ಹುಡದಳ್ಳಿ: ಬೆಂಕಿ ಅವಗಡದಲ್ಲಿ ಮನೆ ಭಸ್ಮ
ಚಿಂಚೋಳಿ,ಮಾ.9- ತಾಲೂಕಿನ ಹುಡದಳ್ಳಿ ಗ್ರಾಮದ ಅನೀಲ ಕುಮಾರ ಜಮಾದಾರ, ಅವರ ಮನೆಗೆ ನಿನ್ನೆ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಗಡದಿಂದ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಬೆಂಕಿಯಿಂದ ಮನೆಯಲ್ಲಿದ್ದ 20 ಕ್ವಿಂಟಲ್ ತೊಗರಿ ಬೆಳೆ ಚೀಲಗಳು ಹಾಗೂ ಮನೆಯಲ್ಲಿರುವ ಸಾಮಾನುಗಳು ಸಂಪೂರ್ಣ ಬೆಂಕಿಯಿಂದ ಸುಟ್ಟು ಕರ್ಕಲವಾಗಿದ್ದು, ಬೆಂಕಿ ನಂದಿಸಲು ಸ್ಥಳಕ್ಕೆ ಚಿಂಚೋಳಿ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿನಂದಿಸುವ ಮೂಲಕ ಹೆಚ್ಚಿನ ಹಾನಿಯನ್ನು ತಡೆದಿದ್ದಾರೆ.
ಮನೆ ಮಾಲೀಕರಾದ ಕೋಲಿ ಸಮಾಜದ ತಾಲೂಕ ಅಧ್ಯಕ್ಷರಾದ ಅನೀಲ ಕುಮಾರ ಜಮಾದಾರ, ಅವರು ಮಾಧ್ಯಮದವರಿಗೆ ಮಾತನಾಡಿ ನಮ್ಮ ಮನೆಯಲ್ಲಿ 20 ಕ್ವಿಂಟಲ್ ತೊಗರಿ ಮತ್ತು ಕೆಎಂಎಫ್ ದಿಂದ ತಂದಿದ ಹಾಲು ಟೆಸ್ಟ್ ಮಾಡುವ ಯಂತ್ರಗಳು ಹುಟ್ಟು ಕರ್ಕ ವಾಗಿದ್ದು ನಮ್ಮ ಮನೆಯಲ್ಲಿ ಅಂದಾಜು 5 ಲಕ್ಷಕ್ಕಿಂತ ಹೆಚ್ಚು ಸಾಮಾನುಗಳು ಹಾನಿಗಿಡಾಗಿವೆ. ಕೂಡಲೇ ಸರ್ಕಾರವು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ