ಕಾಂಗ್ರೆಸ್‌ಗೆ ಬಿಜೆಪಿ, ಜೆಡಿಎಸ್ ಪ್ರತಿಭಟನೆಯ ಎಚ್ಚರಿಕೆ
ಚಿಕ್ಕಬಳ್ಳಾಪುರ.ಸೆ.೧೭-ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು ಸಭ್ಯತೆಯ ಎಲ್ಲೆ ಮೀರಿ ವೈಯಕ್ತಿಕ ಟೀಕೆಗಳನ್ನು ಪತ್ರಿಕಾಗೋಷ್ಠಿಗಳಲ್ಲಿ ಮಾಡುತ್ತಿರುವುದು ತೀವ್ರ ಕಂಡನೆಯ ಅವರು ತಮ್ಮ ಚಾಳಿಯನ್ನು ಇದೇ ರೀತಿ ಮುಂದುವರಿಸಿದಲ್ಲಿ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಜಾತ್ಯಾತೀತ ಜನತಾದಳ ಜಿಲ್ಲಾ ಘಟಕದ ಅಧ್ಯಕ್ಷ ಮುಕ್ತ ಮುನಿಯಪ್ಪ ಆಗ್ರಹಿಸಿದರು.
ಚಿಕ್ಕಬಳ್ಳಾಪುರದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇವಲ ಎರಡು ದಿನಗಳ ಹಿಂದೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಪ್ರದೀಪ್ ಈಶ್ವರ ಅವರ ಬೆಂಬಲಿಗರಲ್ಲಿ ಒಬ್ಬರು ಸಭ್ಯತೆಯ ಎಲ್ಲೆ ಮೀರಿ ವೈಯಕ್ತಿಕ ಟೀಕೆ ಮಾಡಿದ್ದರು.
ಈ ಟೀಕೆ ಎಷ್ಟರಮಟ್ಟಿಗೆ ಇದೆ ಎಂದರೆ ಚಿಕ್ಕಬಳ್ಳಾಪುರದ ಇತಿಹಾಸದಲ್ಲಿಯೇ ಇಂತಹ ಕೀಳು ಮಟ್ಟದ ಭಾಷೆಯನ್ನು ಇದುವರೆಗೆ ಯಾರು ಬಳಸಿರಲಿಲ್ಲ ಇಂತಹವರು ಬುದ್ಧಿ ಕಲಿತುಕೊಳ್ಳಬೇಕು ಇಲ್ಲದಿದ್ದರೆ ನಾವೇ ಬುದ್ದಿ ಕಲಿಸುತ್ತೇವೆ ಎಂದರು.
ಜಿಲ್ಲಾ ಬಿಜೆಪಿ ಮುಖಂಡ ಹಾಗೂ ಕೆವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ನವೀನ್ ಕಿರಣ್ ಮಾತನಾಡಿ, ನಮ್ಮ ಮನೆತನ ಕಳೆದ ೬೦ ವರ್ಷಗಳಿಂದಲೂ ಸಕ್ರಿಯ ರಾಜಕಾರಣದಲ್ಲಿ ಇದೆ. ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಹುಟ್ಟಿದ ನಮ್ಮ ಮನೆಯಲ್ಲಿ ನಮ್ಮ ತಾತ ಮಾಜಿ ಶಾಸಕ ಸಿ.ವಿ. ವೆಂಕಟರಾಯಪ್ಪ ಮತ್ತು ವಿರೋಧ ಪಕ್ಷದ ಮುಖಂಡ ಕೆಬಿ ಪಿಳ್ಳಪ್ಪ ರವರ ನಡುವೆ ದಶಕಗಳ ಕಾಲ ರಾಜಕೀಯ ಹೋರಾಟ ನಡೆದಿತ್ತು ಆದರೆ ಅವರಿಬ್ಬರೂ ಸಹ ಎಂದೂ ಸಭ್ಯತೆಯ ಎಲ್ಲೆಯನ್ನು ಮೀರಿರಲಿಲ್ಲ ಅಭಿವೃದ್ಧಿಯ ವಿಚಾರದಲ್ಲಿ ಅವರು ಒಂದಾಗುತ್ತಿದ್ದರು ಎಂದರು.
ಕೆವಿ ನಾಗರಾಜ್ ಮಾತನಾಡಿ, ಶಾಸಕ ಪ್ರದೀಪ್ ಈಶ್ವರ್ ಅವರ ಬೆಂಬಲಿಗರ ಭಾಷೆ ಹೇಗಿತ್ತು ಎಂದರೆ ಅವರು ಗಲ್ಲಿ ರೌಡಿಗಳಂತೆ ಮಾತನಾಡಿದರು ಇದು ರಾಜಕಾರಣಕ್ಕೆ ಸರಿಯಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಘೋಷಿತ ಫಲಿತಾಂಶದ ನಗರಸಭೆ ಅಧ್ಯಕ್ಷ ಅಭ್ಯರ್ಥಿ ಗಜೇಂದ್ರ ಉಪಾಧ್ಯಕ್ಷ ಜೈ ನಾಗರಾಜ್ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗರ ಕಾಲುವೆ ಪ್ರಸಾದ್ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಕೆಆರ್ ರೆಡ್ಡಿ ಹಾಲು ಬೈರೇಗೌಡ ಒಳಗೊಂಡಂತೆ ಮತ್ತೆ ತರರು ಹಾಜರಿದ್ದರು.