ಗಡಿಭಾಗದ ಸಿನೇಮಾ ಪ್ರತಿಭೆ ಸತೀಶ ನೀಲಕಂಠ ಚವ್ಹಾಣ
ಇಂಡಿ:ಮಾ.9: ತಾಂಡೇರ್ ತಾರಾ ಚಿತ್ರದಲ್ಲಿ ಗಡಿಭಾಗ ಇಂಡಿ ಪಟ್ಟಣದ ಪ್ರತಿಭೆ ಸತೀಶ ನೀಲಕಂಠ ಚವ್ಹಾಣ ಇವರು ಅಭಿನಯಿಸಿದ್ದಾರೆ.
ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣದ ಸತೀಶ ನೀಲಕಂಠ ಚವ್ಹಾಣ ಇವರು ತಾಂಡೇರ್ ತಾರಾ ಚಿತ್ರದಲ್ಲಿ ಖಳನಾಯಕನ ಪಾತ್ರ ಅಭಿನಯಿಸಿ ತಾಲೂಕಿನ ಯುವ ಪ್ರತಿಭೆ ಇಂಡಿ ಪಟ್ಟಣಕ್ಕೆ ಮತ್ತೋಂದು ಹಿರಿಮೆ ಹೆಚ್ಚಿಸಿದಂತಾಗಿದೆ. ಇವರು ಅಭಿನಯಿಸಿರುವ ಚಿತ್ರವು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದು ಇವರ ಅಭಿನಯಕ್ಕಾಗಿ ಉತ್ತಮ ಪ್ರಸಂಶೆಗಳು ದೊರೆತ್ತಿವೆ. ಈ ಚಿತ್ರವನ್ನು ಉಮೇಶ .ಪಿ ನಾಯಕ ಅವರು ನಿರ್ದೇಶನ ಮಾಡಿದ್ದು ಪ್ರಸ್ತುತ ಬೆಂಗಳೂರಿನ ಚುಚಿತ್ರ ಫಿಲಿಂ ಇನ್ಸ್ಟೊಟ್ಯೊಟ್‍ನಲ್ಲೂ ಪ್ರಶಂಸೆ ಹಾಗೂ ವಿಮರ್ಶೆಗಳಿಗೆ ಪಾತ್ರವಾಗುತ್ತಿದೆ. ಸತೀಶ ನೀಲಕಂಠ ಚವ್ಹಾಣ ಇವರು ಹಲವಾರು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದು ನಮ್ಮ ಜಿಲ್ಲೆಯ ತಾಲೂಕಿನ ಕೀರ್ತಿ ಹೆಚ್ಚಿಸಿರುವುದರಿಂದ ಬಂಜಾರ ಸಮಾಜದ ಮುಖಂಡರಾದ ಬಂಜಾರಾ ಕ್ರಾಂತಿ ದಳದ ಅಧ್ಯಕ್ಷ ಹಾಗೂ ಸಮಾದ ಹಿರಿಯ ಧುರೀಣ ಶಂಕರ ಚವ್ಹಾಣ , ಆಲ್.ಇಂಡಿಯಾ ಬಂಜಾರ ಸೇವಾ ಸಂಘ ಇಂಡಿ, ಕಾಂಗ್ರೆಸ್ ಎಸ್ಸಿ ಸಂಘಟನಾ ಸಂಚಾಲಕ ಸಂಜು ಚವ್ಹಾಣ, ಮಾಜಿ ತಾ.ಪಂ ಅಧ್ಯಕ್ಷ ಶೇಖರ ನಾಯಕ, ಧರ್ಮು ರಾಠೋಡ, ಪ್ರೋ.ವಿಜಯಕುಮಾರ ರಾಠೋಡ, ಪುರಸಭೆ ಸದಸ್ಯ ಲಿಂಬಾಜೀ ರಾಠೋಡ, ಪಿಂಟು ಚವ್ಹಾಣ , ಪ್ರಥಮ ದರ್ಜೆಯ ಗುತ್ತಿಗೆದಾರ ವಿಶ್ವನಾಥ ಚವ್ಹಾಣ, ಸಾಹಿತಿ ರಮೇಶ ರಾಠೋಡ, ಹಡಲಸಂಗ ವಿಜಯನಗರ ತಾಂಡಾದ ಗಣಪತಿ ರಾಠೋಡ. ಡಾ. ರವಿ ಜಾಧವ, ಮೋಹನ ರಾಠೋಡ ಸೇರಿದಂತೆ ಅನೇಕ ಗಣ್ಯರು ಅಭಿಮಾನಿಗಳು ಯುವ ಕಲಾವಿದನ ಪ್ರತಿಬೆ ಮತ್ತಷ್ಟು ಪ್ರಖರವಾಗಲಿ ಎಂದು ಅಭಿನಂದಿಸಿದ್ದಾರೆ.