ಅಮರೇಶ್ವರ ಜಾತ್ರಾ ಮಹೋತ್ಸವ ವಿಶೇಷ ಸಂಚಿಕೆ ಬಿಡುಗಡೆ
ಔರಾದ :ಮಾ.9: ಮಹಾ ಶಿವರಾತ್ರಿ ಪ್ರಯುಕ್ತ ನಡೆಯುವ ಸುಕ್ಷೇತ್ರ ಔರಾದ ಉದ್ಭವಲಿಂಗ ಶ್ರೀ ಅಮರೇಶ್ವರರ ಜಾತ್ರಾ ಮಹೋತ್ಸವದ ಸಂಜೆವಾಣಿ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಅರಣ್ಯ ಖಾತೆ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಈಶ್ವರ. ಬಿ. ಖಂಡ್ರೆ ಅವರು ಬಿಡುಗಡೆಗೊಳಿಸಿದರು.
ಉದ್ಭವಲಿಂಗ ಅಮರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆವಾಣಿ ದಿನಪತ್ರಿಕೆ ಹೊರ ತಂದ ವಿಶೇಷ ಸಂಚಿಕೆಯಲ್ಲಿ ಅಮರೇಶ್ವರ ಇತಿಹಾಸ ಚನ್ನಾಗಿ ಮೂಡಿ ಬಂದಿದೆ ಎಂದು ಶುಭ ಹಾರೈಸಿದರು. ಇಂದಿನ ಸುದ್ದಿಗಳನ್ನು ಇಂದೇ ರಾಜ್ಯದ ಜನತೆಗೆ ತಾಜಾ ಸುದ್ದಿಗಳನ್ನು ವೇಗವಾಗಿ ಬಿತ್ತರಿಸುತ್ತಿರುವ ಸಂಜೆ ಸಮಯದ ಪತ್ರಿಕೆ ಜನಮನದಲ್ಲಿ ಅಚ್ಚಳಿಯದೆ ಉಳಿದುಕೊಂಡಿರುತ್ತದೆ. ಸಂಜೆವಾಣಿ ಪತ್ರಿಕೆ ಹೀಗೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಮರೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ, ಡಾ. ಶಂಕರರಾವ ದೇಶಮುಖ, ಸುನೀಲಕುಮಾರ ದೇಶಮುಖ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವ್ಹಾಣ, ರಾಮಣ್ಣ ವಡಿಯಾರ, ಸುಧಾಕರ ಕೊಳ್ಳುರ, ಶಂಕು ನಿಶ್ಪತೆ, ಅನಿಲ ಬೆಲೂರೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.