ಪ್ರಶಸ್ತಿ ಪ್ರದಾನ ಸಮಾರಂಭ
ಧಾರವಾಡ,ಮಾ.9: ಆರ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಮಹಿಳೆಗೆ ಪ್ರಮುಖವಾಗಿಇರಬೇಕುಅಂದಾಗ ಮಾತ್ರ ಮಹಿಳೆ ಸ್ವಾವಲಂಬಿಯಾಗಿ ಬದುಕಲು ಸಾಧ್ಯಎಂದು ಹೊಸತು ಮಾಸಪತ್ರಿಕೆಯ ಸಂಪಾದಕಡಾ. ಸಿದ್ದನಗೌಡ ಪಾಟೀಲ ನುಡಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ಶತಾಯುಷಿ ಗೌರಮ್ಮಚೆನ್ನಪ್ಪ ಹಲಗತ್ತಿದತ್ತಿ ನಿಮಿತ್ತಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2024 ರ ಅಂಗವಾಗಿ `ಶ್ರಮಿಕ ಮಹಿಳೆ’ ಪ್ರಶಸ್ತಿ ಪ್ರದಾನ ಸಮಾರಂಭದಅತಿಥಿಯಾಗಿ ಮಾತನಾಡುತ್ತಿದ್ದರು.
ಇಂದುಗ್ರಾಮ ಪಂಚಾಯಿತಿ, ತಾಲೂಕಜಿಲ್ಲಾ ಪಂಚಾಯಿತಿಗಳಲ್ಲಿ ಮಹಿಳೆಗೆ ಮೀಸಲಾತಿಇದೆ.ಆದರೆ ಆ ಮೀಸಲಾತಿಅಧಿಕಾರ ಕೇವಲ ಅಧಿಕಾರ ನಿರ್ವಹಣೆ ಮಾಡುವುದಾಗಿದೆಯೇ ವಿನಃ ಕಾನೂನು ಮಾಡುವಅಧಿಕಾರ ಹೊಂದಿರುವುದಿಲ್ಲ. ಯಾವಾಗ ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಗೆ ಮೀಸಲಾಗಿ ನೀಡಿ ಅವಳು ಕಾನೂನನ್ನು ಮಾಡುವಅಧಿಕಾರ ಹೊಂದುತ್ತಾಳೊ ಆವಾಗ ಮಹಿಳೆ ನಿಜವಾದ ಸದ್ಗತಿಯಾಗುವಳು.
ಮಹಿಳಾ ದಿನಾಚರಣೆಯನ್ನು ಸೌಂದರ್ಯ ಸ್ಪರ್ಧೆ, ರಂಗೋಲಿ ಸ್ಪರ್ಧೆಯಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಆಚರಣೆ ಮಾಡದೇ ಹೆಣ್ಣು ಮಕ್ಕಳಲ್ಲಿ ಪ್ರಜ್ಞೆ ಮೂಡಿಸುವಂತೆ ವಿಚಾರ ಸಂಕಿರಣಗಳನ್ನು, ಚರ್ಚೆಗಳನ್ನು ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು. ಮಹಿಳೆ ಸ್ವಾವಲಂಬನೆ ಎನ್ನುವುದು ಅವಳ ಆರ್ಥಿಕ ಅವಲಂಬನೆ ಮೇಲೆ ನಿಂತಿದೆ.ಸಂಪೂರ್ಣ ಸ್ವಾವಲಂಬನೆ ಸಿಗಬೇಕೆಂದರೆ ಸಾಮಾಜಿಕ ಸ್ವಾತಂತ್ರ್ಯಇರಬೇಕು. ಆಗ ಮಹಿಳೆ ನಿರ್ಭಯದಿಂದಜೀವನ ಸಾಗಿಸಲು ಸಾಧ್ಯವಾಗುವುದು.
ಮಹಿಳೆ ಸಾಮಾಜಿಕ, ಆರ್ಥಿಕ, ರಾಜಕೀಯ ಮೀಸಲಾತಿ ಸಿಗಬೇಕೆಂದರೆ ಹೋರಾಟ ಅನಿವಾರ್ಯವಾಗಿದ್ದು, ಮಹಿಳಾ ಲೋಕ ಈ ನಿಟ್ಟಿನಲ್ಲಿ ಆಲೋಚನೆ ಮಾಡುವಂತಾಗಲಿ ಎಂದರು.
ಸಂಘದಉಪಾಧ್ಯಕ್ಷ್ಯೆ ಪ್ರೊ.ಮಾಲತಿ ಪಟ್ಟಣಶೆಟ್ಟಿಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಶಸ್ತಿ ಪ್ರದಾನ ಮಾಡಿದರು.
ಲಕ್ಷ್ಮೀಸಿಂಗನಕೇರಿಯ ಶ್ರೀಮತಿ ವಸರಮ್ಮ ಸಾಬಣ್ಣಕಲ್ಲವಡ್ಡರಅವರಿಗೆ ಶ್ರಮಿಕ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿಗೌರವಿಸಲಾಯಿತು.ರೇಣುಕಾ ಮಂಜುನಾಥಕಲ್ಲವಡ್ಡರ ಸನ್ಮಾನಿತರ ಪರವಾಗಿ ಮಾತನಾಡಿದರು.
ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಹಾಗೂ ದತ್ತಿದಾನಿ ರತ್ನಾ ಹಲಗತ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ದತ್ತಿದಾನಿಗಳ ಪರವಾಗಿ ವಿಶ್ರಾಂತಉಪನಿರ್ದೇಶಕಆರ್. ಸಿ. ಹಲಗತ್ತಿ ಮಾತನಾಡಿದರು. ಎಸ್. ಎಂ. ರಾಚಯ್ಯನವರ ಶತಾಯುಷಿ ಗೌರಮ್ಮ ಹಲಗತ್ತಿಯವರಕುರಿತು ಸ್ವರಚಿತ ಕವನ ವಾಚಿಸಿದರು.
ಸತೀಶತುರಮರಿ ಸ್ವಾಗತಿಸಿದರು.ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಂಕರ ಹಲಗತ್ತಿ ಸನ್ಮಾನಿತರನ್ನು ಪರಿಚಯಿಸಿದರು.ಶಂಕರ ಕುಂಬಿ ನಿರೂಪಿಸಿದರು.ವೀರಣ್ಣಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿಡಾ.ಸಂಜೀವಕುಲಕರ್ಣಿ, ಡಾ.ಶೈಲಜಾಅಮರಶೆಟ್ಟಿ, ಗುರು ಹಿರೇಮಠ, ಡಾ.ಶ್ರೀಶೈಲ ಹುದ್ದಾರ, ಡಾ.ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಅ. ಹಡಗಲಿ, ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ, ಮತ್ತು ಪ್ರಭಾ ನೀರಲಗಿ, ಸುಜಾತಾ ಹಡಗಲಿ, ವ್ಹಿ. ಎನ್. ಕೀರ್ತಿವತಿ, ಜ್ಯೋತಿ ಭಾವಿಕಟ್ಟಿ, ಶಶಿಧರ ತೋಡಕರ, ನಿಂಗಣ್ಣಕುಂಟಿ, ಎಂ. ಎಂ.ಚಿಕಮಠ, ಎಸ್. ಎಂ.ದಾನಪ್ಪಗೌಡರ, ಪ್ರಕಾಶ ಬಾಳಿಕಾಯಿ, ಎ. ಎಲ್. ದೇಸಾಯಿ, ಸಿಕಂದರ ದಂಡಿನ, ಶಿವಾನಂದ ಹೂಗಾರ, ಮಹಾಂತೇಶ ನಾಡಗೌಡ ಮತ್ತು ಹಲಗತ್ತಿ ಪರಿವಾರದವರು ಸೇರಿದಂತೆಅನೇಕರು ಭಾಗವಹಿಸಿದ್ದರು.