ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ಚಿತ್ತಾಪುರ,ಮಾ.9-ತಾಲ್ಲೂಕಿನ ಕರದಾಳ ಗ್ರಾಮದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿನಿಯನ್ನು ಕಡಬೂರ ಗ್ರಾಮದ ಭಾಗ್ಯಶ್ರೀ (17) ತಂದೆ ಸಾಯಬಣ್ಣ ಎಂದು ಗುರುತಿಸಲಾಗಿದೆ. ಭಾಗ್ಯಶ್ರೀ ಕರದಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಮೃತಪಟ್ಟ ಹಿಂದಿನ ದಿನ ಅಂದ್ರೆ ಮಾರ್ಚ್ 7ರಂದು ವಿದ್ಯಾರ್ಥಿನಿ ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಬಿಳ್ಕೊಡುಗೆ ಸಮಾರಂಭದಲ್ಲಿ ಸಂತೋಷದಿಂದ ಭಾಗಿಯಾಗಿದಳು ಎನ್ನಲಾಗುತ್ತಿದೆ.
ಮಹಾಶಿವರಾತ್ರಿ ನಿಮಿತ್ಯ ಶುಕ್ರವಾರ ಶಾಲೆಗೆ ರಜೆ ಇದ್ದ ಕಾರಣ ವಿದ್ಯಾರ್ಥಿನಿ ವಸತಿ ನಿಲಯದಲ್ಲಿ ಗೆಳತಿಯರೊಂದಿಗೆ ಉಳಿದಿದ್ದಳು. ಸಾಯಂಕಾಲ ಭಾಗ್ಯಶ್ರೀ ಹೊಟ್ಟೆ ನೋವು ಎನ್ನುತ್ತಿದ್ದಳು. ನಂತರ ವಸತಿ ನಿಲಯದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ರಾತ್ರಿ ಸ್ಥಳಕ್ಕೆ ಚಿತ್ತಾಪುರ ಪೆÇಲೀಸ್ ಅಧಿಕಾರಿಗಳು ಸಿಬ್ಬಂದಿ ವರ್ಗ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿದ್ದವೀರಯ್ಯ ರುದ್ನುರ್, ಬಿಸಿ ಊಟದ ಸಹಾಯಕ ನಿರ್ದೇಶಕರಾದ ಪ್ರಕಾಶ್ ನಾಯ್ಕೊಡಿ, ತಹಸಿಲ್ದಾರರಾದ ಸೈಯದ್ ಷಾಷವಲಿ, ಸೇಡಂ ಸಹಾಯಕ ಆಯುಕ್ತರಾದ ರಮೇಶ್ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಭಾಗ್ಯಶ್ರೀ ಅತ್ಯಂತ ಚುರುಕಾದ ವಿದ್ಯಾರ್ಥಿನಿಯಾಗಿದ್ದಳು. ಆಕೆಯ ಸಾವಿಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಬಾಲಕಿಯ ವಸತಿ ನಿಲಯದ ವಾರ್ಡನ್ ರೇಣುಕಾ ಐಗೋಳ ಅವರ ನಿಷ್ಕಾಳಜಿಯೇ ಕಾರಣ’ ಎಂದು ಪೆÇೀಷಕರು ಆರೋಪಿಸುತ್ತಿದ್ದಾರೆ. ಮೇಲಾಧಿಕಾರಿಗಳು ಪ್ರಕರಣದ ಕುರಿತು ಸಂಬಂಧಿಸಿದ ಬಾಲಕಿಯ ವಸತಿ ನಿಲಯದ ವಾರ್ಡನ್ ಹಾಗೂ ಕಾವಲುಗಾರರು ಮತ್ತು ವಿದ್ಯಾರ್ಥಿನಿಯ ಸಹಪಾಠಿಗಳನ್ನು ತನಿಖೆಗೆ ಒಳಪಡಿಸಬೇಕು, ವಸತಿ ನಿಲಯದಲ್ಲಿನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ.
ರಾತ್ರಿ ಯಿಡಿ ವಸತಿ ನಿಲಯದಲ್ಲಿ ತಂದೆ-ತಾಯಿಯ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವಸತಿ ನಿಲಯದಲ್ಲಿ ಇದ್ದ ಬಾಲಕಿಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ತಮ್ಮ ಗ್ರಾಮಗಳಿಗೆ ಹೋಗುವುದಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿದ್ದವೀರಯ್ಯ ರುದ್ನುರ್ ವಿಧ್ಯಾರ್ಥಿನಿಯರ ಮನವೊಲಿಸಿ ಪಕ್ಕದ ಕಸ್ತೂರಿಬಾಯಿ ವಸತಿ ನಿಲಯದಲ್ಲಿ ಇರಲು ಅನುಕೂಲ ಮಾಡಿದರು. ಭಾಗ್ಯಶ್ರೀ ಸಾವಿನ ಕುರಿತು ಚಿತ್ತಾಪುರ ಪೆÇಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಬಾಲಕಿಯ ವಸತಿ ನಿಲಯದ ವಾರ್ಡನ್ ರೇಣುಕಾ ಐಗೋಳ ಅವರು ಮೂರು ದಿನಗಳು ವಸತಿ ನಿಲಯಕ್ಕೆ ಬಂದಿಲ್ಲ. ಸಿಬ್ಬಂದಿಗಳ ಹಾಗೂ ಕಾವಲುಗಾರರ ಮೇಲೆ ವಸತಿ ನಿಲಯ ಬಿಟ್ಟು ಹೋಗಿದ್ದು ತಪ್ಪು. ಮಾರ್ಚ್ 7ರಂದು ನಾನು ವಸತಿ ನಿಲಯಕ್ಕೆ ಭೇಟಿಯಾಗಲು ಬಂದ್ರೆ ಬಿಟ್ಟಿಲ್ಲ. ನನ್ನ ಮಗಳ ಸಾವಿನ ಕುರಿತು ಸಂಪೂರ್ಣ ತನಿಖೆ ಆಗಬೇಕು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು.
-ಸಾಯಿಬಣ್ಣ ಪೂಜಾರಿ
ನನ್ನ ಮಗಳಿಗೆ ಯಾವುದೇ ಕಾಯಿಲೆ ಇರಲಿಲ್ಲ ಆರೋಗ್ಯವಾಗಿದ್ದಳು ಸಾವಿಗೂ ಮುನ್ನ ಬೆಳ್ಳಿಗೆ ನನ್ನ ಜೊತೆ ಪೆÇೀನ್ ಮಾಡಿ ಮಾತನಾಡಿದ್ದಾಳೆ. ಆದರೆ ಸಾಯಂಕಾಲ ಮೃತಪಟ್ಟ ವಿಷಯ ತಿಳಿದ್ದು ಅಪಾರ ದು:ಖವಾಗಿದೆ. ನನ್ನ ಮಗಳ ಅನುಮಾನಾಸ್ಪದ ಸಾವಿನ ವಿಷಯ ತನಿಖೆ ಆಗಬೇಕು.