ನಾಗೇಶ್ ಅವರ ಸೇವೆ ಅಮೋಘ
ಬಂಗಾರಪೇಟೆ.ಸೆ.೧೭-ಮುಖ್ಯಪೇದೆ ನಾಗೇಶ್ ಅವರ ಸೇವೆ ಅಮೋಘವಾಗಿದೆ ಎಂದು ಆತ್ಮವಿಶ್ವಾಸ ವೇದಿಕೆ ಹಾಗೂ ದಲಿತ ಶಕ್ತಿ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸೀಸಂದ್ರ ದಿಢೀರ್ ಎಂ.ಎನ್. ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ.
ವಾಲ್ಮೀಕಿ ಸ್ವಾಭಿಮಾನಿ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಾಗೇಶ್ ಅವರು ಪೊಲೀಸ್ ಇಲಾಖೆಯಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಸಾರ್ವಜನಿಕರಲ್ಲಿ ಉತ್ತಮ ಬಾಂಧವ್ಯ, ಪ್ರೀತಿ, ವಿಶ್ವಾಸ, ಹೊಂದಿದ್ದರು. ಇವರು ಯಾವುದೇ ರೀತಿಯ ಭೇದಭಾವವಿಲ್ಲದೆ ಎಲ್ಲಾ ಸಮುದಾಯ ವರ್ಗದವರನ್ನು ಸಹ ಒಂದೇ ರೀತಿಯಲ್ಲಿ ಸಮಾನತೆಯಲ್ಲಿ ಕಂಡು ಎಲ್ಲರ ಕೆಲಸ ಕಾರ್ಯಗಳನ್ನು ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಮೇಳ ಅಧಿಕಾರಿಗಳಿಗೆ ತಿಳಿಸಿ ಬಗೆ ಹರಸಿ ಉತ್ತಮ ಪೆದೆ ಎಂದು ಬಿರುದಿಗೆ ಪಾತ್ರರಾಗಿದ್ದಾರೆಂದರೆ ತಪ್ಪಾಗಲಾರದು.
ಇವರು ರಾಜಕೀಯ ಕಾರ್ಯಕ್ರಮವಾಗಲಿ, ಸಂಘಟನೆ ಕಾರ್ಯಕ್ರಮವಾಗಲಿ, ಸರ್ಕಾರಿ ಕಾರ್ಯಕ್ರಮವಾಗಲಿ, ಸಾರ್ವಜನಿಕ ಕಾರ್ಯಕ್ರಮವಾಗಲಿ, ಯಾವುದೇ ರೀತಿಯ ಕಾರ್ಯಕ್ರಮಗಳಿಗೆ ಇವರು ಸ್ಪಂದಿಸಿ ಆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಂದಾಗುತ್ತಿದ್ದರು. ಎಲ್ಲರಿಗೂ ಸ್ಪಂದಿಸುತ್ತಾ ಉತ್ತಮ ಕೆಲಸಗಳನ್ನು ಮಾಡುತ್ತಾ ಸಾರ್ವಜನಿಕರ ಮನಸ್ಸು ಗೆಲ್ಲುವಲ್ಲಿ ಇವರ ಪಾತ್ರ ಅಮೋಘ ಎಂದು ಹೇಳಬಹುದು.
ಅದರಲ್ಲೂ ನಮ್ಮ ಬಂಗಾರಪೇಟೆ ಇನ್ಸ್ಪೆಕ್ಟರ್ ಆಗಲಿ ಪೊಲೀಸ್ ಸಿಬ್ಬಂದಿಯಾಗಲಿ ಅಧಿಕಾರಿಗಳಾಗಲಿ ಉತ್ತಮ ಸೇವೆ ಸಲ್ಲಿಸಿ ಸಾರ್ವಜನಿಕರ ಮೆತ್ತಿಗೆಗೆ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ನಮ್ಮ ಬಂಗಾರಪೇಟೆ ತಾಲ್ಲೂಕಿನ ಪೊಲೀಸ್ ಇಲಾಖೆ ಉತ್ತಮ ಕೆಲಸಗಳು ಮಾಡಿ ಎಲ್ಲಾ ಸಮಸ್ಯೆಗಳನ್ನು ಸ್ಪಂದಿಸುತ್ತಾ, ರಸ್ತೆ ನಿಯಮಗಳು ಹಾಗೂ ಯುವಕರ ಜಾಗೃತಿ ಬಗ್ಗೆ ಹರಿವು ಮೂಡಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಆದರಿಂದ ಮುಖ್ಯ ಪೇದೆ ನಾಗೇಶ್ ಅವರಿಗೆ ಇನ್ನು ಹೆಚ್ಚು ಆರೋಗ್ಯ ಐಶ್ವರ್ಯ ನೀಡಲೆಂದು ಹಾರೈಸಿದರು.