ವಚನ ವಿಶ್ವವಿದ್ಯಾಲಯನ್ನು ಬಸವನಬಾಗೇವಾಡಿಯಲ್ಲಿ ಸ್ಥಾಪಿಸಿ:ಶಂಕರಗೌಡ ಬಿರಾದಾರ
ಬಸವನಬಾಗೇವಾಡಿ:ಮಾ.9: 12ನೇ ಶತಮಾನದಲ್ಲಿ ವಚನದ ಮೂಲಕ ಕ್ರಾಂತಿಯನ್ನು ಮಾಡಿದ ಮಹಾ ಮಾನವತವಾದಿ ವಿಶ್ವಗುರು ಬಸವಣ್ಣನವರ ಸಮಕಾಲಿನ ಶರಣರ ವಚನಗಳ ಅಧ್ಯಯನಕ್ಕಾಗಿ ವಚನ ವಿಶ್ವವಿದ್ಯಾಲಯವನ್ನು ಮುಂದಿನ ವರ್ಷ ಮುಂದಿನ ವರ್ಷ ಸರ್ಕಾರ ಆರಂಭಿಸುವುದಾಗಿ ಘೋಷಣೆ ಮಾಡಿರುವುದನ್ನು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ್ ಸ್ವಾಗತಿಸಿದ್ದಾರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಜಾತಿ ರಹಿತ ಮೂಢನಂಬಿಕೆ ರಹಿತ ಸಮಾಚಾರ ನಿರ್ಮಿಸಲು ನಡೆದ ಪರಿವರ್ತನೆಯಿಂದ ಒಂದು ಬಹುದೊಡ್ಡ ಚಳುವಳಿ ರೂಪಗೊಂಡಿತು ಇದನ್ನು ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಂಸ್ಕøತ ನಾಯಕ ಎಂದು ಘೋಷಣೆ ಮಾಡಿದರು ಇತ್ತೀಚಿಗೆ ಬಸವಕಲ್ಯಾಣದಲ್ಲಿ ನಡೆದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ಅಭಿನಂದನಾ ಸಮಾರಂಭದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಘೋಷಣೆ ಮಾಡಿರುವುದು ಸ್ವಾಗತಾರ್ಹ ವಿಷಯವಾಗಿದೆ ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರ್ಕಾರವು ಬಸವಣ್ಣನವರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ಸುಮಾರು 600 ಕೋಟಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದೆ, ಕೂಡಲಸಂಗಮದಲ್ಲಿ ವಚನ ಅಧ್ಯಯನ ಪೀಠ ಸೇರಿದಂತೆ ಬಸವಣ್ಣನವರ ಸಮಕಾಲಿನ ಶರಣರ ಸ್ಮಾರಕಗಳು ನಿರ್ಮಾಣಗೊಂಡಿದ್ದು ಸಂತೋಷದ ವಿಷಯವಾಗಿದೆ, ಇತ್ತೀಚೆಗೆ ರಾಜ್ಯ ಸರ್ಕಾರ ಬಜೆಟಿನಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಆದೇಶ ಮಾಡಿರುವುದು ಕೂಡ ಬಸವ ನಾಡಿನ ಜನತೆಯಲ್ಲಿ ಹರ್ಷ ಉಂಟು ಮಾಡಿದೆ, ಆದಕಾರಣ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ಐಕ್ಯಸ್ಥಳ ಕೂಡಲಸಂಗಮಕ್ಕೆ ಕೊಟ್ಟ ಆದ್ಯತೆಯನ್ನು ಬಸವ ಜನ್ಮ ಸ್ಥಳಕ್ಕೆ ಕೊಡಬೇಕಾಗಿ ಸರ್ಕಾರಕ್ಕೆ ನಮ್ಮ ಬೇಡಿಕೆಯಾಗಿದೆ, ವಚನ ವಿಶ್ವವಿದ್ಯಾಲಯವನ್ನು ಬಸವನಬಾಗೇವಾಡಿಯಲ್ಲಿ ಸ್ಥಾಪನೆ ಮಾಡಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇವೆ, ವಚನ ವಿಶ್ವವಿದ್ಯಾಲಯವನ್ನು ಬಸವಜನ್ಮ ಸ್ಥಳ ಬಸವನ ಬಾಗೇವಾಡಿಯಲ್ಲಿ ಸ್ಥಾಪನೆ ಮಾಡಿದರೆ ಬಸವಜನ್ಮ ಸ್ಥಳವು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ ಹಾಗೆ ಆಗುತ್ತದೆ ಇಲ್ಲಿವರೆಗೆ ಬಸವನಬಾಗೇವಾಡಿ ಪಟ್ಟಣ ಶೈಕ್ಷಣಿಕವಾಗಿ ಬಹಳಷ್ಟು ಹಿಂದುಳಿದಿದ್ದು ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದರ ಮೂಲಕ ನಮ್ಮ ಬಸವ ನಾಡಿನಲ್ಲಿ ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿದ ಪ ಗು ಹಳಕಟ್ಟಿ ಅವರ ಜಿಲ್ಲೆ ಕೂಡ ವಿಜಯಪುರ ಈ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದರ ಮೂಲಕ ಪ ಗು ಹಳಕಟ್ಟಿ ಅವರಿಗೂ ಕೂಡ ಸರ್ಕಾರ ಗೌರವ ಸಲ್ಲಿಸಿದ ಹಾಗೆ ಆಗುತ್ತದೆ ಬಸವನಬಾಗೇವಾಡಿ ಪರಿಸರದಲ್ಲಿ ವಚನ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿ ವಚನಗಳಲ್ಲಿ ಬರುವ ಕೃಷಿ ಸೇರಿದಂತೆ ಪ್ರತಿಯೊಂದು ಕಾಯಕಗಳಿಗಾಗಿ ಆದ್ಯತೆಯನ್ನು ನೀಡಬೇಕು ವಿಶ್ವವಿದ್ಯಾಲಯದ ಆವರಣದಲ್ಲಿ ಎಲ್ಲ ಪ್ರಕಾರದ ಗಿಡ ಮರ ಬಳ್ಳಿಗಳು ಮತ್ತು ಔಷಧೀಯ ಸಸ್ಯಗಳು ಪುಟ್ಟ ಅರಣ್ಯ ಮತ್ತು ಭವ್ಯವಾದ ಉದ್ಯಾನವನವನ್ನು ಸ್ಥಾಪಿಸಬೇಕು ಆ ಉದ್ಯಾನವನದಲ್ಲಿ ವಿಶ್ವಗುರು ಬಸವಣ್ಣನವರ ದೇಶದಲ್ಲಿ ಅತಿ ಎತ್ತರದ ಪುತ್ತಳಿಯನ್ನು ಸ್ಥಾಪನೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯದ ಸಂಚಾಲಕರಾದ ಶ್ರೀಕಾಂತ್ ಕೊಟ್ರಶೆಟ್ಟಿ ಮನ್ನನ್ ಶಾಬಾದಿ ಪ್ರಶಾಂತ್ ಮುಂಜಾನೆ ಸುನಿಲ್ ಚಿಕ್ಕೊಂಡ ಮಹಾಂತೇಶ್ ಕೆರೂಟಗಿ ಮಹಾಂತೇಶ್ ಹೆಬ್ಬಾಳ ಸಂಗಮೇಶ್ ಬಿದರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು