ಸಮಾಜದ ಪ್ರಗತಿಗೆ ವಚನ ಸಾಹಿತ್ಯ ಅಗತ್ಯ
ಸಂಜೆವಾಣಿ ವಾರ್ತೆ
ಹುಮನಾಬಾದ್ :ಮಾ.9: ಆಧುನಿಕ ಯುಗದಲ್ಲಿ ಸಮಾಜದ ಪ್ರಗತಿಗಾಗಿ ವಚನ ಸಾಹಿತ್ಯ ಅಗತ್ಯವಾಗಿದೆ ಎಂದು ಹುಲಸೂರಿನ ಶಿವಾನಂದ ಮಹಾಸ್ವಾಮಿ ಹೇಳಿದರು.
ತಾಲೂಕಿನ ಸಿಂಧನಕೇರಾ ಗ್ರಾಮದಲ್ಲಿ ನಡೆದ ಸೋಮಲಿಂಗೇಶ್ವರ ಪಲ್ಲಕ್ಕಿ ಉತ್ಸವ ನಿಮಿತ್ತ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಆರೋಗ್ಯಕರ ಸಮಾಜದಲ್ಲಿ ಮಾನವೀಯ ಮೌಲ್ಯವನ್ನು ಒಳಗೊಂಡಿರುವ ಬದುಕನ್ನು ಕಟ್ಟಿಕೊಳ್ಳಲು ಹಾಗೂ ಉತ್ತಮ ಆಡಳಿತಗಾರನಾಗಲು ವಚನ ಸಾಹಿತ್ಯದ ಅಧ್ಯಯನ ಹಾಗೂ ಅದರ ಪಾಲನೆಯು ಎಂದಿಗಿಂತಲೂ ಇಂದು ತುಂಬಾ ಅಗತ್ಯವಿದೆ ಎಂದರು.
ಪ್ರಸ್ತುತ ಸಮಾಜದ ಮಕ್ಕಳಲ್ಲಿ ಸಂಸ್ಕøತಿ ಹಾಗೂ ಗೌರವ ಮನೋಭಾವನೆ ಕಡಿಮೆಯಾಗುತ್ತಿವೆ. ಹೀಗಾಗಿ ಇಂದಿನ ಮಕ್ಕಳು ಬಸವಣ್ಣನವರ ತತ್ವಾರ್ದಶಗಳನ್ನು ಮೈಗೂಡಿಸಿಕೊಂಡು ನಮ್ಮ ಸಂಸ್ಕೃತಿ ಹಾಗೂ ಗುರಿ ಹಿರಿಯರನ್ನು ಗೌರವಿಸಬೇಕು ಎಂದು ತಿಳಿಸಿದರು.
ಸಿಂಧನಕೇರಾ ಗ್ರಾಮದ ವಿರಕ್ತ ಮಠದ ಹೊನ್ನಲಿಂಗೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿದ ಸೋಮಲಿಂಗೇಶ್ವರ ಪಲ್ಲಕ್ಕಿ ಉತ್ಸವ ನಿಮಿತ್ತ ಬೀದರ್ ಲಿಂಗಾಯತ ಮಹಾಮಠದ ಪ್ರಭು ದೇವರು 1 ವಾರಗಳ ಕಾಲ ಜೀವನ ದರ್ಶನ ಪ್ರವಚನ ನೀಡಿದರು. ಛತ್ರಪ್ಪ ಹಡಪದ, ಶಾಂತಕುಮಾರ ಕಾಡವಾದ, ಸೂರ್ಯಕಾಂತ ಹಡಪದ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ತ್ರಿಪುರಾಂತ ಮಠದ ಘನರುದ್ರಮುನಿ ಶಿವಾಚಾರ್ಯರು, ಕಲೂರ ಹಿರೇಮಠದ ಮೃತ್ಯುಂಜಯ ಶಿವಾಚಾರ್ಯರು, ಗಣಪತಿ ಕಾಡವಾದೆ, ಕರಬಸಪ್ಪ ಪೆÇಲೀಸ್‍ಪಾಟೀಲ್, ಸಂಜು ತಟಪಟೆ, ವಿಜಯಕುಮಾರ ಕಾಡವಾದ, ರವಿ ಸ್ವಾಮಿ, ರೇವಣಸಿದ್ದ ಸಿಂಧನಕೇರಾ, ಮನೋಹರ ಕಾಡವಾದ ಇದ್ದರು. ವೀರಣ್ಣ ಕುಂಬಾರ್ ಕಾರ್ಯಕ್ರಮ ನಿರೂಪಿಸಿ, ವಂಧಿಸಿದರು.