ಸಂಭ್ರಮದ ಈದ್ ಮಿಲಾದ್
ಮಾಲೂರು.ಸೆ.೧೭-ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ಆಚರಿಸಿದರು.
ಎಲ್ಲಾ ಮಸೀದಿಗಳ ಮುಖ್ಯಸ್ಥರು ಹಾಗೂ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾ ಭಕ್ತಿ ಸಡಗರದಿಂದ ಆಚರಣೆ ಮಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ಸಹ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪಟ್ಟಣದ ಪಿರ್ದೋಸ್. ಕುಬಾ. ನೂರ್ ಅಕ್ಸ. ಪಲ್ಲ ಮಸೀದಿಗಳ ಮುಖ್ಯಸ್ಥರು ಸಂಜೆ ಜಾಮಿಯಾ ಮಸೀದಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಮುಸ್ಲಿಂ ಧರ್ಮ ಗುರುಗಳಾದ ಮೌಲ ಅವರು ಕುರಾನ್ ನ ಸಂದೇಶಗಳನ್ನು ಬೋಧಿಸಿದರು.
ಜಾಮಿಯಾ ಮಸೀದಿ ಪಿರ್ದೋಸ್. ಕುಬಾ. ನೂರ್ ಅಕ್ಸ. ಪರ್ಲ್ ಮಸೀದಿಗಳ ಮುಖ್ಯಸ್ಥರು ಹಾಗೂ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು