ಪರಭಾಷೆ ಪ್ರಭಾವ ಇದ್ದರು, ನಮ್ಮ ಮಾತೃಭಾಷೆಗೆ ಕಾಳಜಿ ಇರಲಿ : ನ್ಯಾಯವಾದಿ ಸಿದ್ದಪ್ಪ
ಸಂಜೆವಾಣಿವಾರ್ತೆ
ಹರಪನಹಳ್ಳಿ, ಮಾ.09: ಕನ್ನಡದ ಬಗ್ಗೆ ಕಾಳಜಿ ಮತ್ತು ಕಳಕಳಿಯಿಟ್ಟುಕೊಂಡವರು ಕನ್ನಡದಲ್ಲೇ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪರಭಾಷೆಗಳು ಎಷ್ಟೇ ನಮ್ಮ ಮೇಲೆ ಪ್ರಭಾವ ಬೀರಿದರೂ ನಾವು ನಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು ಎಂದು ನ್ಯಾಯವಾದಿ  ಸಿದ್ದಪ್ಪ  ಹೇಳಿದರು.
ಪಟ್ಟಣದ ಹರಿಹರ ರಸ್ತೆಯ ಸಾರಿಗೆ ಬಸ್ ಡಿಪೋ ಹಿಂಬಾಗದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಬೆಣ್ಣಿಹಳ್ಳಿ ಚಪ್ಪರದಹಳ್ಳಿ ಶ್ರೀಮತಿ ಬಸಮ್ಮ ಕೆಂಚಪ್ಪ ದತ್ತಿ. ಲಿಂ.ತೆಗ್ಗಿನ ಮಠದ ಚೆನ್ನವೀರಯ್ಯ ಶಾಸ್ತ್ರಿಗಳು ಮತ್ತು ಕುಟುಂಬ ವರ್ಗದ ದತ್ತಿ.ಮೇಘರಾಜ ಜೈನ್ ದತ್ತಿ.ಕೆ.ಎಂ.ಗುರುಸಿದ್ದಯ್ಯ ಮತ್ತು ಕೆ.ಎಂ.ಗಿರಿಜಮ್ಮ ಜ್ಞಾಪಕಾರ್ಥ ಗುರುಗಿರಿ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂಗ್ಲೀಷ್ ಭಾಷೆ ಅನಿವಾರ್ಯವಾದರೂ, ಕನ್ನಡದ ನೆಲದಲ್ಲಿ ಕನ್ನಡ ಸಾಹಿತ್ಯ, ಭಾಷೆಗೆ ಅಗ್ರ ಸ್ಥಾನ ದೊರೆಯಬೇಕು  ಕನ್ನಡ ಮತ್ತು ಸಂಸ್ಕೃತಿಗೆ ಆದ್ಯತೆ ನೀಡಲಾಗುತ್ತಿಲ್ಲ ಎಂಬ ಆಕ್ಷೇಪ ಎಲ್ಲಿಯೂ ಕೇಳಿ ಬರದಂತೆ ನಿಭಾಯಿಸಬೇಕು. ಕನ್ನಡವೇ ಸರ್ವಸ್ವವಾಗಿ ಸ್ವೀಕರಿಸಿದ ನಾಡಿನಲ್ಲಿ ಪರಭಾಷೆಗಳ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅದ್ಯಕ್ಷ ಕೆ.ಉಚ್ಚೆಂಗೆಪ್ಪ   ಮಾತನಾಡಿ ಜ್ಯೋತಿಷ್ಯ ಕೇವಲ ವಿಜ್ಞಾನವಲ್ಲ, ಇದು ದೈವಿಕ ವಿಜ್ಞಾನವಾಗಿದೆ ಏಕೆಂದರೆ ಎಲ್ಲಾ ಗ್ರಹಗಳು ಮತ್ತು ನಕ್ಷತ್ರ ಪುಂಜಗಳನ್ನು ಕೇವಲ ಭೌತಿಕ ಘಟಕಗಳಾಗಿ ನೋಡಲಾಗುವುದಿಲ್ಲ ಆದರೆ ಅವು ಭೂಮಿಯ ಮೇಲಿನ ಜೀವನದ ಮೇಲೆ ಪ್ರಭಾವ ಬೀರುವುದರಿಂದ ಅವುಗಳನ್ನು ದೇವತೆಗಳಾಗಿ ಪೂಜಿಸಲಾಗುತ್ತದೆ. ಆದ್ದರಿಂದ, ಭಾರತದಲ್ಲಿ ಗ್ರಹಗಳನ್ನು ಪೂಜಿಸಲಾಗುತ್ತದೆ. ಸೂರ್ಯನನ್ನು ದೈವಿಕ ತಂದೆ, ಸೂರ್ಯ ನಾರಾಯಣ ಎಂದು ಪರಿಗಣಿಸಲಾಗುತ್ತದೆ ಮತ್ತು ಭೂಮಿಯನ್ನು ದೈವಿಕ ತಾಯಿ, ನಾರಾಯಣನ ಪತ್ನಿ ಭೂ ದೇವಿ ಎಂದು ಪೂಜಿಸಲಾಗುತ್ತದೆ ಎಂದರು
ಕಾಯಕ ಮತ್ತು ಧರ್ಮ ವೈಚಾರಿಕತೆ ಮತ್ತು ಧರ್ಮ ನೈಜ ಸಮಾಜವಾದದ ಪರಿಕಲ್ಪನೆ ಎಂಬ ವಿಷಯ ಕುರಿತು ಕನ್ನಡ ಸಹ ಶಿಕ್ಷಕರಾದ ಮುಮ್ತಾಜ್ ಬೇಗಂ.ಕೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಗೌರವ ಕಾರ್ಯದರ್ಶಿಗಳಾದ ಆರ್  ಪದ್ಮರಾಜ ಜೈನ್. ಜಿ.ಮಹಾದೇವಪ್ಪ, ಸುಭದ್ರಮ್ಮ ಮಾಡ್ಲಗೇರಿ, ವಾರ್ಡನ್ ಎನ್.ಜಿ.ಬಸವರಾಜ ಸೇರಿದಂತೆ ಇತರರು ಇದ್ದರು.