ಜನವಸತಿ ಪ್ರದೇಶದಲ್ಲಿ ಮಧ್ಯದ ಅಂಗಡಿಗೆ ಅನುಮತಿಅಬಕಾರಿ ಇಲಾಖೆ ವಿರುದ್ದ ಅಹೋರಾತ್ರಿ ಧರಣಿಗಿಳಿದ ಮಹಿಳೆಯರು
ಅಥಣಿ : ಮಾ.9:ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಹತ್ತಿರದ ಸಂಕೋನಟ್ಟಿ ವಲಯದ ಜನವಸತಿ ಪ್ರದೇಶದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದು, ಬಾಡಿಗೆ ಮನೆಯಲ್ಲಿ ನಡೆಸಲಾಗುತ್ತಿರುವ ಈ ಮಧ್ಯದ ಅಂಗಡಿಯನ್ನು ಕೂಡಲೇ ತೆರವುಗೊಳಿಸಬೇಕು, ಸರಾಯಿ ಅಂಗಡಿ ಬೇರೆ ಅಡಿಗೆ ಸ್ಥಳಾಂತರವಾಗುವರಿಗೆ ನಾವು ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ತಾಲೂಕಿನ ಮಸರಗುಪ್ಪಿಯಲ್ಲಿ ನಡೆಸಲಾಗುತ್ತಿದ್ದ ಎಂ ಎಸ್ ಐ ಎಲ್ ಸಾರಾಯಿ ಅಂಗಡಿಯನ್ನು ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಹತ್ತಿರದ ಜನವಸತಿ ಪ್ರದೇಶದ ಹತ್ತಿರ ಬಾಡಿಗೆ ಮನೆ ಒಂದರಲ್ಲಿ ಸ್ಥಳಾಂತರಿಸಲಾಗಿದ್ದು, ಇಲ್ಲಿನ ನಿವಾಸಿಗಳು, ಮಹಿಳೆಯರು ಈ ಸರಾಯಿ ಅಂಗಡಿಯಿಂದ ಸಾರ್ವಜನಿಕರಿಗೆ, ಮಹಿಳೆಯರಿಗೆ ಮತ್ತು ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ. ಇಲ್ಲಿ ಸರಾಯಿ ಅಂಗಡಿ ನಡೆಸಲು ನಾವು ಅವಕಾಶ ನೀಡುವುದಿಲ್ಲ. ಅಬಕಾರಿ ಅಧಿಕಾರಿಗಳು ಕೂಡಲೇ ಅನುಮತಿ ನೀಡಿದ ಈ ಅಂಗಡಿಯನ್ನ ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದು ಅಗ್ರಹಿಸಿದರು.
ಇಲ್ಲಿನ ನಿವಾಸಿ ನಂದಾಶ್ರೀ ಉಗಾರೆ ಸುದ್ದಿಗಾರರೊಂದಿಗೆ ಮಾತನಾಡಿ 2019 ರಲ್ಲಿ ಇಲ್ಲಿ ಅಕ್ರಮವಾಗಿ ಸರಾಯಿ ಮಾರುತ್ತಿರುವವರ ಬಗ್ಗೆ ಅಬಕಾರಿ ಇಲಾಖೆ ಮತ್ತು ಪೆÇಲೀಸ್ ಠಾಣೆಗೆ ದೂರು ನೀಡಿದ್ದೆವು. ಅದರ ನಂತರ ಈಗ ಸರಾಯಿ ಅಂಗಡಿ ನಡಿಸಲು ಜನವಸತಿ ಇರುವ ಬಾಡಿಗೆ ಮನೆಯಲ್ಲಿ ಇಲಾಖೆಯ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಇಲ್ಲಿ ಹನುಮಂತನ ದೇವಸ್ಥಾನವಿದೆ, ಮಸೀದಿ ಇದೆ, ಇದಲ್ಲದೆ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಇದೆ. ಇಲ್ಲಿ ಸರಾಯಿ ಅಂಗಡಿಯನ್ನ ಪ್ರಾರಂಭಿಸುವುದರಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಹಳಷ್ಟು ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೂ ನಾವು ಇಲ್ಲಿ ಸರಾಯಿ ಅಂಗಡಿ ನಡಿಸಲು ಬಿಡುವುದಿಲ್ಲ. ಅಬಕಾರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಅಂಗಡಿಯನ್ನ ಬೇರೆಡೆಗೆ ಸ್ಥಳಾಂತರಿಸಬೇಕು. ಎರಡು ದಿನಗಳಿಂದ ನಾವು ಧರಣಿ ನಡೆಸುತ್ತಿದ್ದರು ಯಾವ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ, ಅವರು ಇಲ್ಲಿಗೆ ಬರುವರೆಗೆ ಹಗಲು-ರಾತ್ರಿ ನಾವು ಧರಣಿ ಮುಂದುವರಿಸುತ್ತೇವೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ಮಹಿಳೆಯರು ಮತ್ತು ಪುರುಷರು ಕಳೆದ ಎರಡು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿದ್ದು, ಸ್ಥಳಕ್ಕೆ ಅಥಣಿ ಪಿಎ??? ಶಿವಾನಂದ ಕಾರಜೋಳ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು ಕೂಡ ಅಬಕಾರಿ ಇಲಾಖೆಯ ಅಧಿಕಾರಿಗಳು ಬಂದು ಅಂಗಡಿಯನ್ನ ಬೇರೆಡಿಗೆ ಸ್ಥಳಾಂತರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿದ ಮಹಿಳೆಯರು ಮತ್ತು ಮಕ್ಕಳು ಅಹೋ ರಾತ್ರಿಯ ಧರಣಿಯಲ್ಲಿ ನಿರತರಾಗಿದ್ದಾರೆ.
ಈ ಬಗ್ಗೆ ಅಬಕಾರಿ ಇಲಾಖೆಯ ಡಿವೈಎಸ್ಪಿ ವಜ್ರಮಟ್ಟಿ ಅವರನ್ನು ಸಂಪರ್ಕಿಸಿದಾಗ ನಮ್ಮ ಇಲಾಖೆಯ ಅನುಮತಿಯನ್ನು ಪಡೆದುಕೊಂಡು ಮಸರಗುಪ್ಪಿಯಿಂದ ಅಂಗಡಿಯನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಜನವಸತಿ ಪ್ರದೇಶ ಇರುವುದು ನಿಜ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ ಬೇರೆ ಕಡೆಗೆ ಸ್ಥಳಾಂತರಿಸುತ್ತೇವೆ, ಪ್ರತಿಭಟನೆ ಕೈಬಿಡುವಂತೆ ಅಲ್ಲಿನ ಜನರಲ್ಲಿ ಮನವಿ ಮಾಡಿದ್ದೇವೆ. ಈಗ ರಜೆ ಇರುವುದರಿಂದ ಸೋಮವಾರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳುವ ಮೂಲಕ ಜಾರಿಕೊಳ್ಳುವ ಪ್ರಯತ್ನ ಮಾಡಿದರು.
” ರಾಜ್ಯ ಸರ್ಕಾರ ಮಹಿಳೆಯರ ಸ್ವಾವಲಂಬಿ ಬದುಕಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ 2000 ರೂಪಾಯಿ ನೀಡಿ, ಈ ರೀತಿ ಮನೆಗಳಿರುವ ಪ್ರದೇಶದಲ್ಲಿ ಸರಾಯಿ ಅಂಗಡಿ ತೆರೆದು ನಮ್ಮ ಗಂಡು ಮಕ್ಕಳಿಗೆ ಕುಡಿತದ ಚಟ ಕಲಿಸುವುದು ಯಾವ ನ್ಯಾಯ. ನಿಮಗೆ ಹಣ ಬೇಕಾದರೆ ನಾವೇ ಕೊಡುತ್ತೇವೆ, ಸರಾಯಿ ಅಂಗಡಿಗಳನ್ನು ಮೊದಲು ಬಂದ್ ಮಾಡಿ ” ರಾಜ್ಯ ಸರ್ಕಾರದ ವಿರುದ್ಧ ತಾಯವ್ವ ನಾಯಿಕ ಗುಡುಗಿದರು.