ಎಲ್ಲಾ ರಂಗದಲ್ಲೂ ಮಹಿಳೆಯರಿಂದ ಸಾಧನೆ
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.9 :- ಮಹಿಳೆಯರು ಪುರಷರಷ್ಟೇ ಸಮಾನವಾಗಿ ಎಲ್ಲಾ ರಂಗದಲ್ಲೂ  ಸಾಧನೆಯ ಶಿಖರವೇರತ್ತಿರುವುದು ಸಂತಸ ತರುತ್ತಿದ್ದೂ ಅದರಂತೆ ಆರೋಗ್ಯ ಇಲಾಖೆಯ 108ರ  ಆಂಬ್ಯುಲೆನ್ಸ್ ಸೇವೆಯಲ್ಲೂ ಮಹಿಳೆಯರ ಪಾತ್ರ ಕಡಿಮೆ ಇಲ್ಲಾ ಎಂದು ತೋರಿಸಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು  ವಿಭಾಗೀಯ ಮುಖ್ಯಸ್ಥ ಸದಾನಂದ ತಿಳಿಸಿದರು.
ಅಂತರಾಷ್ಟ್ರೀಯ  ಮಹಿಳಾ ದಿನಾಚರಣೆ ಅಂಗವಾಗಿ ಅವರು  ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸರ್ವಿಸ್ ಕಂಪನಿಯಿಂದ ಶುಕ್ರವಾರ ಆಯೋಜಿಸಿದ್ದ 108ರ  ಆಂಬ್ಯುಲೆನ್ಸ್ ನಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗಳಿಗೆ ನಡೆಸಿದ  ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡುತ್ತಾ  ಹೆಣ್ಣು ಸಂಸಾರದ ಕಣ್ಣಾಗಿದ್ದು, ವಿಜ್ಞಾನ, ಕ್ರೀಡೆ, ಸಾಹಿತ್ಯ, ಕಲೆ ಸೇರಿ ನಾನಾ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆಯ ಶಿಖರ ಏರಿದ್ದಾರೆ. ಆರೋಗ್ಯ ಕ್ಷೇತ್ರದ 108 ಆಂಬ್ಯುಲೆನ್ಸ್ ವಾಹನದಲ್ಲಿ ಹಗಲು, ರಾತ್ರಿಯೆನ್ನದೇ ಮಹಿಳಾ ಸಿಬ್ಬಂದಿ ತಮ್ಮ ಕರ್ತವ್ಯದಲ್ಲಿ ನಿರತರಾಗುವ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯ  ವೈದ್ಯೆ  ಡಾ.ಶಾಲಿನಿ ಮಾತನಾಡಿ, ನಾನು ಹೆಣ್ಣು ಎನ್ನುವ  ಕೀಳರಿಮೆಯನ್ನು ಬಿಟ್ಟು  ಎಲ್ಲರಂತೆ ಸಮಾನಳು ಎಂಬ ಭಾವನೆಯಲ್ಲಿ ಬದುಕಬೇಕಿದೆ. ನಾನಾ ಕ್ಷೇತ್ರದಲ್ಲಿ ಪುರಷರಷ್ಟೇ ಸಮಾನವಾಗಿ ಮಹಿಳೆಯರು ಸಹ ಸಾಧನೆ ಮಾಡಿ  ಮೆರೆದಿದ್ದಾರೆ. ಇಂಥ ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ, ಗೌರವ ಸಿಗಬೇಕು. 108ರ  ಅಂಬ್ಯುಲೆನ್ಸ್ ವಾಹನದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಸನ್ಮಾನಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಡಾ.ರಜಿನಿ, 108ರ  ಆಂಬ್ಯುಲೆನ್ಸ್ ಸೇವೆಯ ಜಿಲ್ಲಾ ಪ್ರಾಯೋಗಿಕ ಮುಖ್ಯಸ್ಥ ವಿನಯಕುಮಾರ್, ವಿಜಯನಗರ ಜಿಲ್ಲಾ ಮುಖ್ಯಸ್ಥ ಸಂತೋಷ್ ಕುಮಾರ್, ಸಿಬ್ಬಂದಿ ವಿಜಯಕುಮಾರ್, ನಾಗರಾಜ, ಮಂಜುನಾಥ, ಪಂಪಾಪತಿ, ಖಾಜಾಸಾಬ್, ಸುರೇಶ್, ಶ್ರೀಕಾಂತ್, ಮಾರೇಶ್, ಹ್ಯಾರಿ ಯವನ್‌ಕುಮಾರ್ ಹಾಗೂ ತಾಲೂಕು ಆಸ್ಪತ್ರೆ ಸಿಬ್ಬಂದಿ ಸರೋಜಾ, ಕೊಟ್ರಮ್ಮ, ಉಮಾ ಸೇರಿ ಇತರರಿದ್ದರು. 108ರ  ಆಂಬ್ಯುಲೆನ್ಸ್ ವಾಹನದ ಮಹಿಳಾ ಸಿಬ್ಬಂದಿ ಜ್ಯೋತಿ ಕುಮಾರಿ, ಪ್ರೀತಿ ಅವರನ್ನು ಸನ್ಮಾನಿಸುವುದರ ಜೊತೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಸಹ ಕಿರು ಕಾಣಿಕೆಯನ್ನು ವಿತರಿಸಲಾಯಿತು.