ಮಾ.೧೦ ರಂದು ಪಿಂಚಾರ ಸಂಘದ ಪದಗ್ರಹಣ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೮: ಕರ್ನಾಟಕ ರಾಜ್ಯ ನದಾಫ್, ಪಿಂಜಾರ್ ಸಂಘದ ಜಿಲ್ಲಾ ಘಟಕ ವತಿಯಿಂದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಿಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳ ಮತ್ತು ಸದಸ್ಯರುಗಳು ಪದಗ್ರಹಣ ಕಾರ್ಯಕ್ರಮ ಹಾಗೂ ಜಿಲ್ಲಾ ಸಮಾವೇಶವನ್ನು ಮಾ.10 ರ  ಬೆಳಿಗ್ಗೆ 11 ಗಂಟೆಗೆ ಪೈಲ್ವಾನ್ ಚನ್ನಬಸಪ್ಪ ಲೇ-ಔಟ್ ನಲ್ಲಿರುವ ಎಕೆಎಸ್ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ವಿಭಾಗೀಯ ಉಪಾಧ್ಯಕ್ಷ ಡಿ.ಬಿ. ಹಸನ್ ಪೀರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಸಂಘಟನೆಗೆ ಮುಂದಾಗಿದ್ದು, ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಸಮಾವೇಶ ಹೊಂದಿದೆ ಎಂದರು.ಬೆಂಗಳೂರು ಭಾವೈಕ್ಯ ಗುರುಪೀಠದ ಧರ್ಮಗುರು ಸಂಗಮ್ ಪೀರ್ ಚಿಸ್ತಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಘದ ರಾಜ್ಯಾಧ್ಯಕ್ಷ ಹೆಚ್. ಜಲೀಲ್ ಸಾಬ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಜನಪ್ರತಿನಿಧಿಗಳಾದ ಅಬ್ದುಲ್ ಜಬ್ಬಾರ್, ಡಿ.ಜಿ. ಶಾಂತನಗೌಡ, ಬಿ. ದೇವೇಂದ್ರಪ್ಪ, ಕೆ.ಎಸ್. ಬಸವಂತಪ್ಪ, ಬಸವರಾಜ್ ಶಿವಗಂಗಾ, ಮೇಯರ್ ವಿನಾಯಕ ಪೈಲ್ವಾನ್, ಬಿ. ದಾದಾಪೀರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿರುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ, ಹೆಚ್. ರಹೀಂ, ಹುಸೇನ್ ಸಾಬ್ ಮತ್ತಿ, ಮೊಟ್ಟೆ ದಾದಾಪೀರ್, ಟಿ.ಕೆ.  ರಾಜಾಸಾಬ್,ಮಾಗೋಡು ಸುಭಾನಿ, ಮಹಮ್ಮದ್ ‌ಹುಸೇನ್, ಹೊನ್ನೂರು ಸಾಬ್,ಮೌಸಿಂ ಅಕೀಲ್,‌ದಾದಾಪೀರ್, ಶುಕ್ರುಸಾಬ್ ಮೊಹಮ್ಮದ್ ಸೈಫುಲ್ಲಾ  ಉಪಸ್ಥಿತರಿದ್ದರು.