ಎಸ್ಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಎಸ್.ಪಿ. ಲಿಂಬ್ಯನಾಯ್ಕ ನೇಮಕ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಮಾ.9; ಲೋಕಸಭಾ ಚುನಾವಣೆ ಹಾಗೂ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು  ಗಮನದಲ್ಲಿರಿಸಿಕೊಂಡು  ಬಿಜೆಪಿ ರಾಜ್ಯ ಅಧ್ಯಕ್ಷ  ಬಿ.ವೈವಿಜಯೇಂದ್ರ ಅವರು ರಾಜ್ಯದ ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳನ್ನು ಬಿಜೆಪಿ ಪಕ್ಷವನ್ನು ಸದೃಢವಾಗಿ ಸಂಘಟಿಸಲು ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು ಆದರಲ್ಲೂ ಹರಪನಹಳ್ಳಿ ತಾಲೂಕಿನ ಶಿವಪುರ ಗ್ರಾಮ ಪಕ್ಷದ ನಿಷ್ಠವಂತ ಕಾರ್ಯಕರ್ತನನ್ನು ಗುರುತಿಸಿ ಎಸ್ಸಿ ಮೋರ್ಚದ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ.
ಈ ಹಿಂದೆ ಎಸ್.ಪಿ. ಲಿಂಬ್ಯನಾಯ್ಕ ಇವರು ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತನಾಗಿ, ತಾಲೂಕು ಬಿಜೆಪಿ ಮಂಡಲದ ಕಾರ್ಯದರ್ಶಿಯಾಗಿ, ತಾಂಡ ಅಭಿವೃದ್ದಿ ನಿಗಮದ ನಿರ್ದೇಕರಾಗಿ ಕಾರ್ಯನಿರ್ವಹಿಸಿದ್ದರು, ರಾಜ್ಯ ಬಿಜೆಪಿ ಘಟಕದ ಎಸ್ಸಿ ಮೋರ್ಚಾದ ರಾಜ್ಯ ಅಧ್ಯಕ್ಷ ಎಸ್. ಮಂಜುನಾಥ್ ರವರ ಶಿಪಾರಸ್ಸಿನ ಮೇರೆಗೆ ಶಿವಪುರ ಗ್ರಾಮ ಎಸ್.ಪಿ. ಲಿಂಬ್ಯನಾಯ್ಕ ಇವರನ್ನು ರಾಜ್ಯ ಎಸ್ಸಿ ಘಟಕದ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ವಿಜಯನಗರ ಜಿಲ್ಲಾ ಎಸ್ಸಿ ಮೋರ್ಚಾದ ಉಪಾಧ್ಯಕ್ಷರಾಗಿ ಮಂಜ್ಯನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಕಣವಿಹಳ್ಳಿ  ಮಂಜುನಾಥ, ಕಾರ್ಯದರ್ಶಿಯಾಗಿ ಜಟ್ಟೇಪ್ಪ ರವರನ್ನು ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷ ಎಲ್. ತೋಟಾನಾಯ್ಕ ರವರು ಸದರಿಯವರನ್ನು ನೂತನ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿದ್ದಾರೆ.