ಗಣಪತಿ ಮೂರ್ತಿ ವಿಸರ್ಜನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.17:- ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಶ್ರೀ ಬಸವ ಬಳಗದ ವತಿಯಿಂದ ಗಣಪತಿ ಮೂರ್ತಿ ವಿಸರ್ಜನೆ ನಡೆಯಿತು
ಗ್ರಾಮದ ಶ್ರೀ ಮಂಟೇಸ್ವಾಮಿ ದೇವಸ್ಥಾನದಲ್ಲಿ ಪ್ರತಿμÁ್ಠಪಿಸಿದ್ದ, ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನವನ್ನು ಹೂವಿನಿಂದ ಶೃಂಗರಿಸಲಾಗಿತ್ತು.
ಗಣಪತಿ ಮರವಣಿಗೆ ಸಾಗುವ ಗ್ರಾಮದ ಪ್ರಮುಖ ಬಿದಿಗಳಲ್ಲಿ ಮಹಿಳೆಯರು ರಂಗೋಲಿಯನ್ನು ಬಿಡಿಸಿ, ಗಣಪನಿಗೆ ಪೂಜೆಗಳನ್ನು ನೀಡಿ ಕಣ್ತುಂಬಿಕೊಂಡರು, ಬೀದಿಗಳನ್ನು ಹಸಿರು ತೋರಣಗಳಿಂದ ಅಲಂಕಾರಗೋಳಸಿ ಭಕ್ತರು ಭಕ್ತಿ ಭಾವ ಮೆರೆದರು.
ಗ್ರಾಮದ ಮಂಟೇಸ್ವಾಮಿ ದೇವಸ್ಥಾನದಿಂದ ಹೊರಟ ಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆಯು ತಮಟೆ, ಲಗೋರಿ, ಕಲಾತಂಡಗಳೊಂದಿಗೆ ರಥದಬಿದಿ, ಶ್ರೀ ದಿವ್ಯಲಿಂಗೇಶ್ವರ ದೇವಸ್ಥಾನ, ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನದ ಮೂಲಕ ಸಾಗಿ ಖಾಸಗಿ ಜಮೀನಿನ ನೀರಿನ ತೊಟ್ಟಿಯಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು,
ಈ ವೇಳೆಯಲ್ಲಿ ನವೀನ್ ಕುಮಾರ್, ಯಶವಂತ್, ಕುಮಾರ್, ಗಿರೀಶ್, ಶಂಕರ್, ಮಣಿಕಂಠ, ವಿಕಾಸ್, ಪ್ರದೀಪ್, ಸುರೇಶ್, ಮಾಧು, ರವಿ, ಗೌಡಿಕೆ ಶಿವರಾಮ್, ಶ್ರೀ ಬಸವ ಬಳಗದ ಸದಸ್ಯರು, ಭಕ್ತರು, ಗ್ರಾಮದ ಮುಖಂಡರು ಇದ್ದರು.