ಬಸವತೀರ್ಥ ಮಠ: ಶ್ರೀ ಸಿದ್ದಬಸವೇಶ್ವರ ಜಾತ್ರಾ ಮಹೋತ್ಸವ ಸಂಪನ್ನ
ಸಂಜೆವಾಣಿ ವಾರ್ತೆ
ಹುಮನಾಬಾದ್: ಮಾ.9:ಬೀದರ್ ಜಿಲ್ಲೆಯಲ್ಲಿಯೆ ಅತ್ಯೆಂತ ಪುರಾತನ ಹಾಗೂ 12ನೇ ಶತಮಾನದಲ್ಲಿ ಶರಣ, ಶರಣಿಯರು ನಡೆದಾಡಿದಂತಹ ಪೂಣ್ಯ ಭೂಮಿ ಬಸವತೀರ್ಥ ಮಠದ ಶ್ರೀ ಸಿದ್ದಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ವಚನ ಸಂಗೀತ್ಯೋತ್ಸವ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತ್ತು,
ಬಸವತೀರ್ಥ ಮಠದ ಕ್ಷೇತ್ರಾಧ್ಯಕ್ಷ ಶ್ರೀ ಮ.ನಿ.ಪ್ರ. ಡಾ.ಸಿದ್ದಲಿಂಗ ಮಹಾಸ್ವಾಮಿ ದಿವ್ಯ ನೇತ್ರತ್ವದಲ್ಲಿ ಬೆಳಿಗ್ಗೆ ಕತೃ ಗದ್ದುಗೆಗೆ ರುದ್ರಾಭಿಷೇಕ್, 8ಕ್ಕೆ ಷಟಸ್ಥಳ ಧ್ವಜಾರೋಹಣ, 11 ಗಂಟೆಗೆ ಬಸವತೀರ್ಥ ವಿದ್ಯಾಪೀಠ ಮಠದಲ್ಲಿ ಶ್ರೀ ಸಿದ್ದಬಸವೇಶ್ವರ ಪಲ್ಲಕ್ಕಿ ಉತ್ಸವ, ಪ್ರಸಿದ್ದ ವಚನ ಸಂಗೀತಗಾರರಾದ ಶಿವಕುಮಾರ ಪಂಚಾಳ ಅವರ ವಚನ ಸಂಗೀತ ಕಾರ್ಯಕ್ರಮ, 500 ಮುತೈದೆಯರಿಗೆ ಉಡಿ ತುಂಬುವ ಹಾಗೂ ಕುಂಭ ಮೇಳ ಮೇಳ ಜರುಗಿತು. ಬಳಿಕ ಬಂದಂತಹ ಭಕ್ತರಿಗೆ ಹುಗ್ಗಿ ತುಪ್ಪ (ಸಜ್ಜಕ ತುಪ್ಪ) ಮಹಾಪ್ರಸಾದ ವಿತರಿಸಲಾಯಿತು. ಯುವ ನಾಯಕ ಗಣೇಶ ಪಾಟೀಲ, ಹರಸೂರನ ಕಲ್ಮಠದ ಕರಿಸ್ದೇಶ್ವರ ಶಿವಾಚಾರ್ಯರು, ಹಿರಿಯ ಸಾಹಿತಿ ಸೋಮನಾಥ ಯಳವಾರ, ಅಶೋಕ ಸರ್, ಗುರು ಪಾಟೀಲ, ಸರ್, ಮಹಾಂತೇಶ್ ಹಿರೇಮಠ, ಎನ್‍ಡಿ ಇದಲೈ, ಸೇರಿದಂತೆ ಅನೇಕರು ಇದ್ದರು.