ಸಂಭ್ರಮದ ಮಹಾಶಿವರಾತ್ರಿ
ಲಕ್ಷ್ಮೇಶ್ವರ,ಮಾ9: ಮಹಾಶಿವರಾತ್ರಿ ಅಂಗವಾಗಿ ಭಕ್ತರು ಶ್ರೀ ಸೋಮೇಶ್ವರ ದೇವಸ್ಥಾನ ಸಹಸ್ರಲಿಂಗ ದೇವಸ್ಥಾನ ಮತ್ತು ಮುಕ್ತಿ ಮಂದಿರ ಸೇರಿದಂತೆ ದೇವಾಲಯಗಳಿಗೆ ಬೆಳಗ್ಗೆಯಿಂದಲೇ ಭಕ್ತರ ದಂಡು ತಂಡೋಪ ತಂಡವಾಗಿ ಆಗಮಿಸಿ ಶ್ರದ್ಧಾ ಭಕ್ತಿಯಿಂದ ಶಿವನಾಮಸ್ಮೃತಿ ಪಠಿಸಿದರು.
ಭಕ್ತರು ಮಹಾಶಿವರಾತ್ರಿ ಅಂಗವಾಗಿ ಉಪವಾಸ ವೃತ ಆಚರಣೆ ಮಾಡಿದ್ದರು. ಎಲ್ಲಡೆಯೂ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂಬ ಶಿವನಾಮ ಸ್ಮೃತಿ ಕೇಳಿ ಬಂದಿತು.
ಮುಕ್ತಿ ಮಂದಿರದಲ್ಲಿ ಭಕ್ತರು ಮಹಾಶಿವರಾತ್ರಿ ಅಂಗವಾಗಿ ಲಿಂಗಗಳಿಗೆ ಅಭಿಷೇಕ ವಿಶೇಷ ಪೂಜೆ ಸಲ್ಲಿಸುತ್ತಿರುವ ದೃಶ್ಯ ಕಂಡು ಬಂದಿತ್ತು.