರದ ಯುವ ಸಂಗಮ ತಂಡಕ್ಕೆ ಸ್ವಾಗತ
ಕಲಬುರಗಿ:ಮಾ.09: “ಕರ್ನಾಟಕ ಸಮಾಜ ಸುಧಾರಕರ ನಾಡು, ಇಂದು ನಾವು ಎದುರಿಸುತ್ತಿರುವ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಮಹಾತ್ಮಾ ಬಸವೇಶ್ವರರು 12ನೇ ಶತಮಾನದಲ್ಲಿಯೇ ಪರಿಹಾರಗಳನ್ನು ನೀಡಿದ್ದಾರೆ” ಎಂದು ಕಲಬುರಗಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಮೋಹನ್ ಬಡಗಂಡಿ ಹೇಳಿದರು. ಇಂದು ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಐಐಟಿ ಕಾನ್ಪುರದ ಯುವ ಸಂಗಮ ವಿದ್ಯಾರ್ಥಿಗಳ ಕರ್ನಾಟಕ ಪ್ರವಾಸದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ನಮ್ಮ ಪೀಳಿಗೆಗಿಂತ ಇಂದಿನ ಪೀಳಿಗೆಯು ಎಲ್ಲಾ ಆಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಹೊಂದಿದೆ. ನಾವು ಪ್ರಗತಿ ಸಾಧಿಸುತ್ತಿರುವುದು ಒಳ್ಳೆಯದು ಮತ್ತು ಈ ಪ್ರಗತಿಯನ್ನು ಮಾನವ ಹಿತರಕ್ಷಣೆಗಾಗಿ ಬಳಸಿಕೊಳ್ಳುಬೇಕು. ಆದರೆ ಇಂದು ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಸೌಹಾರ್ದತೆ ಕಡಿಮೆಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಂದು ನಾವು ಜಾತಿ ವ್ಯವಸ್ಥೆ, ಲಿಂಗ ತಾರತಮ್ಯ, ಆರ್ಥಿಕ ಅಸಮಾನತೆ ಮುಂತಾದ ಹಲವಾರು ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆದರೆ ಬಸವೇಶ್ವರರು 12 ನೇ ಶತಮಾನದಲ್ಲಿಯೇ ಈ ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಮತ್ತು ಅವುಗಳಿಗೆ ಪರಿಹಾರವನ್ನು ಒದಗಿಸಿದ್ದಾರೆ. ನೀವು ಇಂದು ಶರಣರ ನಾಡಿಗೆ ಬಂದಿದ್ದಿರಿ ಮತ್ತು ಬಸವಕಲ್ಯಾಣಕ್ಕೆ ಭೇಟಿ ನೀಡಿದಾಗ ಅವರ ಬಗ್ಗೆ ಇನ್ನಷ್ಟು ತಿಳಿಯುವಿರಿ. ಬಸವೇಶ್ವರರು ಬೋಧಿಸಿದ ತತ್ವಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅವರ ಒಂದು ವಚನ ‘ಕಳಬೇಡಿ, ಕೊಲಬೇಡಿ..’ ಬಹಳ ಪ್ರಸಿದ್ಧವಾಗಿದೆ ಮತ್ತು ಅನೇಕ ನೈತಿಕ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಹೊಂದಿದೆ. ಇಂದು ನಾವು ಕರ್ತವ್ಯಕ್ಕಿಂತ ನಮ್ಮ ಹಕ್ಕುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದೇವೆ. ನಾವೆಲ್ಲರೂ ಈ ದೇಶದ ಬಗ್ಗೆ ನಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನಮ್ಮ ಶ್ರೀಮಂತ ಪರಂಪರೆ ಮತ್ತು ಸಂಸ್ಕøತಿಯನ್ನು ರಕ್ಷಿಸಬೇಕು. ಇದು ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಕರ್ನಾಟಕದ ಭೇಟಿಯನ್ನು ಆನಂದಿಸಿರಿ ಮತ್ತು ಒಳ್ಳೆಯ ನೆನಪುಗಳನ್ನು ಒಯ್ಯಿರಿ” ಎಂದು ಅವರು ಹೇಳಿದರು.
ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ನಮ್ಮ ದೇಶ ಅದ್ಭುತವಾಗಿದೆ; ಅದು ಏಕ ಭಾರತ ಶ್ರೇμï್ಠ ಭಾರತವಾಗಿದೆ. ನೀವು ಉತ್ತರ ಪ್ರದೇಶದ ವಿವಿಧ ಸಂಸ್ಥೆಗಳು, ಬೇರೆ ಬೇರೆ ಅಧ್ಯಯನ ನಿಕಾಯಗಳಿಂದ ಮತ್ತು ಪ್ರದೇಶಗಳಿಂದ ಬಂದಿದ್ದೀರಿ, ಆದರೆ ನೀವೆಲ್ಲರೂ ಒಂದೇ. ನಿಮ್ಮಲ್ಲಿ ತಾರತಮ್ಯ ಮಾಡಬಾರದು. ನಮ್ಮ ದೇಶ ಮಹಿಳೆಯರನ್ನು ಗೌರವಿಸುವುದಕ್ಕೆ ಹೆಸರುವಾಸಿಯಾಗಿದೆ. ಸಂಸತ್ತು ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಿದ್ದೇವೆ. ಕರ್ನಾಟಕ ಸಮಾಜ ಸುಧಾರಕರು ಮತ್ತು ಬುದ್ಧಿಜೀವಿಗಳಿಗೆ ಹೆಸರುವಾಸಿಯಾಗಿದೆ. ಇದು ಬಹಳ ಅದ್ಭುತವಾದ ರಾಜ್ಯವಾಗಿದೆ. ಭಗವಾನ ಬಸವೇಶ್ವರರು 12 ನೇ ಶತಮಾನದಲ್ಲಿಯೇ ಅನುಭವ ಮಂಟಪವನ್ನು ಸ್ಥಾಪಿಸಿದ್ದಾರೆ ಅದನ್ನು ಆಧ್ಯಾತ್ಮಿಕ ಸಂಸತ್ತು ಎಂದು ಕರೆಯಲಾಗುತ್ತದೆ. ಈ ಭೂಮಿ ಜಗತ್ತಿಗೆ ಪ್ರಜಾಪ್ರಭುತ್ವವನ್ನು ನೀಡಿದೆ. ಹಿಂದೂ ಉತ್ತರಾಧಿಕಾರ ಕಾನೂನು ಗ್ರಂಥ ಮಿತಾಕ್ಷರವನ್ನು ಬರೆದ ವಿಜ್ಞಾನೇಶ್ವರ ಇದೆ ಭಾಗದ ಮರತೂರು ಗ್ರಾಮದವನು. ನೀವು ರಾಮನ ಭೂಮಿಯಿಂದ ಹನುಮಂತನ್ನಲ್ಲಿಗೆ ಬಂದಿದ್ದೀರಿ. ಅವನ ಜನ್ಮಸ್ಥಳ ಕಿಸ್ಕಿಂದಿ ಅದು ಕೂಡ ಇದೆ ಪ್ರದೇಶದಲ್ಲಿದೆ. ಭಾರತದ ಏಕತೆಗೆ ಕರ್ನಾಟಕ ಅಪಾರ ಕೊಡುಗೆ ನೀಡಿದೆ. ನಿಮ್ಮ ಭೇಟಿಯ ಸಮಯದಲ್ಲಿ ಕರ್ನಾಟಕದ ಶ್ರೀಮಂತ ಪರಂಪರೆ, ಸಂಸ್ಕೃತಿ, ಆಹಾರ ಪದ್ಧತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ ಮತ್ತು ಅದನ್ನು ಆನಂದಿಸಿ” ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಸಿಯುಕೆಯ ಯುವ ಸಂಗಮ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ವೀರೇಶ ಕಸಬೇಗೌಡರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ “ಯುವ ಸಂಗಮ ಕಾರ್ಯಕ್ರಮವನ್ನು ಯುವಕರಲ್ಲಿ ಭಾರತದ ಪ್ರಗತಿ, ಕೈಗಾರಿಕೆ (ಪ್ರದ್ಯೋಗಿಕಿ), ಪ್ರವಾಸೋದ್ಯಮ ಮತ್ತು ಪ್ರವಾಸ (ಪರ್ಯಟನ), ಸಂಸ್ಕೃತಿ ಮತ್ತು ಪರಂಪರೆ (ಪರಂಪರಾ) ಯ ಬಗೆಗೆ ಮಾಹಿತಿ ನಿಡುವ ಮತ್ತು ಜನರ ನಡುವೆ ಪರಸ್ಪರ ಸಂಪರ್ಕ ಬೆಸೆಯುವ ಉದ್ದೇಶದಿಂದ ಈ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಪ್ರವಾಸದಲ್ಲಿ ನೀವು ಸಿಯುಕೆಯ ಜೊತೆಗೆ ಬಸವಕಲ್ಯಾಣ, ಬೀದರ್, ಐಐಟಿ ಧಾರವಾಡ, ಇಸ್ರೋ ಮತ್ತು ಐಐಎಂ ಬೆಂಗಳೂರು ಮತ್ತು ಮೈಸೂರಿಗೆ ಭೇಟಿ ನೀಡಲಿದ್ದೀರಿ. ನಿಮ್ಮೆಲ್ಲರಿಗೂ ಸಂತೋಷಕರ ಮತ್ತು ಸುರಕ್ಷಿತ ಪ್ರಯಾಣವನ್ನು ನಾವು ಬಯಸುತ್ತೇವೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗೌರವಾನ್ವಿತ ಕುಲಪತಿಗಳು ಈ ಭೇಟಿಯ ವಿಶೇಷ ಸ್ಮರಣಾರ್ಥವಾಗಿ ಐಐಟಿಯ ಎಲ್ಲಾ ಪ್ರಾಧ್ಯಾಪಕರಿಗೆ ವಚನ ವ್ಯಕ್ತಿತ್ವ ವಿಕಸನ ಪುಸ್ತಕಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಐಐಟಿ ಕಾನ್ಪುರದ ಪ್ರಾಧ್ಯಾಪಕ ಡಾ.ಗುರುರಾಜ್ ವಿಲ್ಲೆ, ಡಾ.ವಿಜಯಕುಮಾರ್ ಪಾಂಡೆ ಅವರು ಮಾತನಾಡಿ, ಈ ಅದ್ಭುತ ಅವಕಾಶಕ್ಕಾಗಿ ನಾವು ಸಿಯುಕೆ ಮತ್ತು ಶಿಕ್ಷಣ ಸಚಿವಾಲಯಕ್ಕೆ ಕೃತಜ್ಞರಾಗಿರುತ್ತೇವೆ ಮತ್ತು ಕರ್ನಾಟಕವನ್ನು ಅನ್ವೇಷಿಸಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.
ಡಾ.ನೀತಿನ್ ಬಿ ಕಾರ್ಯಕ್ರಮ ನಿರೂಪಿಸಿದರು, ಡಾ.ಸಂಗಮೇಶ್ ವಂದಿಸಿದರು. ಡಾ.ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಹಾಡಿದರೆ, ಕುಮಾರ ಆಯುμï ಮಿಶ್ರಾ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಯುವ ಸಂಗಮ ಕಾರ್ಯಕ್ರಮದ ಅಡಿಯಲ್ಲಿ ಐಐಟಿ ಕಾನ್ಪುರ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ಸಿಯುಕೆ ವಿದ್ಯಾರ್ಥಿಗಳಾದ ಕಾವೇರಿ ಮತ್ತು ಕೋಮಲ ತಮ್ಮ ಅನುಭವವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಡಾ.ನಾಗರಾಜ ಧಾರವಾಡಕರ, ಡಾ.ಬಸವರಾಜ ಎಂ.ಎಸ್., ಡಾ.ಎನ್.ಬಾಬು, ಡಾ.ಮಲ್ಲಿಕಾರ್ಜುನ್, ಡಾ.ಗಣಪತಿ ಬಿ.ಸಿನ್ನೂರ, ಡಾ. ಶಿವಾ ಎಂ, ಡಾ. ಜಗದೀಶ ಬಿರಾದಾರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.