ಭಿತ್ತಿ ಪತ್ರ ಪ್ರದರ್ಶನ
ನವಲಗುಂದ,ಮಾ.9: ನಿರಂಜನ ಜ್ಯೋತಿ ಲಿಂ. ಮೃತ್ಯುಂಜಯ ಅಜ್ಜನ ಸಂಭ್ರಮ ಕಾರ್ಯಕ್ರಮ ಮಾ.11ರಿಂದ ಏಳು ದಿನಗಳ ಕಾಲ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ಪಟ್ಟಣದ ವಿಠಲ ಹರಿಮಂದಿರದಲ್ಲಿ ಭಕ್ತರ ಸಭೆಯಲ್ಲಿ ಬಿತ್ತಿ ಪತ್ರ ಪ್ರದರ್ಶಿಸಿ ಮಾತನಾಡಿದ ಅವರು ಲಿಂಗೈಕ್ಯ ಮೃತ್ಯಂಜಯ ಅಜ್ಜನವರು ಭಕ್ತರ ಮನದಲ್ಲಿ ನೆಲೆಯೂರಿದ್ದಾರೆ. ದಾನಿಗಳ ನೆರವಿನಿಂದ ಗ್ರಾಮೀಣ ಭಾಗದಲ್ಲಿ ಅಜ್ಜನವರು ನಡೆದಾಡಿದ ಕ್ಷೇತ್ರದಲ್ಲಿ ಹೈಟೆಕ್ ಮಣಕವಾಡ ಹೆರಿಟೇಜ್ ಶಾಲೆ, ಪ್ರಸಾದ ನಿಲಯ ಹಾಗೂ ಗ್ರಂಥಾಲಯ ಲೋಕಾರ್ಪಣೆ ಮಾಡಲಾಗುತ್ತಿದೆ.
ತುಮಕೂರು ಸಿದ್ದಗಂಗಾ ಕ್ಷೇತ್ರದ ಶ್ರೀ ಸಿದ್ದಲಿಂಗ ಸ್ವಾಮಿಗಳು, ಕೋಡಿಮಠ ಸಂಸ್ಥಾನದ ಶ್ರೀ ಶಿವಾನಂದ ರಾಜಯೋಗೀಂದ್ರ ಸ್ವಾಮಿಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಆಗಮಿಸಲಿದ್ದಾರೆ. ಮಾ. 11ರಂದು ಒಂದು ಸಾವಿರ ಸುಮಂಗಲೆಯರಿಂದ ವಚನಗಳ ಪುಸ್ತಕದೊಂದಿಗೆ ಕುಂಭಮೇಳ ಹಮ್ಮಿಕೊಳ್ಳಲಾಗಿದೆ.
ಇದು ಭಕ್ತರ ಮಠ ಭಕ್ತರೇ ಎಲ್ಲವೂ ಭಕ್ತರು ಬಂದು ಸೇವೆ ಸಲ್ಲಿಸಿ ಅನ್ನಪ್ರಸಾದ ಸವಿದರೆ ಸಾಕು ಅದೇ ಗುರುವಿನ ಭಕ್ತಿ ಭಕ್ತರಿಗೆ ಕೇವಲ ಪ್ರಸಾದ ನೀಡುವುದಷ್ಟೇ ಮಠದ ಏಳಿಗೆ ಅಲ್ಲ ವಿದ್ಯೆ ಕಲಿಸುವುದು ಒಂದು ಕಾಯಕವಾಗಿದೆ ಅದರಂತೆ ನಮ್ಮ ವಿದ್ಯಾಪೀಠವು ಒಂದು ಈಗಾಗಲೇ ಬೇರೆ ಬೇರೆ ಜಿಲ್ಲೆಗಳಿಂದ ಪ್ರವೇಶಗಳಿಗೆ ಮೊರೆ ಇಡುತ್ತಿದ್ದಾರೆ ಅದಕ್ಕೆಲ್ಲ ಅಜ್ಜನ ಮಠದ ಭಕ್ತರ ಸಹಾಯದಿಂದ ಎಲ್ಲವೂ ಮೃತ್ಯುಂಜಯ ಅಜ್ಜನ ನಡೆಸಿದ ಹಾಗೆ ನಡೆಯುತ್ತಿದೆ ಎಂದರು.
ಓಂ ಗುರು ಸ್ವಾಮೀಜಿಗಳು ಮಾತನಾಡಿ, ಮಾ.11ರಿಂದ ಏಳು ದಿನ ಧಾರ್ಮಿಕ ಕಾರ್ಯಕ್ರಮಗಳು ಇರುತ್ತವೆ. 14ರಂದು ಮಣಕವಾಡ ಹೆರಿಟೇಜ್ ಶಾಲೆ, ಪ್ರಸಾದ ನಿಲಯ ಹಾಗೂ ಗ್ರಂಥಾಲಯ ಲೋಕಾರ್ಪಣೆ, 17ರಂದು ಸಮಾರೋಪ ಸಮಾರಂಭ ಹಾಗೂ ಶಿರಹಟ್ಟಿ ಜಗದ್ಗುರುಗಳು ಅಮೃತಮಹೋತ್ಸವ ನಿಮಿತ್ತ ತುಲಾಭಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ರಾಯನಗೌಡ ಪಾಟೀಲ, ಅಣ್ಣಪ್ಪ ಬಾಗಿ, ಪ್ರಭು ಇಬ್ರಾಹಿಂಪುರ, ಮಹಾಂತೇಶ ಕಲಾಲ, ಚನ್ನಪ್ಪ ನಾಗರಹಳ್ಳಿ, ಅಬ್ಬಾಸಅಲಿ ದೇವರಿಡು, ಶರಣಪ್ಪ ಹಕ್ಕರಕಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾತೇಶ ಭೋವಿ, ಮೋದಿನಸಾಬ ಶಿರೂರ, ಅಪ್ಪಣ್ಣ ಹಳ್ಳದ, ಶಿವಾನಂದ ತಡಸಿ, ಶಿವಾಜಿ ಪವಾರ, ಶಿವಾಜಿ ಕಲಾಲ, ವಿನಾಯಕ ದಾಡಿಬಾವಿ,ರಮೇಶ ಪಾಟೀಲ,ಈರಣ್ಣಾ ಹಡಪದ,ನಾರಾಯಣ ಕುರಹಟ್ಟಿ, ಸುಲೇಮಾನ ನಾಶಿಪುಡಿ ಎಸ್ ಎನ್ ಡೂಂಬಳ ಇನ್ನಿತರರಿದ್ದರು.