ಈಶ್ವರ ಖಂಡ್ರೆ ವಿರುದ್ಧ ಬಿ.ಆರ್ ಪಾಟೀಲ ಅಸಮಾಧಾನ
ಕಲಬುರಗಿ,ಮಾ.9: ಸಚಿವ ಈಶ್ವರಖಂಡ್ರೆಯವರು ನನಗೆ ಎರಡನೇ ಭಾರಿ ಅಪಮಾನ ಮಾಡಿದ್ದಾರೆ ಎಂದು ಖಂಡ್ರೆ ವಿರುದ್ದ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ,ಅಳಂದ ಶಾಸಕ ಬಿ.ಆರ್.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊನ್ನೆ ನಡೆದ ಬಸವಕಲ್ಯಾಣದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನನಗೆ ಮೊದಲನೇ ಸಾಲಿನಲ್ಲಿ ಆಸನ ವ್ಯವಸ್ಥೆ ಇರಲಿಲ್ಲ.ಅವರೇ ಪೆÇೀನ್ ಮಾಡಿ ಕರೀತಾರೆ.ಮತ್ತೆ ಅಪಮಾನ ಮಾಡ್ತಾರೆ.ಇನ್ಮೇಲೆ ಅವರ ಜೊತೆ ನಾನು ವೇದಿಕೆ ಹಂಚಿಕೊಳ್ಳುವದಿಲ್ಲ ಎಂದಿದ್ದಾರೆ.
ನನ್ನನ್ನು ಯಾರೂ ಅಪಮಾನ ಮಾಡಲು ಆಗುವದಿಲ್ಲ.ಏಲೆಕ್ಷನ್ ಮಾಡುವದಕ್ಕೆ ದುಡ್ಡು ಬೇಕು.ಕಾಂಗ್ರೆಸ್ ಒಂದೇ ಅಲ್ಲ ಎಲ್ಲಾ ಪಾರ್ಟಿಗಳಲ್ಲೂ ದುಡ್ಡು ಬೇಕು.ನಾನು ಕೂಡಾ ಬೀದರ್ ಟಿಕೆಟ್ ಆಕಾಂಕ್ಷಿಯಿದ್ದೇನೆ.ಆದರೆ ಪಾರ್ಟಿ ಯಾರಿಗೆ ಟಿಕೆಟ್ ಕೊಡುತ್ತದೆ ಅವರಿಗೆ ನಾವು ಬೆಂಬಲ ಕೊಡುತ್ತೇನೆ.ಈಶ್ವರ ಖಂಡ್ರೆ ಅವರ ಪುತ್ರನಿಗೂ ಟಿಕೆಟ್ ಕೊಟ್ಟರೂ ನಾನು ಬೆಂಬಲ ಕೊಡುತ್ತೇನೆ.ಇದು ನನ್ನ ವೈಯುಕ್ತಿಕ ಸಮಸ್ಯೆ.ನಾನೇ ಬಗೆಹರಿಸಿಕೊಳ್ಳುತ್ತೇನೆ.ನಾನು ಸಮಾಜವಾದಿ ಮನುಷ್ಯ.ನನಗೆ ಸ್ವಾಭಿಮಾನ ಮುಖ್ಯ,ಯಾವುದೇ ಸ್ಥಾನಮಾನ ಮುಖ್ಯ ಅಲ್ಲ ಎಂದು ಬಿ.ಆರ್.ಪಾಟೀಲ್ ಹೇಳಿದ್ದಾರೆ.