ಎಲ್ಲಾ ಶಿವಮಯಪ್ರಜಾಪಿತ ಬ್ರಹ್ಮಕುಮಾರಿಯರಿಂದ ದ್ವಾದಶ ಜ್ಯೋರ್ತಿಲಿಂಗದರ್ಶನ
ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.09 : ಮಹಾಶಿವರಾತ್ರಿಯ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ನಗರದ ಮಾರ್ಕಂಡೇಶ್ವರ ದೇವಾಲಯದಲ್ಲಿ ದ್ವಾದಶ ಜ್ಯೋರ್ತಿಲಿಂಗದರ್ಶನ ಆಯೋಜಿಸಿತು.
ಬೆಳಿಗ್ಗೆ ಯಿಂದಲೇ ಆರಂಭವಾದ ಪ್ರದರ್ಶನದಲ್ಲಿ ಆರಂಭದಲ್ಲಿ ನವರತ್ನಗಳಿಂದ ಅಲಂಕೃತವಾದ ನವಲಿಂಗ ದರ್ಶನ, ಸಹಸ್ರಲಿಂಗದರ್ಶನ, ಫಲಲಿಂಗದರ್ಶನ, ಕ್ಷೀರಾಭಿಷೇಕಯುಕ್ತ ಶಿವಲಿಂಗ, ಶಿವನೊಂದಿಗೆ ಸೇಲ್ಪಿಪಾಯಿಂಟ್, ಆಧ್ಯಾತ್ಮಕತೆಯ ಚಿತ್ರ ಪ್ರದರ್ಶನ ಸೇರಿದಂತೆ ದೇಶದ ವಿವಿಧಡೆಗಳಲ್ಲಿ ಸ್ಥಾಪನೆಗೊಂಡ ದ್ವಾದಶ ಜ್ಯೋರ್ತಿಲಿಂಗಗಳಾದ ಸೋಮನಾಥ, ಪ್ರಶ್ನೇಶ್ವರ, ರಾಮೇಶ್ವರ, ನಾಗೇಶ್ವರ, ವೈದ್ಯನಾಥೇಶ್ವರ, ತ್ರ್ಯಯಂಬಕೇಶ್ವರ, ವಿಶ್ವೇಶ್ವರ, ಭೀಮಾಶಂಕರ, ಕೇದಾರನಾಥ, ಓಂಕಾರೇಶ್ವರ,ಮಹಾಕಾಲ ಹಾಗೂ ಶ್ರೀಶೈಲ ಮಲ್ಲಿಕಾಜುರ್|ನ ದರ್ಶನ ನೀಡಲಾಗಿತು.
ವಿಶ್ವವಿದ್ಯಾಲಯದ ಮುಖ್ಯಸ್ತೆ ಮಾನಸಾ, ಕೇಂದ್ರದ ರೇವತಿ, ರೂಪಾ ಸೇರಿದಂತೆ ಅನೇಕ ಸೇವಾಧಾರಿಗಳು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.