ಜಗಳೂರು ಪಟ್ಟಣ ಪಂಚಾಯತ್ ನಲ್ಲಿ ಆಯವ್ಯಯ ಮಂಡನೆ

ಸಂಜೆವಾಣಿ ವಾರ್ತೆ
ಜಗಳೂರು.ಮಾ.೮: ಪಟ್ಟಣ ಪಂಚಾಯತಿಯ 2024-25ನೇ ಸಾಲಿನ ಆಯವ್ಯಯ 20,31,30,829 ಕೋಟಿ ಅದಾಯ ನಿರೀಕ್ಷೆಯ ಬಜೆಟ್‌ನ್ನು ತಹಶೀಲ್ದಾರ್ ಹಾಗೂ ಪಪಂ ಆಡಳಿತಾಧಿಕಾರಿ ಚಂದ್ರಶೇಖರನಾಯ್ಕ್ ಮಂಡಿಸಿದರು.ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ 2024-25ನೇ ಸಾಲಿನ ಬಜೆಟ್ ಮಂಡಿಸಿ ಕಳೆದ ಬಾರಿ 16 ಕೋಟಿ ಆಯವ್ಯಯ ಮಂಡನೆಯಾಗಿದ್ದು ಈ ಬಾರಿ 20,31,30,829 ಕೋಟಿ ರೂಗಳ ಬಜೆಟ್ ಮಂಡನೆಯಾಗಿದ್ದು ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತಡ ನೀಡಲಾಗುವುದು. 2024-25ನೇ ಸಾಲಿಗೆ ನಿರೀಕ್ಷಿಸಿದ ಖರ್ಚು 20,29,89,765 ಉಳಿತಾಯದ ಮೊತ್ತ 1,41,064 ರೂಗಳಾಗಿದ್ದು 15ನೇ ಹಣಕಾಸು ಯೋಜನೆಯಡಿ 100 ಲಕ್ಷ ರೂಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ವಿದ್ಯುತ್ ದೀಪ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುವುದು, ಎಸ್‌ಎಫ್‌ಸಿ ವಿಶೇಷ ಅನುದಾನದಡಿ 150 ಲಕ್ಷ ರೂಗಳನ್ನು ಕುಡಿಯುವ ನೀರಿನ ಸ್ಥಾವರ, ನೀರು ಪೂರೈಕೆಗೆ ಸಂಬAಧಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಎಸ್ಸಿ ಮತ್ತು ಎಸ್ಟಿ ಅನುದಾನದಡಿ 44 ಲಕ್ಷ ರೂಗಳನ್ನು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ರಾಜಕಾಲುವೆ, ರಸ್ತೆ, ಚರಂಡಿ, ವಿದ್ಯುತ್ ದೀಪ ಕುಡಿಯುವ ನೀರಿಗೆ ಸಂಬAಧಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ ಕಳೆದ ಬಾರಿ 16 ಕೋಟಿ ಆಯವ್ಯಯ ಮಂಡನೆಯಾಗಿದ್ದು ಈ ಬಾರಿ 20 ಕೋಟಿಯಾಗಿದ್ದು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಪಕ್ಷಬೇಧ ಮರೆತು 18 ಮಂದಿ ಸದಸ್ಯರು ಹೆಚ್ಚು ಒತ್ತು ನೀಡುವ ಮೂಲಕ ಸುಂದರ ನಗರವನ್ನಾಗಿ ಪರಿವರ್ತಿಸಬೇಕಿದೆ ಎಲ್ಲಾ ವಾರ್ಡುಗಳ ನಾಗರೀಕರಿಗೆ ಉತ್ತಮವಾದ ರಸ್ತೆ, ಚರಂಡಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಜೆಸಿಆರ್ ಬಡಾವಣೆಯ ರಸ್ತೆ ಸಂಪೂರ್ಣ ಕಿತ್ತು ಹೋಗಿ ವಾಹನ ಸೇರಿದಂತೆ ಪಾದಚಾರಿಗಳು ಸಹ ಸಂಚರಿಸದAತಾಗಿದೆ ಕೂಡಲೇ ರಸ್ತೆ ಕಾಮಗಾರಿ ಕೈಗೊಳ್ಳಬೇಕು ಪ್ರತಿ ಮಾಹೆ ಕೊನೆಯ ಭಾನುವಾರ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗುತ್ತಿದ್ದೇನೆ ಪಪಂ ಸದಸ್ಯರು ಸಹ ಪಾಲ್ಗೋಳ್ಳಬೇಕು ಈ ಬಜೆಟ್‌ನಲ್ಲಿ ಹಲವಾರು ಯೋಜನೆಗಳಿಗೆ ಹಣ ಮೀಸಲಿರಿಸಲಾಗಿದೆ ಆದರೆ ಕಾರ್ಯರೂಪಕ್ಕೆ ಬಂದಿಲ್ಲವೆAದು ಸದಸ್ಯರ ಗಂಭೀರ ಆರೋಪವಾಗಿದ್ದು ಮುಕ್ತಿ ವಾಹನದ ಅವಶ್ಯಕತೆ ಇದೆ ಆದರೆ ಖರೀದಿಸಿಲ್ಲ ನನ್ನ ಸ್ವಂತ ಖರ್ಚಿನಲ್ಲಿ ಎರಡು ವಾಹನಗಳನ್ನು ಕೊಡುಗೆಯಾಗಿ ನೀಡಲಾಗುವುದು ಒಂದು ವಾಹನ ಮಕ್ತಿವಾನವಾಗಿದ್ದು ಇನ್ನೊಂದು ವಾಹನ ಯಾರಿಗಾದರೂ ಅಪಘಾತವಾಗಿ ಸಾವನ್ನಪ್ಪಿದರೆ ಅಂತಹ ಶವವನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶವನ್ನು ಹೊಂದಲಾಗಿದೆ. ತರಕಾರಿ ಮಾರುಕಟ್ಟೆಯ ಮೇಲೆ ಸೀಟ್ ಅಳವಡಿಸಿ ಮೂಲಭೂತ ಸೌಲಭ್ಯ ಕಲ್ಪಿಸಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು, ಎಸ್‌ಬಿಎಂ ಬ್ಯಾಂಕ್ ಮುಂಭಾಗದಲ್ಲಿ ಮಳಿಗೆ ಸಂಕೀರ್ಣಗಳನ್ನು ನಿರ್ಮಿಸಿದರೆ ಪಪಂಗೆ ಹೆಚ್ಚಿನ ಆದಾಯವಾಗಲಿದೆ ಎಂದ ಅವರು ತಾಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಪೈಪ್‌ಲೈನ್ ಕಾಮಗಾರಿ ಅಂತಿಮ ಹಂತ ತಲುಪಿದ್ದು ಮುಂಗಾರಿನ ವೇಳೆಗೆ ನೀರು ಹರಿದು ಬರುವ ಭರವಸೆ ಇದೆ ನಿವೇಶನ ರಹಿತರನ್ನು ಗುರುತಿಸಿ ಅರ್ಹರಿಗೆ ನಿವೇಶನ ಕಲ್ಪಿಸಿಕೊಡಬೇಕು ಅಲ್ಲದೇ ಪ್ರಮುಖವಾಗಿ ನೂತನ ಪಪಂ ಕಾರ್ಯಾಲಯಕ್ಕೆ ರಾಜಮಾರ್ಗದ ಅವಶ್ಯಕತೆ ಇದ್ದು ಸೈಟ್ ಮಾಲೀಕರ ಮನವೊಲಿಸಿ ದಾವಣಗೆರೆ ರಸ್ತೆಯ ಮೂಲಕ ನೇರ ರಸ್ತೆಯನ್ನು ನಿರ್ಮಿಸಿ ದೇವೇಗೌಡ ಬಡಾವಣೆಯ ಜಾಜ್ ಹಳ್ಳಕ್ಕೆ ಡೆಕ್ ನಿರ್ಮಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಪಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್, ಅಡಳಿತಾಧಿಕಾರಿ ಚಂದ್ರಶೇಖರನಾಯ್ಕ್ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.