ಶಿಕ್ಷಕರು ವಿಧ್ಯಾರ್ಥಿಗಳಿಗೆ ಶಿಕ್ಷಣ ಜೊತೆ ಮಾನವೀಯ ಮೌಲ್ಯಗಳನ್ನು ಕಲಿಸಿ: ಶರಣಬಸಪ್ಪಾ ಕಾಂಬಳೆ
ಇಂಡಿ:ಮಾ.9: ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ,ಮಾನವೀಯ ಮೌಲ್ಯಗಳನ್ನು ಕಲಿಸಿ ದೇಶದ ಉತ್ತಮ ನಾಗರೀಕರ ಸಮಾಜ ನಿರ್ಮಿಸುವಲ್ಲಿ ಪ್ರೇರೆಪಿಸಬೇಕು ಎಂದು ವಿಶ್ವವಾಣಿ ಪತ್ರಕರ್ತ ಶರಣಬಸಪ್ಪಾ ಕಾಂಬಳೆ ಹೇಳಿದರು.
ಕಿತ್ತೂರ ರಾಣಿ ಚೆನ್ನಮ್ಮಾ ಕಿರಿಯ ಪ್ರಾಥಮಿಕ ಶಾಲೆ, ಶ್ರೀಶಾಂತೇಶ್ವರ ಸಂಸ್ಕøತ ಪಾಠ ಶಾಲೆಯಲ್ಲಿ ಎರ್ಪಡಿಸಿದ 14 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಬರೀ ಓದು ಬರಹ ಕಲಿಸುವ ಯಂತ್ರಗುರುವಲ್ಲ ಚಿಂತನಾಶೀಲ, ಕ್ರೀಯಾಶೀಲ, ಅಧ್ಯಾಯನಶೀಲ, ವಿಧ್ವಾಂಸ, ಪ್ರೇಮಮಯಿ, ದೀನ ಬಂಧು, ಶ್ರಮಸಂಸ್ಕøತಿ, ಸಮಯಪಾಲನೆ ಇರಬೇಕು ಹಾಳುಹರಟೆಯಲ್ಲ ಗುರುವಾಣಿ ಅದು ನುಡಿ ನೈವಿದ್ಯ ಎಂದರು.
ಇಂದು ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಿ ಎಲ್ಲಾ ಜವಾಬ್ದಾರಿ ಶಿಕ್ಷಕರ ಮೆಲೆ ಹಾಕಿ ಕುಳಿತರೆ ಸಾಲದು ಪಾಲಕ, ಪೋಷಕರು ಮಕ್ಕಳ ಬಗ್ಗೆ ಸದಾ ಎಚ್ಚರಿಕೆಯಿಂದಿರಬೇಕು.ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ . ವೇದಿಕೆ ಮೇಲ್ಲಿದ್ದವರೆಲ್ಲಾ ಪಾಲೇರ್ಜಿಗಳು ಈಗಿನ ವಿಧ್ಯಾರ್ಥಿಗಳೇಲ್ಲ 2ಜಿ, 3ಜಿ,4ಜಿ,5ಜಿ ಕಾಲದವರು ನೀವು ನಾವೇಲ್ಲ ಬುಕ್ಕ ಪ್ರೇಮಿಗಳು ಇಂದಿನ ವಿಧ್ಯಾರ್ಥಿಗಳು ಫೇಸ್ ಬುಕ್ಕ ಪ್ರೇಮಿಗಳು ಹೀಗಾಗಬಾರದು. ಮೋಬಾಯಿಲ್ ಗೀಳು ಕಡಿಮೆ ಇರಲಿ ಸದಾ ವಿಧ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಇರಲಿ
ಪುಸ್ತಕಗಳನ್ನು ಯಾರೂ ಪ್ರೀತಿಸುತ್ತಾರೆಯೂ ಅವರು ಪುಸ್ತಕ ಪೂಜಾರಿಗಳಾಗುತ್ತಾರೆ. ಇತಿಹಾದಲ್ಲಿರುವ ಆದರ್ಶ ವ್ಯಕ್ತಿಗಳ ಜೀವನ ಚರೀತ್ರೆ ಚರೀತ್ರೆ ತಿಳಿದು ಆದರ್ಶ ವ್ಯಕ್ತಿಗಳಾಗಿ .
ಮನುಷ್ಯನಿಗೆ ಅಸಾಧ್ಯವಾದುದ್ದು ಯಾವುದು ಇಲ್ಲ ಕಲಿಕೆಗೆ ಬಡತನ ಅಡ್ಡ ಬರುವುದಿಲ್ಲ ಇಂದು ತಂದೆ ತಾಯಿಗಳು ದುಡಿಯಲು ಗುಳೆ ಹೋಗುತ್ತಾರೆ ದಯಮಾಡಿ ಸರಕಾರ ವಿಧ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಮಾಡಿದೆ ಅದರ ಸದುಪಯೋಗ ಪಡೆಯಿರಿ, ಕಾಳಿದಾಸ ಕುರಿ ಕಾಯುವ ವ್ಯಕ್ತಿ ಮಹಾಕವಿಯಾದ. ಡಾ.ಬಿ.ಆರ್ ಅಂಬೇಡ್ಕರ ಬಡತನ ಇದ್ದರೂ ಕತ್ತಲೆಯಲ್ಲಿ ಕುಳಿತು ಈ ದೇಶದ ಹಣೆಬರಹ ಬರೇದ ಬ್ರಹ್ಮ ಎಂದರೆ ತಪ್ಪಾಗುವುದಿಲ್ಲ. ಎ.ಪಿ.ಜೆ ಅಬ್ದುಲ ಕಲಾಂ ಪೇಪರ್ ಹಾಕುವ ಬಾಲಕ ಇಂದು ರಾಷ್ಟ್ರಪತಿಯಾಗಿ ಭಾರತ ದೇಶದ ಬಹುದೊಡ್ಡ ವಿಜ್ಞಾನಿಯಾದರು ಆದ್ದರಿಂದ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ತಂದೆ, ತಾಯಿ, ಶಿಕ್ಷಕ ಮೂರು ಜನರ ಪಾತ್ರ ಮುಖ್ಯ. ಶಿಕ್ಷಕ ಸಮಾಜದ ಒಳ ಹೊರಗೂ ಆದರ್ಶ ವ್ಯಕ್ತಿಯಾಗಿರಬೇಕು ,ಮಕ್ಕಳ ಸ್ವಭಾವ ಅನುಕರಣಿಯವಾಗಿದೆ ಎಂದು ನುಡಿದರು.
ವಿಧ್ಯಾರ್ಥಿಜೀವನ ಬಂಗಾರವಿದ್ದಂತೆ 25 ವರ್ಷ ಖುಷೀ ಮುನಿಗಳು ತಪ್ಪಸ್ಸು ಮಾಡಿದಂತೆ ನಿರಂತರ ಅಧ್ಯಾಯನ ಮಾಡಿದರೆ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ವಿಧ್ಯಾರ್ಥಿಗಳಿಗೆ ಗುರಿ ಇರಲಿ ಗುರು ಹಿಂದೆ ಇರುತ್ತಾನೆ ಎಂದು ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಜಿ.ಜಿ ಬರಡೋಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಟಿ.ಎಂ.ವ್ಹಿ ಸಂಘದ ತಡವಲಗಾ ಕಾರ್ಯದರ್ಶಿ ಅನೀಲ ಪತಂಗೆ , ಸಂಸ್ಥೆಯ ಅಧ್ಯಕ್ಷ ಎಂ.ಎಸ್ ಇಂಡಿ.ಎಸ್.ಎಸ್ ಮಣ್ಣೂರ, ಅಶೋಕುಮಾರ ಎಚ್ ಕೆ, ವಾಯ್ ತಳವಾರ್, ಪಿಂಟು ರಾಠೊಡ, ಆಯ್,.ಸಿ ಪೂಜಾರ, ಎಸ್.ಎಸ್ ಇಂಡಿ, ಜಟ್ಟೆಪ್ಪ ಬಿ, ಸಿದ್ದು ಡಂಗಾ,ಎಸ್ ಆರ್ ಬಿರಾದಾರ, ಶ್ರೀಶೈಲ ಬಜೇಂತ್ರಿ, ಮುಖ್ಯ ಗುರುಗಳಾದ ಸುರೇಶ ಮಿರಗಿ, ಶಿಕ್ಷಕರಾದ ವಾಯ್,ಆರ್ ಗೋಳಸಂಗಿ ಶ್ರೀಮತಿ ಎಸ್.ಎಸ್ ಕಟ್ಟಿಮನಿ, ಪ್ರತೀಬಾ ನಾಯಕ, ಲಕ್ಷ್ಮೀ ಕಾಳೆ, ಚೆನ್ನಮ್ಮಾ ನಾಟೀಕಾರ, ಎಸ್,ಎಸ್ ತಾಂಬೆ, ಪ್ರೇರಣಾ ಲಂಬು , ಎಸ್ ಬಿ ಪಾಟೀಲ, ಎಸ್.ಎಸ್ ಇಂಡಿ,ಆಕಾಶ ಇಂಡಿ, ಎಸ್,ಎಚ್ ಇಂಡಿ ಸೇರಿದಂತೆ ಶಿಕ್ಷಕರು ಸಿಬಂದ್ದಿ ಉಪಸ್ಥಿತರಿದ್ದರು.