ಬಳಗಾನೂರಲ್ಲಿ 63 ಇಷ್ಠಲಿಂಗಗಳ ಮಹಾ ಪೂಜೆ
ತಾಳಿಕೋಟೆ:ಮಾ.9: ಸಮಿಪದ ಬಳಗಾನೂರ ಗ್ರಾಮದ 1 ಕೀಲೋ ಮೀಟರ್ ಅಂತರದಲ್ಲಿರುವ ಕಳೆದ 30 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾದ 63 ಇಷ್ಟ ಲಿಂಗಗಳ ಮಹಾ ಪೂಜಾ ಕಾರ್ಯಕ್ರಮವು ಮಹಾ ಶಿವರಾತ್ರಿದಿನದಂದು ಬಳಗಾನೂರ, ಹಿರೂರ, ತಮದಡ್ಡಿ, ಬಾಗೇವಾಡಿ, ವಿಜಯಪುರ ಒಳಗೊಂಡ ಮಹಾ ಭಕ್ತರು ಆಗಮಿಸಿ ಈ ಇಷ್ಟಲಿಂಗ ಮಹಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದ್ದೇನು ಕಡಿಮೇನಿಲ್ಲಾ.
ಈ ಮಹಾ ಲಿಂಗಗಳ ಮಹಾ ಪೂಜಾ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ದೀಪ ಬೆಳಗಿಸುವದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಇಂಗಳೇಶ್ವರ ವಚನ ಶೀಲಾ ಮಂಟಪದ ಶ್ರೀ ಚನ್ನಬಸವ ಮಹಾ ಸ್ವಾಮಿಗಳು ಮಾತನಾಡಿ ವಕ್ಕಲಿಗರಾಗಲಿ ಹೆಚ್ಚಿನ ದುಡಿತಕ್ಕೊಳಗಾದಂತಹ ಜನತೆಗೆ ಮಹಾ ಪೂಜಾ ಕಾರ್ಯಕ್ರಮ ಕೈಕೊಳ್ಳಲು ಸಮಯ ಸಿಗುತ್ತಿಲ್ಲಾ ಕಾರಣ ಮಹಾ ಶಿವರಾತ್ರಿಯ ದಿನದಂದು ಅವರಿಗೆ ಮಹಾ ಪೂಜೆ ಗೈದು ಅನುಕೂಲ ಕಲ್ಪಿಸುವಂತೆ ಈ ಅಪರೂಪದ ಮಹಾ ಭಕ್ತಿಯ ಹಬ್ಬ ಈ ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವದು ಎಲ್ಲರಿಗೂ ಗೊತ್ತಿದ್ದ ವಿಷಯವಾಗಿದೆ ಇಂತಹ ಲಿಂಗ ಪೂಜಾ ಕಾರ್ಯಕ್ರಮವನ್ನು ಗೈಯುತ್ತಾ ಸಾಗಿಬಂದಿದ್ದಲ್ಲದೇ ಅನುಷ್ಠಾನ ಮೂರ್ತಿಗಳಾದ ಶರಣೆ ಮಂಜುಳಾ ತಾಯಿಯವರೂ ಕೂಡಾ ದೇವ ಭಕ್ತಿ, ಲಿಂಗ ಭಕ್ತಿಯೊಂದಿಗೆ ಮುನ್ನಡೆಯುತ್ತಾ ಸಾಗಿರುವದನ್ನು ನೋಡಿದರೆ ಸಜ್ಜಲಗುಡ್ಡದ ಶರಣಮ್ಮನಂತೆ ಇವರೂ ಕೂಡಾ ಹೆಸರು ಪಡೆಯುತ್ತಾರೆಂಬುದು ನನ್ನ ಅನಿಸಿಕೆಯಾಗಿದೆ ಎಂದು ಹೇಳಿದ ಶ್ರೀಗಳು ಇಂದಿನ ದಿನಮಾನದಲ್ಲಿ ಇಂತಹ ಶರಣೆಯರನ್ನು ನೋಡಿದರೆ ಅಕ್ಕ ಮಹಾದೇವಿಯನ್ನು ನಾವು ನೋಡುತ್ತೇವೆಂಬುದರಲ್ಲಿ ಯಾವ ಸಂಶಯವಿಲ್ಲಾವೆಂದರು.
ಬಳಗಾನೂರದ ಶರಣೆ ಮಂಜುಳಾತಾಯಿಯವರು ಮಾತನಾಡಿ ನನಗೆ ಯಾವ ಫಲಾಪೇಕ್ಷೆವಿಲ್ಲಾ ತಾಯಿ ಅಕ್ಕಮಹಾದೇವಿ ಸಜ್ಜಲಗುಡ್ಡ ಶರಣಮ್ಮ ತಾಯಿಯವರು ಮಹಾ ಪೂಜಿಕರಾಗಿ ದೇವನ ವಲುಮೆ ಪಡೆದುಕೊಂಡಂತೆ ನನಗೂ ಕೂಡಾ ಆ ದೇವನು ಕರುಣಿಸಲಿ ಎಂಬ ಇಚ್ಚೆ ನನ್ನದಾಗಿದೆ ಅನೇಕ ಮಹಾ ಶಿವಯೋಗಿಗಳು ಶರಣ ಸತ್ಪುರುಷರು ನನ್ನ ಅನುಷ್ಠಾನ ಸೇವಾ ಕಾರ್ಯವನ್ನು ಮೆಚ್ಚಿ ಗುಣಗಾನ ಮಾಡಿರುವದು ಗೊತ್ತಿದ್ದ ವಿಷಯ ಈ ನನ್ನ ಒಂದು ಮಹಾ ಪೂಜಾ ಕಾರ್ಯದಲ್ಲಿಯೂ ಇಡೀ ಬಳಗಾನೂರ ಗ್ರಾಮದ ಜನತೆಯು ಸಹ ನನಗೆ ಬೆಂಬಲಿಸುತ್ತಾ ಸಾಗಿಬಂದಿರುವದು ನನಗೆ ಒಂದು ದೊಡ್ಡ ಆಸರೆ ಸಿಕ್ಕಂತಾಗಿದೆ ನನಗೇನು ಆಸ್ತಿ ಅಂತಸ್ಥು ಬೇಡಾ ಇದೇ ಒಂದು ಸಹಕಾರ ನನ್ನ ಸೇವಾ ಕಾರ್ಯಕ್ಕೆ ಬೆಂಬಲಿಸುತ್ತಾ ಸಾಗಲಿ ಎಂಬುದೇ ನನ್ನ ಆಸೆಯಾಗಿದೆ ಎಂದರು.
ಇನ್ನೋರ್ವ ಬ.ಬಾಗೇವಾಡಿಯ ಸಹಕಾರಿ ಧುರಿಣ ಶಿವನಗೌಡ ಬಿರಾದಾರ ಅವರು ಮಾತನಾಡಿ ಶರಣೆಯರಿಗೆ ಜಾತಿ ಇಲ್ಲಾ ಅಂತಹ ಶರಣೆ ಬಳಗಾನೂರ ಮಂಜುಳಾತಾಯಿಯವರಾಗಿದ್ದಾರೆ ಬಳಗಾನೂರ ಗ್ರಾಮ ಇಂತಹ ಮಹತ್ವದ ಸೇವಾ ಕಾರ್ಯದಿಂದ ಇದೊಂದು ಪಾವನ ಕ್ಷೇತ್ರವಾಗಿ ಹೊರಹೊಮ್ಮಲಿದೆ ಬಳಗಾನೂರ ಗ್ರಾಮದವರು ಹಾಗೂ ಅನೇಕ ಭಕ್ತಸಮೂಹ ಅವರ ಮಹಾ ಪೂಜೆ ಹಾಗೂ ಅನುಷ್ಠಾನಕ್ಕೂ ಸಂಬಂದಿಸಿ ಅವರ ಸೇವಾ ಕಾರ್ಯದಲ್ಲಿ ಮುನ್ನುಗ್ಗುತ್ತಾ ಸಾಗುವದರೊಂದಿಗೆ ಅವರಿಗೆ ದೇವನ ವಲುಮೆಯ ಅನುಕೂಲ ಕಲ್ಪಿಸುತ್ತಾ ಸಾಗಿರುವದು ಇದು ಭಕ್ತೋದ್ದಾರ, ಜನ್ನೋದ್ದಾರದ ಕಾರ್ಯ ಇದಾಗಿದೆ ಎಂದರು.
ಇನ್ನೋರ್ವ ವಿಜಯಪುರದ ಉದ್ಯಮಿ ಅಶೋಕ ಕಳಸಗೊಂಡ ಅವರು ಮಾತನಾಡಿ ಶರಣೆ ಮಂಜುಳಾತಾಯಿಯವರು ಭಕ್ತರ ಉದ್ದಾರಕ್ಕಾಗಿಯೇ ಅವರು ಮಾಡುತ್ತಿರುವ ಅನುಷ್ಠಾನವಾಗಿದೆ ದೇಶೋದ್ದಾರ, ಜನ್ನೋದ್ದಾರವು ಆಗಲೆಂಬ ಅವರ ಅಪೇಕ್ಷೆಯಾಗಿದೆ ಅವರು ಅನೇಕ ಸಲ ಮಾಡಿರುವ ಅನುಷ್ಠಾನ ಪೂರ್ಣಗೊಳಿಸಿರುವದನ್ನು ನೋಡಿದ ಮಹಾನ್ ಸ್ವಾಮಿಗಳು, ಶಿವಯೋಗಿಗಳು ಅವರು ಮಾಡಿರುವ ಭಕ್ತಿಯ ಕಾರ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದರು.
ಈ ಕಾರ್ಯಕ್ರಮ ಸಂಘಟಿಸಿದ ಪೃಥ್ವಿರಾಜ ಪಾಟೀಲ, ಪ್ರಭುಗೌಡ ಪಾಟೀಲ, ಸಿದ್ದಣ್ಣ ವಾಲಿ, ಪ್ರಭು ವಾಲಿ, ಪ್ರಭು ಸಜ್ಜನ, ರಾಮನಗೌಡ, ಬಸನಗೌಡ ದೊರನಹಳ್ಳಿ, ಮಲ್ಲಣ್ಣ ದೋರನಹಳ್ಳಿ, ರಾಮನಗೌಡ ಬಾಗೇವಾಡಿ, ಪ್ರಭುಗೌಡ ಬಿಳೇಭಾವಿ, ಮಲಕಾಜಪ್ಪಗೌಡ ಬಾಗೇವಾಡಿ, ವಿರೇಶ ಬಾಗೇವಾಡಿ, ರಾಜುಗೌಡ ಬಿರಾದಾರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಉಪಸ್ಥಿತ ಅಸಂಖ್ಯಾತ ಭಕ್ತರಿಗೆ, ದ್ರಾಕ್ಷೀ, ಕಝೂರಿ, ಬಾಳೆಹಣ್ಣುಗಳನ್ನು ನೀಡಿ ಉಪವಾಸ ವೃತ ತೊರೆಯಲು ಅನುವು ಮಾಡಿಕೊಡಲಾಯಿತು.
ಶಿಕ್ಷಕಿ ಮಡಿವಾಳಮ್ಮ ನಾಡಗೌಡ ಸ್ವಾಗತಿಸಿ ನಿರೂಪಿಸಿದರು.