ಸೀತಾರಾಂ ಯೇಚೂರಿ ದುಡಿಯುವ ವರ್ಗದ ಧ್ವನಿಯಾಗಿದ್ದರು
ಹೊಸಕೋಟೆ.ಸೆ.೧೭-ಸೀತಾರಾಂ ಯೆಚುರಿಯವರು ಸಿಪಿಐಎಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ದುಡಿಯುವ ವರ್ಗದ ಧ್ವನಿಯಾಗಿದ್ದರು ಸಿಪಿಐಎಂ ನ ಜಿಲ್ಲಾ ಕಾರ್ಯದರ್ಶಿ ತೇಜಶ್ವಿನಿರವರು ತಿಳಿಸಿದರು.
ನಗರದ ಪರಿವೀಕ್ಷಣಾ ಮಂದಿರದಲ್ಲಿ ಸಿಪಿಐಎಂ ಮತ್ತು ಸಿಐಟಿಯೂ ನಿಂದ ಸೀತಾರಾಂ ಯೆಚೂರಿಯವರಿಗೆ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಇಂದು ದೇಶದಲ್ಲಿ ಫ್ಯಾಸಿಸ್ಟ್ ಧೋರಣೆಯ ಸರ್ಕಾರವಿದ್ದು ದೇಶವು ಅಪಾಯದಲ್ಲಿದ್ದು ಸಂವಿಧಾನಾತ್ಮಕ ಸಂಸ್ಥೆಗಳ ಧ್ವನಿಯನ್ನು ಕಸಿದು ವಿರೋಧ ಪಕ್ಷದ ಬಲವನ್ನೆ ಕಸಿಯಲು ಮುಂದಾಗಿದ್ದ ಸರ್ಕಾರದ ವಿರುದ್ದ ಧ್ವನಿಯೆತ್ತಿ ಮಹಿಳೆಯರ, ಶೋಷಿತರ, ಕಾರ್ಮಿಕರ ಧ್ವನಿಯಾಗಿದ್ದ ಸೀತಾರಾಂ ಯೆಚೂರಿಯವರು ವಿಧಿವಶರಾಗಿರುವುದುದೇಶಕ್ಕೆ ಮತ್ತು ಪಕ್ಷಕ್ಕೆತುಂಬಲಾರದ ನಷ್ಟವಾಗಿದೆಎಂದರು
ನಂತರ ಸಿಪಿಐಎಂನ ತಾಲುಕು ಅಧ್ಯಕ್ಷರಾದ ಹರೀಂದ್ರ ಮಾತನಾಡಿ ಇವರು ಮೇಲ್ಜಾತಿಯಲ್ಲಿ ಜನಿಸಿದ್ದರೂ ಕೂಡ ಸೂಪಿ ಸಂತತಿಯ ಮಹಿಳೆಯನ್ನು ವಿವಾಹವಾಗಿದ್ದು ನೆಹರು ವಿಶ್ವ ವಿದ್ಯಾನಿಲಯದ ಅಧ್ಯಕ್ಷರಾಗಿ ಮೂರು ಅವಧಿ ಸೇವೆ ಸಲ್ಲಿಸಿ ೫೦ ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಜನರಧ್ವನಿಯಾಗಿದ್ದು ಸರ್ಕಾರಿ ಬಂಗಲೆಯನ್ನು ಪಕ್ಷದ ಕೆಲಸಗಳಿಗೆ ನೀಡಿ ಇವರು ಸಣ್ಣಮನೆಯಲ್ಲಿ ವಾಸಿಸುತಿದ್ದ ಸರಳ ವ್ಯಕ್ತಿತ್ವ ಹೊಂದಿದ್ದರು ಏಪ್ರಿಲ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನಕ್ಕೂ ಕೂಡ ಅದ್ಯಕ್ಷರಾಗಿ ಆಯ್ಕೆಯಾಗಿದ್ದುದೇಶದ ೯೦ ರಷ್ಟು ಜನತೆಗೆ ತುಂಬಲಾರದ ನಷ್ಟವಾಗಿದೆ ಎಂದರು.
ಈ ಸಂಧರ್ಭದಲ್ಲಿ ಎಎಪಿ ಪಕ್ಷದ ಸಮೀರ್‌ಅಸದ್ ಶಿಕ್ಷಕರ ಸಂಘದ ಶ್ರೀನಿವಾಸ್, ವಕೀಲರ ಸಂಘದ ನಾಗರಾಜ್, ನವೀನ್‌ಕುಮಾರ್, ಮುನಿರಾಜುರವಿ, ಸಿಪಿಐಎಂನ ಮೋಹನ್ ಬಾಬು ವೆಂಕಟಪ್ಪ, ಹಾಗೂ ಇತರ ಸದಸ್ಯರುಇದ್ದರು.