ಶಿವಶಕ್ತಿ ಸೀಮಾತೀತ ; ಶ್ರೀಶೈಲ ಜಗದ್ಗುರು
ಶ್ರೀಶೈಲಂ :ಮಾ.9: ಶಿವಶಕ್ತಿ ಸೀಮಾತೀತವಾಗಿದ್ದು, ಶಿವನು ಅಣುರೇಣು ತೃಣಗಳಿಗೆ ,ಸಕಲ ಜೀವಾತ್ಮರಿಗೆ ಶಕ್ತಿ ನೀಡಿ ಕೃಪೆ ಕರುಣಿಸುತ್ತಾನೆ,ಶಿವರಾತ್ರಿಯಂದು ಶಿವನಾಮ ಸ್ಮರಣೆ ಮಾಡಿದರೆ ಮಾನವರ ಪಾಪನಾಶವಾಗಿ ಪುಣ್ಯಲಭಿಸುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಶ್ರೀ 1008 ಪೂಜ್ಯ ಚನ್ನಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದಕರು ಹೇಳಿದರು.
ಅವರು ಶ್ರೀಶೈಲದಲ್ಲಿ ಶಿವರಾತ್ರಿಯಂದು ನಡೆದ ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ದೇವಾಲಯದಲ್ಲಿ ಮತ್ತು ಪಂಡಿತಾರಾಧ್ಯ ಪೀಠದಲ್ಲಿ ಆದಿ ಜಗದ್ಗುರುಪಂಡಿತಾರಾಧ್ಯರಿಗೆ ಪೀಠದಲ್ಲಿ ಸಂಪ್ರದಾಯದಂತೆ ಪೂಜಿಸಿ ಆಶೀರ್ವಚನಗೈದರು.
ಶಿವಾನಾಮವ ನುಡಿದರೆ ಜನ್ಮ ಪಾವನವಾಗುತ್ತದೆ, ಶಿವಭಕ್ತರಲ್ಲಿ ಚೈತನ್ಯಶಕ್ತಿ ಉಗಮವಾಗಿ ಭಕ್ತಿರಸ ಉದ್ಭವಿಸಿ ಮಾನವರ ಕಲ್ಯಾಣವಾಗುತ್ತದೆ ಎಂದು ಶ್ರೀಶೈಲ ಸನ್ನಿಧಿಯವರು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ವಕೀಲರು ಸಾಹಿತಿಗಳಾದ ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ ಶ್ರೀಶೈಲ ಪೀಠದಲ್ಲಿ ಅಭೂತಪೂರ್ವ ಶಕ್ತಿ ಇದೆ,ಅದರ ಅರಿವು ಮಾನವರಿಗೆ ಆಗಬೇಕಾದರೆ ಶಿವ ಸಂಸ್ಕøತಿ ಆಚರಿಸಿ ನುಡಿದಂತೆ ನಡದು ತೋರಿಸಬೇಕೆಂದು ಹೇಳಿದರು, ಮುಳವಾಡದ ಶ್ರೀಗಳು,ಗಂಗಾವತಿ ಉಮರಜ್ ಶ್ರೀಗಳು, ಭಕ್ತರಾದ ರಾಜಕುಮಾರ ಮಣ್ಣೂರ, ಬಿರಾದಾರ, ವಿಶ್ವಸ್ವಾಮಿ,ಮುತ್ತು ಸ್ವಾಮಿ, ಮುಂತಾದವರು ಪಾಲ್ಗೊಂಡಿದ್ದರು.