ಮಹಾಶಿವರಾತ್ರಿ : ಸೋಮೇಶ್ವರನಿಗೆ ಕ್ಷೀರಾಭಿಷೇಕ
ನರೇಗಲ್,ಮಾ9: ಮಹಾಶಿವರಾತ್ರಿ ನಿಮಿತ್ತ ಈಶ್ವರನ ಆರಾಧನೆಯಲ್ಲಿ ನರೇಗಲ್ಲ ಪಟ್ಟಣದ ನಿವಾಸಿಗಳು ಮಿಂದೆದ್ದರು. ಸ್ಥಳೀಯ ಎಲ್ಲ ಶಿವನ ದೇವಸ್ಥಾನಗಳು ಭಕ್ತರ ಪರಾಕಾಷ್ಠೆಯಲ್ಲಿ ತುಂಬಿ ತುಳುಕುತ್ತಿತ್ತು. ಶಿವನ ಪೂಜೆಗಾಗಿ ಭಕ್ತರು ಬಿಲ್ವಪತ್ರೆ, ಹೂವೂ, ವಿವಿಧ ಹಣ್ಣು ಹಿಡಿದು ಸರದಿ ಸಾಲುನಲ್ಲಿ ನಿಂತು ದರ್ಶನ ಪಡೆಯುವ ದೃಶ್ಯ ಎಲ್ಲ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿತ್ತು.
ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಮಹಾಶಿವರಾತ್ರಿ ನಿಮಿತ್ತ ಶ್ರೀ ಸೋಮೇಶ್ವರನಿಗೆ ವಿಶೇಷ ಪೂಜೆ, ಕ್ಷೀರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಜರುಗಿತು.
ವಿಶ್ವನಾಥಭಟ್ ಗ್ರಾಮಪುರೊಹಿತ, ಎ.ಜಿ ಕುಲಕರ್ಣಿ, ಶಂಕರಾವ ಕುಲಕರ್ಣಿ, ಎಸ್.ಎಚ್ ಕುಲಕರ್ಣಿ, ಶೇಷಗೀರಿರಾವ್ ಕುಲಕರ್ಣಿ, ಸಂಜೀವ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಅಜೀತ ಕುಲಕರ್ಣಿ, ಮಂಜುನಾಥ ಗ್ರಾಮಪುರೋಹಿತ, ಡಾ, ಎನ್.ಎಲ್ ಗ್ರಾಮಪುರೋಹಿತ, ಆದರ್ಶ ಕುಲಕರ್ಣಿ, ಹರೀಶ ಕುಲಕರ್ಣಿ, ಮಂಜುನಾಥ ಕುಲಕರ್ಣಿ, ಕಿರಣ ದೇಸಾಯಿ, ನಾಗರಾಜ ನಾಡಗೇರ, ಗಿರೀಶ ಕುಲಕರ್ಣಿ, ರಾಮಕೃಷ್ಣ ಸದರಜೋಶಿ, ಸುಮಂತ ಗ್ರಾಮಪುರೋಹಿತ ಇದ್ದರು.