ಶಿಕ್ಷಕ ಚಂದ್ರಯ್ಯಗೆ ಆತ್ಮವಿಶ್ವಾಸ ವೇದಿಕೆಯಿಂದ ಸನ್ಮಾನ
ಬಂಗಾರಪೇಟೆ.ಸೆ.೧೭- ಯರಗೋಳ್ ಯೋಜನೆ ರೂವಾರಿ ಕೆ. ಚಂದ್ರಯ್ಯ ಅವರಿಗೆ ಆತ್ಮವಿಶ್ವಾಸ ವೇದಿಕೆ ಹಾಗೂ ದಲಿತ ಶಕ್ತಿ ಸೇನೆ ವತಿಯಿಂದ ಸನ್ಮಾನವನ್ನು ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ನೇತೃತ್ವವನ್ನು ಆತ್ಮವಿಶ್ವಾಸ ವೇದಿಕೆ ಹಾಗೂ ದಲಿತ ಶಕ್ತಿ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸೀಸಂದ್ರ ದಿಢೀರ್ ಎಂ.ಎನ್. ಭಾರದ್ವಾಜ್ ಅವರು ವಹಿಸಿದರು.
ಪಟ್ಟಣದ ವಾಲ್ಮೀಕಿ ಸ್ವಾಭಿಮಾನಿ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕ, ಕಲಾವಿದ, ಹಾಡುಗಾರ, ಕವಿ, ಕೆ. ಚಂದ್ರಯ್ಯ ಅವರ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕುರಿತು ಅವರು ಮಾತನಾಡುತ್ತಾ, ಈಗ ನಾನು ಎರಡನೆಯ ಯೋಜನೆಯನ್ನು ರೂಪಿಸಲು ಮುಂದಾಗಿದ್ದೇನೆ. ಅದು ಯಾವುದೆಂದರೆ ಕಾಮ ಸಮುದ್ರ ಗಡಿಭಾಗದ ಹತ್ತಿರ ಎತ್ತುಗಳ ದಿನ್ನೆ ಎಂಬ ಜಾಗದಲ್ಲಿ ಒಂದು ಬೃಹತ್ಕಾರದ ಯರಗೋಳ್ ಡ್ಯಾಮ್ ರೀತಿಯಲ್ಲಿ ಸರ್ಕಾರ ನಿರ್ಮಿಸಿ ಕೊಡಬೇಕೆಂದು ಮನವಿ ಯಾಗಿದೆ. ಯಾಕೆಂದರೆ ಈ ನೀರು ಪೋಲಾಗಿ ವ್ಯರ್ಥವಾಗಿ ಮಳೆ ನೀರಲ್ಲ ಹರಿದು ಹೋಗುತ್ತಿರುವುದೊಂದ ನಾನು ಈ ಜಗವನ್ನು ಕಂಡು ಹಿಡಿದು ಸರ್ಕಾರ ನೋಡುವಂತೆ ಮಾಡಲು ಪತ್ರಿಕ ಕ್ಷೇತ್ರ ಬಹಳ ಮುಖ್ಯ ಎಂದು ತಿಳಿಸಿದರು.
ಇಲ್ಲಿ ದೊಡ್ಡ ಡ್ಯಾಮ್ ನಿರ್ಮಿಸಲು ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಸರ್ಕಾರವಾಗಲಿ ರಾಜಕೀಯ ವ್ಯಕ್ತಿಗಳಾಗಲಿ, ಸಮಾಜಸೇವಕರಾಗಲಿ ಹೋರಾಟಗಾರರಾಗಲಿ ಎಲ್ಲರೂ ಕೈಜೋಡಿಸಿದರೆ ನಾನು ಹಮ್ಮಿಕೊಂಡಿರುವ ಯೋಜನೆ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು. ಆತ್ಮವಿಶ್ವಾಸವೇದಿಕೆ ಹಾಗೂ ದಲಿತ ಶಕ್ತಿ ಸೇನೆಯ ರಾಜ್ಯಾಧ್ಯಕ್ಷರಾದ ಎಂ. ಎನ್. ಭಾರದ್ವಾಜ್ ಅವರು ಮಾತನಾಡುತ್ತಾ, ಕೆ ಚಂದ್ರಯ್ಯ ಅವರು ಶಿಕ್ಷಕರಾಗಿ, ಕವಿಯಾಗಿ, ಸಾಹಿತಿಯಾಗಿ, ಹಾಡುಗಾರರಾಗಿ, ಕಲಾವಿದರಾಗಿ, ಗುರುತಿಸಿಕೊಂಡು ನಾನು ಪ್ರೀತಿಯ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೆ ಅವರ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ, ನಾವು ಸನ್ಮಾನವನ್ನು ಮಾಡುತ್ತಿದ್ದೇವೆಂದು ಗುಣದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ನಾಗರಾಜ್, ವೆಂಕಟಪ್ಪ, ಮುನಿರತ್ನಂ, ಕಲಾವಿದ ಚಂದ್ರಪ್ಪ, ಬಾವರಹ ಳ್ಳಿ ಮುನಿಯಪ್ಪ, ಸುನಿಲ್, ಪ್ರವೀಣ್, ಸಂತೋಷ್, ರಾಮಪ್ಪ, ರಾಮಕೃಷ್ಣಪ್ಪ, ಹಾಗೂ ಇನ್ನು ಮುಂತಾದವರು ಭಾಗವಹಿಸಿದ್ದರು.