ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ
ನವಲಗುಂದ,ಮಾ.9: ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಎಷ್ಟೇ ಕಷ್ಟ ಬಂದರೂ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಅವರು ಪಟ್ಟಣದ ಸರಕಾರಿ ಉರ್ದು ಪ್ರೌಢ ಶಾಲೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಇದಕ್ಕೂ ಮೊದಲು ಗಣ್ಯರೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲ್ಲೂಕಾ ಅಧ್ಯಕ್ಷ ಎ ಬಿ ಕೊಪ್ಪದ ಮಾತನಾಡಿ ಶಿಕ್ಷಣ ಎಲ್ಲವನ್ನೂ ನೀಡುವ ಪ್ರಬಲ ಸಾಧನ. ಶಿಕ್ಷಣ ಬದುಕು ಕಟ್ಟಿಕೊಳ್ಳಲು ಒಂದು ಸುಂದರ ಅವಕಾಶ. ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಪಟ್ಟು ಓದಿ ನಿಮ್ಮ ಬದುಕು ಸುಂದರವಾಗಿಸಿಕೊಳ್ಳಿ. ಶಿಕ್ಷಣ, ಜ್ಞಾನವನ್ನು ನೀಡುವದರ ಜೊತೆಗೆ ಸಂಸ್ಕಾರ, ಮೌಲ್ಯ, ನೈತಿಕತೆ, ಮತ್ತು ನೆತ್ತಿ ತುಂಬಿಸುವದರ ಜೊತೆಗೆ ಹೊಟ್ಟೆ ತುಂಬುತ್ತದೆ.ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಶಿಕ್ಷಣ ಪಡೆದು ತಮ್ಮ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು…
ಪರೀಕ್ಷೆಗೆ ಇನ್ನು ಕೆಲವೇ ದಿನ ಬಾಕಿಯಿದೆ. ವಿದ್ಯಾರ್ಥಿಗಳು ವ್ಯವಸ್ಥಿತವಾಗಿ, ಯೋಜನಾ ಬದ್ಧವಾಗಿ,ಸಮಯ ಹೊಂದಾಣಿಕೆ ಮಾಡಿಕೊಂಡು ಅಭ್ಯಾಸ ಮಾಡಿ.ಪರೀಕ್ಷೆ ಬಗ್ಗೆ ಭಯ ಬೇಡ.ಈ ಹಿಂದಿನ ತರಗತಿಗಳ ಪರೀಕ್ಷೆ ಎದುರಿಸಿದಂತೆಯೇ ಈ ಪರೀಕ್ಷೆಯನ್ನು ಎದುರಿಸಿ. ಪರೀಕ್ಷೆಗೆ ಅಭ್ಯಾಸದ ಸನ್ನದ್ಧತೆ ಮಾಡಿಕೊಳ್ಳಿ. ಗುರುಗಳು ನೀಡಿದ ಸಲಹೆ, ಸೂಚನೆ, ಮಾರ್ಗದರ್ಶಿಯಂತೆ ತಯಾರಿ ಮಾಡಿಕೊಳ್ಳಿ.ಪರೀಕ್ಷೆಯಲ್ಲಿ ಖಂಡಿತವಾಗಿ ಯಶಸ್ಸು ನಿಮ್ಮದಾಗುತ್ತದೆ. ನಿಮಗೆಲ್ಲರಿಗೂ ಶುಭವಾಗಲಿ ಎಂದರು.
ಧರ್ಮಗುರು ಅಮಾನುಲ್ಲಾ ಖಾಜಿ, ಪುರಸಭಾ ಸದಸ್ಯ ಮೋದಿನ ಶಿರೂರು, ದಾವಲಸಾಬ್ ಮಸೂತಿ, ಶಾಲೆಯ ಪ್ರದಾನಗುರು ದ್ಯಾಮನಗೌಡ ಹುಲ್ಲೂರ್, ಎಂ ಎಂ ಕೊತವಾಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು
ಕಳೆದ ವರ್ಷ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಸ್ಥಾನ ಪಡೆದ ಮಹೇತಾಜ್ ದಾವಲಸಾಬ ಹುಗ್ಗಿ, ದ್ವಿತೀಯ ದಾವಲಬಿ ಮಕಬುಲಸಾಬ ಗುಳೇದ, ಹಾಗೂ ತೃತೀಯ ಸ್ಥಾನ ಪಡೆದ ಗೌಸಿಯಾಬೇಗಂ ಖಾಜಿ ಮೂವರು ವಿದ್ಯಾರ್ಥಿಗಳಿಗೆ ಎಸ್ ಡಿ ಎಂ ಸಿ ಅಧ್ಯಕ್ಷ ಖಾಜಾಸಾಬ್ ಮುಲ್ಲಾಹಂಚಿನಾಳ ವಯಕ್ತಿಕವಾಗಿ ನಗದು ಬಹುಮಾನ ವಿತರಿಸಿದರು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಅಲ್ಲಾಸಾಬ್ ಕಲ್ಕುಟ್ರಿ, ಸೈಪುದ್ದೀನ್ ಅವರಾಧಿ, ರಿಯಾಜಅಹಮ್ಮದ್ ನಾಸಿಪುಡಿ, ಖಾಸಿಂಸಾಬ್ ಅಲ್ಲಿಬಾಯಿ, ಹಟೇಲಸಾಬ್ ರಾಮದುರ್ಗ, ಶಿಕ್ಷಕರರಾದ ಎಂ ಯು ಸಿರಗೂರ, ಎಸ್ ಪಿ ಕಾಮತ್, ಮೀರಾ ಒಡೆಯರ, ವಿ ಆರ್ ಜಾಧವ, ಎಂ ಎಸ್ ಜಮಖಂಡಿ ಇತರರು ಉಪಸ್ಥಿತರಿದ್ದರು.