ವಿದ್ಯಾರ್ಥಿಯ ಭವಿಷ್ಯಕ್ಕೆ ಶಿಕ್ಷಣ ಅಗತ್ಯ:ರಾಜಶೇಖರ ಸೀರಿ
ಕಲಬುರಗಿ :ಮಾ.9: ವಿದ್ಯಾರ್ಥಿಯ “ಜ್ಞಾನ ಭಂಡಾರಕ್ಕೆ ಪುಸ್ತಕವೇ ಮುಖ್ಯವಾದದು, ಇಂತಹ ಜ್ಞಾನ ನೀಡುವ ಪುಸ್ತಕವು ಸೂಚಿಸುತ್ತದೆ. ನೀವು ತೆಲೆ ಕೆಳಗೆಮಾಡಿ ನನ್ನನ್ನು ಓದಿದರೆ ನಿಮ್ಮನ್ನು ಸಂಸ್ಕಾರವಂತರಾಗಿ ತಲೆ ಎತ್ತಿ ನಿಲ್ಲಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ರಾಜಶೇಖರ ಸಿರಿ ಹೇಳಿದರು.
ಅವರು ಜೇವರ್ಗಿ ನಗರದ ಶಾಂತಿನಿಕೇತನ ಪ್ರೌಢಶಾಲೆಯ ಹತ್ತನೇಯ ತರಗತಿಯ ಮಕ್ಕಳ ಬೀಳ್ಕೊಡುವ ಸಮಾರಂಭದ ಅತಿಥಿ ಸ್ಥಾನವನ್ನು ವಹಿಸಿ ಜ್ಯೋತಿ ಬೆಳಗಿಸಿ ಮಾತನಾಡಿವಿದ್ಯಾರ್ಥಿಗಳು ಇಂದಿನ ಮೊಬೈಲ್ ಹವ್ಯಾಸ ಗೀಳು ಬಿಟ್ಟು ಮುಕ್ತ ಮನಸ್ಸಿನಿಂದ ಅಭ್ಯಾಸದಕಡೆ ಗಮನ ಹರಿಸಿ, ತಮ್ಮ ಜೀವನ ಪರಿವರ್ತನೆ ಮಾಡಿಕೊಳ್ಳಬೆಕೆಂದು ಹೇಳುತ್ತಾ ಈ ಶಾಲೆಗೂ ಮತ್ತು ನನಗೂ ಅನ್ಯೊನ್ಯ ಸಂಭಂದವಿದ್ದು. ಈ ಶಾಲೆಯ ಮುಖ್ಯಗುರಗಳು ಮಹಿಬೂಬಸಾಬ ಅಣಬಿ ಈ ಶಾಲೆಗಾಗಿ ಹಗಲು-ಇರುಳು ಶ್ರಮಿಸುತ್ತಿದ್ದು ಇವರ ಕರ್ತವ್ಯ ಶಾಲೆಯ ಅಭಿವೃದ್ದಿಗೆ ಕಾರಣವಾಗಿದೆ ಎಂದು ಹೇಳಿ ಈ ಶಾಲೆಗೆ ನನ್ನಿಂದ ನೇರವು ಬೇಕಾದರೆ ಒದಗಿಸಿವಲ್ಲಿ ಪ್ರಯತ್ನಿಸುತ್ತೇನೆಂದು ಹೇಳಿದರು
ಇನ್ನೊರ್ವ ಅತಿಥಿ ಶ್ರೀ ಹರಿ ಹಿರಿಯ ಶಾಲೆಯ ಶಿಕ್ಷಕರಾದ ರಮೇಶ ಎ ಗುತ್ತೇದಾರ ಬಿರಾಳ(ಬಿ) ಮಾತನಾಡಿ, ವಿದ್ಯಾರ್ಥಿಗಳು ದಿನಾಲು ಮೊಬೈಲ್ ವಿಕ್ಷಿಸುವದರಿಂದ, ಆಗುವ ಅನಾಹುತ ಅರಿತು ಅದರ ಸಂಗಬಿಟ್ಟು, ಕಲಿಕೆಯಲ್ಲಿ ಚಿತ್ತಮನಸ್ಸಿನಿಂದ ತಮ್ಮ ಸಮಯವನ್ನು ಸದ್ವಿವಿನಯೋಗ ಗೊಳಿಸಿ “ವಿದ್ಯಾರ್ಥಿಗಳು ಭತ್ತದ ಚೀಲಗಳು ಆಗದೇ ಭತ್ತದ ಗದ್ದೆ ಆಗಬೇಕು” ಎಂದು ಹೇಳುತ್ತಾ ಈ ಶಾಲೆಯ ಮುಖ್ಯಗುರುಗಳು ಶಿಕ್ಷಕವೃಂದದವರು ಯಾವುದೇ ಆಪೇಕ್ಷೆ ಇಲ್ಲದೇ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಾ ಮಕ್ಕಳನ್ನು ಆದರ್ಶ ವಿದ್ಯಾರ್ಥಿಗಳನ್ನಾಗಿ ರೂಪಿಸುವ ಇವರ ಉತ್ತಮ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು,
ಈ ಸಂದರ್ಭದಲ್ಲಿ ಹಿಂದಿನ ಸಾಲಿನ ಹತ್ತನೆ ತರಗತಿಂiÀi ಪರೀಕ್ಷೆಂiÀiಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ಭಾಷಣ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಜರಗಿದವು ಈ ವೇದಿಕೆಯಲ್ಲಿ ಅಗ್ರಗಣ್ಯರು ವಿವಿದಶಾಲೆಯ ಮುಖ್ಯಗುರುಗಳು ಪಾಲಕರು ಭಾಗವಹಿಸಿ ಕಾರ್ಯಕ್ರಮಕ್ಕೆ ಶೊಭೆತಂದರು ಕಾರ್ಯಕ್ರಮ ನಿರ್ವಹಣೆ ಶಂಕರ ಶಿಕ್ಷಕರು ಮಾಡಿದ್ದರು.