ಸಂಭ್ರಮದ ಅನಂತ ಪದ್ಮನಾಭ ವ್ರತ
ಬಾಗೇಪಲ್ಲಿ, ಸೆ.೧೭– ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ ಅನಂತ ಪದ್ಮನಾಭ ಸ್ವಾಮಿ ವ್ರತದ ಈ ಹಬ್ಬವನ್ನು ಭಾದ್ರಪದ ಮಾಸದಲ್ಲಿ ಆಚರಿಸಲಾಗುತ್ತದೆ,
ಗ್ರಾಮೀಣ ಪ್ರದೇಶಗಳಲ್ಲಿ ಅನಂತ ಪದ್ಮನಾಭ ಸ್ವಾಮಿ ವ್ರತದ ಹಬ್ಬವನ್ನು ಶ್ರದ್ದಾ ಭಕ್ತಿಯಿಂದ ಆಚರಿಸುವುದು ಮಹಿಳೆಯರಿಗೆ ಎಲ್ಲಿಲ್ಲದ ಸಂತೋಷ ಮತ್ತು ಸಡಗರ ಸಂಭ್ರಮ ತರುವ ಹಬ್ಬವಾಗಿದೆ.
ಎಂದಿನಂತೆ ಈ ವರ್ಷವೂ ಸಹ ಮನೆಗಳಲ್ಲಿ ಅನಂತ ಪದ್ಮನಾಭ ಸ್ವಾಮಿ ವ್ರತದ ಹಬ್ಬವವನ್ನು ವಿಶೇಷವಾಗಿ ಅಲಂಕಾರ ಮಾಡಿರುವುದು ಕಂಡು ಬಂದಿತು.
ಈ ದಿನದಂದು ಕುಟುಂಬದವರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮುತೈದೆಯುರು ಅನಂತ ಪದ್ಮನಾಭ ಸ್ವಾಮಿ ವ್ರತದ ಪೂಜೆ ಸಲ್ಲಿಸಲು ಬೆಳಿಗ್ಗಿನಿಂದಲೆ ತಟ್ಟೆಯಲ್ಲಿ ಪೂಜಾ ಸಾಮಾಗ್ರಿಗಳನ್ನು ಇಟ್ಟುಕೊಂಡು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಎಲ್ಲೆಡೆ ಇತ್ತು.
ಮಹಿಳೆಯರು ಬೆಳಗಿನ ಜಾವ ಬೆಳಕು ಅರಳುತ್ತಿರುವಾಗಲೇ ಮಹಿಳೆಯರು ತಮ್ಮ ಮನೆಗಳ ಮುಂದೆ ವಿವಿಧ ಬಣ್ಣ ಗಳಲ್ಲಿ ರಂಗೋಲಿ ಹಾಕಿ, ರಂಗೋಲಿಯ ಚಿತ್ತಾರ ಮೂಡಿಸಿರುವುದು, ಮನೆಯ ಬಾಗಿಲಿಗೆ ಮಾವಿನ ಎಲೆಗಳ ತೋರಣದ ಹಾರ ಮತ್ತು ವಿವಿಧ ಬಣ್ಣದ ಹೂವುಗಳ ಹಾರಗಳನ್ನು ಹಾಕುವ ಮೂಲಕ ಅಲಂಕರಿಸಿ ಸ್ವಾಮಿಯ ಹಬ್ಬದ ವಾತಾವರಣವನ್ನು ಮಹಿಳೆಯರು ಮೂಡಿಸಿದ್ದರು.
ಮಧ್ಯಾಹ್ನದ ನಂತರ ಮುತೈದು ಮಹಿಳೆಯರು ಮನೆ ಮನೆಗೂ ತೆರಳಿ ಅರ್ಷಿನ ಕುಂಕಮ ತಾಂಬೂಲ ಸ್ವೀಕರಿಸುವಂತೆ ಆಹ್ವಾನಿಸುತ್ತಿರುವುದು ಅನಂತ ಪದ್ಮನಾಭ ಸ್ವಾಮಿ ವ್ರತವಾದ ದಿನದಂದು ಹಲವಾರು ಮನೆಗಳಲ್ಲಿ ಗೋಚರಿಸಿತು.