ಮತದಾನ ಜಾಗೃತಿ: ಬೀದಿ ನಾಟಕ ಪ್ರದರ್ಶನ
ಬೀದರ್: ಮಾ.9:ಮತದಾನ ಹಾಗೂ ಮತದಾರ ಪಟ್ಟಿಗೆ ಹೆಸರು ಸೇರ್ಪಡೆ ಜಾಗೃತಿ ಕಾರ್ಯಕ್ರಮ ಹುಮನಾಬಾದ್ ಪಟ್ಟಣದ ತೇರು ಮೈದಾನ ಹಾಗೂ ನಂದಗಾಂವ್ ಗ್ರಾಮದಲ್ಲಿ ಈಚೆಗೆ ನಡೆಯಿತು.
ಉತ್ತಮ ಪ್ರತಿನಿಧಿಗಳ ಆಯ್ಕೆ ಹಾಗೂ ಸಮೃದ್ಧ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮತ ಹಕ್ಕು ಚಲಾಯಿಸಬೇಕು. 18 ವರ್ಷ ಪೂರೈಸಿದವರು ಮತದಾರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕು ಎಂದು ಮತದಾನ ಜಾಗೃತಿ ಕಾರ್ಯಕ್ರಮದ ಸಂಯೋಜಕರೂ ಆದ ರಾಷ್ಟ್ರೀಯ ಯುವ ಸೇವಕ ಲಕ್ಷ್ಮಣ ಪಿ. ಮಚಕುರೆ ಹೇಳಿದರು.
ಕಲಾವಿದರಾದ ಸಾರಿಕಾ ಪಿ, ಪ್ರವೀಣ ಶೇರಿಕಾರ್, ದಿವ್ಯ, ವಿಜಯಕುಮಾರ ಹಾಗೂ ರಾಮಣ್ಣ ಬೀದಿ ನಾಟಕ ಪ್ರದರ್ಶಿಸಿ ಮತ ಹಕ್ಕು ಚಲಾವಣೆ ಅಗತ್ಯತೆಯನ್ನು ಜನರಿಗೆ ಮನದಟ್ಟು ಮಾಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಹಾಗೂ ಮಾಡಗೂಳದ ಸ್ವಾಮಿ ವಿವೇಕಾನಂದ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.