ಮಾ.11ರಂದು ವಿಶ್ವಕರ್ಮ ಮಠಾಧಿಪತಿಗಳ, ಸ್ವಾಮೀಜಿಗಳ ರಾಜ್ಯ ಮಟ್ಟದ ವೇದಿಕೆ ಉದ್ಘಾಟನೆ
ಕಲಬುರಗಿ:ಮಾ.09: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಮಾರ್ಚ್ 11ರಂದು ಬೆಳಿಗ್ಗೆ 11 ಗಂಟೆಗೆ ಅಖಿಲ ಕರ್ನಾಟಕ ವಿಶ್ವಕರ್ಮ ಮಠಾಧಿಪತಿಗಳ ಮತ್ತು ಸ್ವಾಮೀಜಿಗಳ ರಾಜ್ಯ ಮಟ್ಟದ ಸಂಘಟನೆ ವೇದಿಕೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಹಿತ್ ವೈ. ವಿಶ್ವಕರ್ಮ ಕಲ್ಲೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಂಘಟನೆಯೊಂದಿಗೆ ಅನೇಕ ಪೂಜ್ಯರೂ ಸಹಕರಿಸಿದರೂ ಕೂಡ ಪೂರ್ಣ ಪ್ರಮಾಣದಲ್ಲಿ ಸಮಾಜದ ಬೆಳವಣಿಗೆ ಆಗಿಲ್ಲ. ಈಗ ಸಂಘಟನೆಯ ಮೂಲಕ ಎಲ್ಲ ನ್ಯೂನ್ಯತೆಗಳಿಂದ ಹೊರಬಂದು ಸಮಾಜಕ್ಕೆ ಶಕ್ತಿ ತುಂಬುವ ಕನಸು, ನನಸು ಮಾಡಲಾಗುತ್ತಿದೆ ಎಂದರು.
ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಮಾಜದ ಅಸ್ತಿತ್ವ ಉಳಿಸಿಕೊಂಡು ಪ್ರತಿ ತಾಲ್ಲೂಕು ಹಾಗೂ ಜಿಲ್ಲೆಯಲ್ಲಿ ಭಗವಾನ್ ಸೃಷ್ಟಿಕರ್ತ ಶ್ರೀ ವಿಶ್ವಕರ್ಮರ ಮೂರ್ತಿ ಮತ್ತು ಅಮರ ಶಿಲ್ಪಿ ಜಕಣಾಚಾರ್ಯರ ಪುತ್ಥಳಿ ಸ್ಥಾಪಿಸುವ ನಿಟ್ಟಿನಲ್ಲಿ ಹಾಗೂ ವಿಶ್ವಕರ್ಮರ ಉದ್ಧಾರಕ್ಕಾಗಿ ಹೋರಾಟ ಮಾಡಬೇಕಾಗಿದೆ. ಹಾಗಾಗಿ ವೇದಿಕೆಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಉದ್ಘಾಟನೆಯನ್ನು ಕರದಾಳ್‍ದ ಬ್ರಹ್ಮಶ್ರೀ ನಾರಾಯಣ ಶಕ್ತಿ ಪೀಠದ ಡಾ. ಪ್ರಣವಾನಂದ್ ಮಹಾಸ್ವಾಮೀಜಿ ನೆರವೇರಿಸುವರು. ಅಧ್ಯಕ್ಷತೆಯನ್ನು ರಾಜ್ಯ ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ, ದಿವ್ಯ ಸಾನಿಧ್ಯವನ್ನು ಅಫಜಲಪುರದ ಚಿಕ್ಕೇಂದ್ರ ಮಹಾಸ್ವಾಮೀಜಿ, ಮೌನೇಶ್ವರ್ ಮಹಾಸ್ವಾಮೀಜಿ, ಬ್ರಹ್ಮಾನಂದ್ ಮಹಾಸ್ವಾಮೀಜಿ, ಹುಮ್ನಾಬಾದ್‍ನ ಶ್ರೀನಿವಾಸ್ ಮಹಾಸ್ವಾಮೀಜಿ, ಕಲಬುರ್ಗಿಯ ಸುರೇಂದ್ರ ಮಹಾಸ್ವಾಮೀಜಿ, ನಾಗಮೂರ್ತಿ ಮಹಾಸ್ವಾಮೀಜಿ, ಕಮಲಾಪುರದ ಶರಣ ಶಂಕರಲಿಂಗ ಮಹಾರಾಜರು, ಅಳ್ಳೊಳ್ಳಿಯ ನಾಗಪ್ಪಯ್ಯ ಮಹಾಸ್ವಾಮೀಜಿ, ಯಾದಗಿರಿಯ ರವೀಂದ್ರ ಮಹಾಸ್ವಾಮೀಜಿ, ಕುಮಾರ್ ಮಹಾಸ್ವಾಮೀಜಿ, ನರಗುಂದದ ಅಭಿನವ ಯಚ್ಚರ ಸ್ವಾಮೀಜಿ, ಸುಲೇಪೇಟ್‍ದ ಚಂದ್ರಶೇಖರ್ ಮಹಾಸ್ವಾಮೀಜಿ, ಚಿಕ್ಕುಂಬೆಯ ಅಜಾತನಾಗಲಿಂಗ ಮಹಾಸ್ವಾಮೀಜಿ, ಕಾಳಬೆಳಗುಂದಿಯ ಉತ್ತಪ್ಪ ತಾತ, ಕಂಚಗಾರ ಹಳ್ಳಿಯ ಗಂಗಾಧರ್ ಮಹಾಸ್ವಾಮೀಜಿ ಅವರು ವಹಿಸುವರು ಎಂದು ಅವರು ತಿಳಿಸಿದರು.
ಸಾನಿಧ್ಯವನ್ನು ಸುಗೂರಿನ ಡಾ. ಚನ್ನರುದ್ರಮುನಿ ಶಿವಾಚಾರ್ಯರು, ತೊನಸನಹಳ್ಳಿಯ ಮಲ್ಲಣ್ಣಪ್ಪ ಮುತ್ಯಾ, ನದಿ ಸಿನ್ನೂರಿನ ಗುರುರಾಜೇಂದ್ರ ಶಿವಯೋಗಿಗಳು, ಶಹಾಬಾದ್‍ನ ಅಪ್ಪಣ್ಣ ವೀರದೇವರು, ಗಣಜಲಖೇಡದ ನಾಗೇಶ್ ಮುತ್ಯಾ, ಕಲಬುರ್ಗಿಯ ಈರಣ್ಣ ಮುತ್ಯಾ, ಡೊಣ್ಣೂರಿನ ಈರಣ್ಣ ಮುತ್ಯಾ, ಮಂಗಲಗಿಯ ಗುರುನಾಥ್ ಮಹಾರಾಜರು, ಕುಕ್ಕುಂದಾದ ಮೌನೇಶ್ ಆಚಾರ ಪುರೋಹಿತರು, ಚಿತ್ತಾಪುರನ ಶ್ರೀನಿವಾಸ್ ಆಚಾರ್ ಪುರೋಹಿತರು ವಹಿಸುವರು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಂಸದ ಡಾ. ಉಮೇಶ್ ಜಾಧವ್, ಶಾಸಕರಾದ ಬಸವರಾಜ್ ಮತ್ತಿಮೂಡ್, ಅಲ್ಲಮಪ್ರಭು ಪಾಟೀಲ್, ಡಾ. ಅಜಯಸಿಂಗ್, ಶ್ರೀಮತಿ ಕನೀಜ್ ಫಾತಿಮಾ, ಡಾ. ಅವಿನಾಶ್ ಜಾಧವ್, ಬಿ.ಜಿ. ಪಾಟೀಲ್, ಶಶೀಲ್ ಜಿ. ನಮೋಶಿ, ಅರವಿಂದ್ ಅರಳಿ, ಮಹಾಪೌರ ವಿಶಾಲ್ ದರ್ಗಿ, ಉಪ ಮಹಾಪೌರ ಶಿವಾನಂದ್ ಪಿಸ್ತಿ, ಮಾಜಿ ಸಚಿವ ಮಾಲಿಕಯ್ಯ ವಿ. ಗುತ್ತೇದಾರ್, ಮಾಜಿ ಶಾಸಕರಾದ ರಾಜಕುಮಾರ್ ಪಾಟೀಲ್ ತೆಲ್ಕೂರ್, ಸುಭಾಷ್ ಆರ್. ಗುತ್ತೇದಾರ್, ದತ್ತಾತ್ರೇಯ್ ಪಾಟೀಲ್ ರೇವೂರ್, ಮುಖಂಡರಾದ ಚಂದು ಪಾಟೀಲ್, ಬಾಲರಾಜ್ ಗುತ್ತೇದಾರ್, ಅವ್ವಣ್ಣ ಮ್ಯಾಕೇರಿ, ಸತೀಶ್ ಗುತ್ತೇದಾರ್, ವಿಜಯಕುಮಾರ್ ಪತ್ತಾರ್, ಮಹಾಂತೇಶ್ ಪಾಟೀಲ್, ಲೋಹಿತ್ ವಿಶ್ವಕರ್ಮ ಮುಂತಾದವರು ಆಗಮಿಸುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದೊಡ್ಡೇಂದ್ರ ಸ್ವಾಮೀಜಿ ಅಶೋಕ್ ಎಸ್. ಪೋದ್ದಾರ್, ಜಿಲ್ಲಾಧ್ಯಕ್ಷ ಕಮಲಾಕರ್ ವಿಶ್ವಕರ್ಮ ಅರಣಕಲ್, ಸುನೀಲ್ ವಿಶ್ವಕರ್ಮ ದಿಕ್ಸಂಗಿ, ಶ್ರೀಮತಿ ಚಿತ್ರಲೇಖಾ ಅ. ಟೆಂಗಳಿಕರ್, ಹಣಮಂತರಾವ್ ವಿಶ್ವಕರ್ಮ ರಾಜಾಪುರ, ಈರಣ್ಣ ಮುತ್ಯಾ ಕಣಮಸ್, ವಿಶ್ವಂಬರ್ ವಿಶ್ವಕರ್ಮ, ಶಿವಾನಂದ್ ಸುತಾರ್ ಕಲ್ಲೂರ್ ಮುಂತಾದವರು ಉಪಸ್ಥಿತರಿದ್ದರು.